ಉತ್ತರ ಪ್ರದೇಶ: ಇತ್ತೀಚಿನ ದಿನಗಳಲ್ಲಿ ಅಪಾರ್ಟ್ ಮೆಂಟ್ ಗಳಲ್ಲಿ ಜೀವನ ನಡೆಸುವುದರಿಂದ ಹತ್ತಾರು ಅಂತಸ್ತುಗಳಿಗೆ ಹೋಗಲು ಮೆಟ್ಟಿಲುಗಳನ್ನು ಹತ್ತಲು ಕಷ್ಟವಾಗುವುದರಿಂದ ಲಿಫ್ಟ್ ಬಳಸುವುದು ಅನಿವಾರ್ಯವಾಗಿರುತ್ತದೆ. ಆದರೆ ಕೆಲವೊಮ್ಮೆ ಲಿಫ್ಟ್‌ನ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಕೆಲವು ಗಂಟೆಗಳ ವರೆಗೆ ಲಿಫ್ಟ್ ನಲ್ಲಿ ಸಿಲುಕಿ ತೊಂದರೆ ಅನುಭವಿಸಬೇಕಾಗುತ್ತದೆ. ಇಂತದ್ದೇ ಘಟನೆಯೊಂದು ಇದೀಗಾ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ತಾಂತ್ರಿಕದೋಷದಿಂದಾಗಿ 20 ನಿಮಿಷಗಳ ಕಾಲ ಪುಟ್ಟ ಬಾಲಕಿ ಲಿಫ್ಟ್ ನಲ್ಲಿ ಸಿಲುಕಿ ಚಡಪಡಿಸುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗಾ ಎಲ್ಲೆಡೆ ವೈರಲ್ ಆಗಿದೆ.
ಈ ಘಟನೆ ಉತ್ತರ ಪ್ರದೇಶದ ಲಕ್ನೋದ ಕುರ್ಸಿ ಜ್ಞಾನೇಶ್ವರ್ ಎನ್‌ಕ್ಲೇವ್ ಅಪಾರ್ಟ್‌ಮೆಂಟ್‌ನಲ್ಲಿ ಸಂಭವಿಸಿದ್ದು, ವಿಡಿಯೋದಲ್ಲಿ ಪುಟ್ಟ ಹುಡುಗಿ ಲಿಫ್ಟ್‌ನ ಬಾಗಿಲುಗಳನ್ನು ಬಡಿಯುವುದನ್ನು ಮತ್ತು ಒದೆಯುವುದನ್ನು ಕಾಣಬಹುದು. ಯಾರಾದರೂ ಬಾಗಿಲು ತೆರೆದು ತನ್ನನ್ನು ಹೊರಗೆ ಕರೆದೊಯ್ಯುವಂತೆ ಜೋರಾಗಿ ಕೂಗುತ್ತಿರುವುದು ಮತ್ತು ಸ್ವಲ್ಪ ಸಮಯದ ನಂತರ ಹುಡುಗಿ ಹೆದರಿ ಅಳುತ್ತಿರುವುದನ್ನು ಕಾಣಬಹುದು. ಮತ್ತೆ ಮತ್ತೆ ಬಾಗಿಲು ತೆರೆಯಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Another news from Lucknow’s Janeshwar Enclave Apartments where an innocent child was stuck in lift for 20 minutes.
The society’s lifts are poorly maintained due to cost-cutting, and I have complained about it multiple times in my own society as well.
— Divya Gandotra Tandon (@divya_gandotra) October 4, 2023
ಇದನ್ನೂ ಓದಿ: ಮುಂಬೈ; ಶಿವಾಜಿಪಾರ್ಕ್ ಈಜುಗೊಳದಲ್ಲಿ ಮರಿಮೊಸಳೆ ಪತ್ತೆ; ಕಡಿತಕ್ಕೆ ಒಳಗಾದ ಸಿಬ್ಬಂದಿ
ಸುಮಾರು 20 ನಿಮಿಷಗಳ ಕಾಲ, ಪುಟ್ಟ ಹುಡುಗಿ ಲಿಫ್ಟ್‌ನಲ್ಲಿ ನರಕಯಾತನೆ ಅನುಭವಿಸಿ, ಬಳಿಕ ಲಿಫ್ಟ್ ಬಾಗಿಲು ತೆರೆದು ಸುರಕ್ಷಿತವಾಗಿ ಹೊರಬಂದಿರುವುದು ತಿಳಿದುಬಂದಿದೆ. ಮಗುವನ್ನು ಲಿಫ್ಟ್‌ನಲ್ಲಿ ಒಬ್ಬಂಟಿಯಾಗಿ ಯಾಕೆ ಬಿಟ್ಟಿರಿ, ಪೋಷಕರ ನಿರ್ಲಕ್ಷ್ಯವಿದು ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. ಅಪಾರ್ಟ್‌ಮೆಂಟ್‌ನಲ್ಲಿ ಲಿಫ್ಟ್‌ನ ಸರಿಯಾದ ನಿರ್ವಹಣೆ ಇಲ್ಲದಿರುವುದಕ್ಕೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಮತ್ತೊಬ್ಬರು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: