Viral Video: ನೀರಿನಲ್ಲಿ ಆಕ್ಟೋಪಸ್​ಗಳು ಬಣ್ಣ ಬದಲಾಯಿಸುತ್ತವೆ ಎಂದು ತಿಳಿದಿದೆಯಾ? ಇಲ್ಲಿದೆ ನೋಡಿ ವಿಡಿಯೋ

ಊಸರವಳ್ಳಿಗಳು ಹೇಗೆ ಮರೆಮಾಚಲು ಬೆಳಕನ್ನು ಪ್ರತಿಬಿಂಬಿಸುವ ಸಾಮರ್ಥ್ಯವನ್ನು ಹೊಂದಿವೆಯೋ ಅದೇ ರೀತಿ ಪರಭಕ್ಷಕಗಳಿಂದ ರಕ್ಷಣೆ ಪಡೆಯಲು ಬಣ್ಣ ಬದಲಾಯಿಸಿಕೊಳ್ಳುವ ಆಕ್ಟೋಪಸ್‌ಗಳು ವಾಸ್ತವವಾಗಿ ಬೆಳಕನ್ನು ಪ್ರತಿಬಿಂಬಿಸುವ ಗುಣಲಕ್ಷಣಗಳನ್ನು ಹೊಂದಿವೆ.

Viral Video: ನೀರಿನಲ್ಲಿ ಆಕ್ಟೋಪಸ್​ಗಳು ಬಣ್ಣ ಬದಲಾಯಿಸುತ್ತವೆ ಎಂದು ತಿಳಿದಿದೆಯಾ? ಇಲ್ಲಿದೆ ನೋಡಿ ವಿಡಿಯೋ
ಆಕ್ಟೋಪಸ್
Follow us
| Updated By: Rakesh Nayak Manchi

Updated on:Jul 07, 2022 | 2:35 PM

ಪ್ರಾಣಿ ಸಾಮ್ರಾಜ್ಯವು ಆಶ್ಚರ್ಯಗಳಿಂದ ತುಂಬಿದೆ. ಅನೇಕ ಜಾತಿಗಳ ಪ್ರಾಣಿಗಳು ಅವುಗಳದ್ದೇ ಆದ ಅಸಾಧಾರಣ ಸಾಮರ್ಥ್ಯಗಳನ್ನು ಹೊಂದಿವೆ, ಅದು ಪರಭಕ್ಷಕಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಮಾತ್ರವಲ್ಲದೆ ಪ್ರತಿಕೂಲ ಸಂದರ್ಭಗಳಲ್ಲಿ ಅವುಗಳನ್ನು ಸುರಕ್ಷಿತವಾಗಿರಿಸುತ್ತದೆ. ಇದಕ್ಕೆ ನಿದರ್ಶನವೆಂಬಂತೆ ಸಮುದ್ರದ ಆಳದಲ್ಲಿ ವಾಸಿಸುವ ಆಕ್ಟೋಪಸ್‌(Octopus)ಗಳು. ಇವುಗಳು ತಮ್ಮ ದೇಹದ ಬಣ್ಣವನ್ನು ಸಂದರ್ಭಕ್ಕೆ ತಕ್ಕಂತೆ ಬದಲಾಯಿಸುತ್ತದೆ. ಈ ವಿಚಾರ ಅದೆಷ್ಟೋ ಮಂದಿಗೆ ತಿಳಿದಿಲ್ಲ. ಸದ್ಯ ನೀರಿನಲ್ಲಿ ಬಣ್ಣವನ್ನು ಬದಲಾಯಿಸುವ ಆಕ್ಟೋಪಸ್​ನ ವಿಡಿಯೋ ವೈರಲ್ (Video Viral) ಆಗುತ್ತಿದೆ.

ಇದನ್ನೂ ಓದಿ: Viral Photo: ನಿಮ್ಮ ಕಣ್ಣುಗಳಿಗೊಂದು ಸವಾಲು, ಈ ಚಿತ್ರದಲ್ಲಿ ಇರುವ ರಿಮೋಟ್​ ಅನ್ನು ಪತ್ತೆಹಚ್ಚಿ

ನಿಕ್ ರುಬರ್ಗ್‌ ಅವರಿಗೆ ಕ್ರೆಡಿಟ್ ಸಲ್ಲುವ ಈ ವಿಡಿಯೋವನ್ನು ವಂಡರ್ ಆಫ್ ಸೈನ್ಸ್ ಎಂಬ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಒಟ್ಟು 23 ಸೆಕೆಂಡುಗಳು ಇರುವ ಈ ವೀಡಿಯೊದಲ್ಲಿ ಆಕ್ಟೋಪಸ್ ಸಮುದ್ರದ ಆಳದಲ್ಲಿ ಚಲಿಸುತ್ತದೆ ಮತ್ತು ಸುತ್ತಮುತ್ತಲಿನ ಜಲಚರಗಳಿಗೆ ಅನುಗುಣವಾಗಿ ಅದರ ಚರ್ಮದ ಬಣ್ಣವನ್ನು ಬದಲಾಯಿಸುತ್ತಾ ಹೋಗುತ್ತದೆ ಮತ್ತು ಅದು ನೆಲದಲ್ಲಿ ಕುಳಿತುಕೊಳ್ಳುವಾಗಲೂ ಸ್ಥಳಕ್ಕೆ ಹೊಂದುವಂತೆ ಬಣ್ಣ ಬದಲಾಯಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.

ಟ್ವಿಟರ್​ನಲ್ಲಿ ವಿಡಿಯೋ ಹಂಚಿಕೊಂಡ ನಂತರ ಈವರೆಗೆ ವಿಡಿಯೋ 1.5 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದ್ದು, 92ಸಾವಿರಕ್ಕೂ ಹೆಚ್ಚು ಲೈಕ್​ಗಳನ್ನು ಪಡೆದುಕೊಂಡಿದೆ. ಈ ವಿಡಿಯೋ 2016ರಲ್ಲಿ ವೈರಲ್ ಹಾಗ್ ಎಂಬ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಇದೀಗ ಮತ್ತೆ ಇಂಟರ್ನೆಟ್​ನಲ್ಲಿ ಮುನ್ನೆಲೆಗೆ ಬಂದಿದೆ.

ಇದನ್ನೂ ಓದಿ: Viral Video: ‘ಥಟ್ ಥಟ್’ ಎಂಬ ಹೊಸ ಹಾಡಿನೊಂದಿಗೆ ಬಂದ ಗಂಗ್ನಮ್ ಸ್ಟೈಲ್ ಖ್ಯಾತಿಯ Psy, ವೈರಲ್ ವಿಡಿಯೋ ಇಲ್ಲಿದೆ

ವಿಡಿಯೋ ವೀಕ್ಷಣೆ ಮಾಡಿದ ಟ್ವಿಟ್ಟರ್ ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಬಳಕೆದಾರರೊಬ್ಬರು ವಿಭಿನ್ನವಾಗಿ ಪ್ರಶ್ನಿಸಿದ್ದು, “ಹಾಗಾದರೆ ಅದು ಬಣ್ಣವನ್ನು ಮಾತ್ರವಲ್ಲದೆ ಅದರ ಮಾಂಸದ ವಿನ್ಯಾಸವನ್ನು ಬದಲಾಯಿಸುತ್ತದೆಯೇ? ಹೇಗೆ?” ಎಂದು ಕೇಳಿದ್ದಾರೆ. “ಊಸರವಳ್ಳಿಗಳು ಹೇಗೆ ಮರೆಮಾಚಲು ಬೆಳಕನ್ನು ಪ್ರತಿಬಿಂಬಿಸುವ ಹರಳುಗಳನ್ನು ಹೊಂದಿವೆಯೋ ಅದೇ ರೀತಿ ಆಕ್ಟೋಪಸ್‌ಗಳು ವಾಸ್ತವವಾಗಿ ಬೆಳಕನ್ನು ಪ್ರತಿಬಿಂಬಿಸುವ ಗುಣಲಕ್ಷಣಗಳನ್ನು ಹೊಂದಿವೆ” ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.

ಆಕ್ಟೋಪಸ್‌ ತನ್ನ ದೊಡ್ಡ ತಲೆಯನ್ನು ಹೊಂದಿದ್ದು, ಇದನ್ನು ನೋಡಿದಾಗ ಜನರು ಅಚ್ಚಿರಿಗೊಳ್ಳುತ್ತಾರೆ. ಕೆಲವು ವರ್ಷಗಳ ಹಿಂದೆ ಕಾಮನಬಿಲ್ಲಿನ ಬಣ್ಣದ ‘ಬ್ಲ್ಯಾಂಕೆಟ್ ಆಕ್ಟೋಪಸ್​’ನ ವಿಡಿಯೋ ಇಂಟರ್ನೆಟ್​ನಲ್ಲಿ ವೈರಲ್ ಆಗಿತ್ತು. ಇಂಡೋನೇಷ್ಯಾದ ಲೆಂಬೆ ಜಲಸಂಧಿಯಲ್ಲಿ ಸಮುದ್ರ ಪ್ರಾಣಿಯನ್ನು ರಾತ್ರಿಯಲ್ಲಿ ಚಿತ್ರೀಕರಿಸಲಾಗಿದೆ. ಒಂದು ಆಕ್ಟೋಪಸ್ ನೀರಿನ ಮೂಲಕ ಈಜುತ್ತಿರುವುದನ್ನು ವಿಡಿಯೋ ತೋರಿಸಿದೆ. ಕಾಮನಬಿಲ್ಲಿನ ಬಣ್ಣದ, ಹೊದಿಕೆಯಂತಹ ಸಿಲೂಯೆಟ್ ಅನ್ನು ರಚಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಪರಭಕ್ಷಕಗಳನ್ನು ಹೆದರಿಸಲು ಈ ರೀತಿ ಮಾಡುತ್ತದೆ.

ಇದನ್ನೂ ಓದಿ: Viral: ನೀವು ಅನಿವಾಸಿ ಭಾರತೀಯರಾ? ನೆಟ್ಟಿಗರ ಪ್ರಶ್ನೆಗೆ ಉದ್ಯಮಿ ಆನಂದ್ ಮಹೀಂದ್ರಾ ಅವರ ಉತ್ತರ ಏನು ಗೊತ್ತಾ?

Published On - 2:35 pm, Thu, 7 July 22

‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?