Viral Video: ಕಠಿಣ ಡಯಟ್​ಗೆ ಸುಲಭ ಪರಿಹಾರ ಕಂಡುಹುಡುಕಿದ ನಟಿ ಆವಂತಿಕಾ ಹುಂಡಾಲ್, ತಮಾಷೆಯ ವಿಡಿಯೋ ಇಲ್ಲಿದೆ

ಡಯಟ್ ಕಠಿಣವಾಗಿದೆ, ನಾವೂ ಕೂಡ ಶೀರ್ಷಿಕೆಯೊಂದಿಗೆ ಕಿಟ್​ಕ್ಯಾಟ್ ಪ್ಯಾಕೆಟ್ ಆಗ್ರಣಿಸುತ್ತಾ ಬ್ರೊಕೊಲಿ ತುಂಡುಗಳನ್ನು ತಿನ್ನುವ ವಿಡಿಯೋವನ್ನು ನಟಿ ಆವಂತಿಕಾ ಹುಂಡಾಲ್ ಹಂಚಿಕೊಂಡಿದ್ದಾರೆ. ನಟಿಯ ತಮಾಷೆಯ ವಿಡಿಯೋ ಇಲ್ಲಿದೆ ನೋಡಿ.

Viral Video: ಕಠಿಣ ಡಯಟ್​ಗೆ ಸುಲಭ ಪರಿಹಾರ ಕಂಡುಹುಡುಕಿದ ನಟಿ ಆವಂತಿಕಾ ಹುಂಡಾಲ್, ತಮಾಷೆಯ ವಿಡಿಯೋ ಇಲ್ಲಿದೆ
ನಟಿ ಆವಂತಿಕಾ ಹುಂಡಾಲ್
Edited By:

Updated on: Jul 16, 2022 | 10:23 AM

ನಟ ನಟಿಯರು ತಮ್ಮ ನಟನೆಗಾಗಿ ದೇಹ ಫಿಟ್ ಆಗಿರುವಂತೆ ನೋಡಿಕೊಳ್ಳಲು ಜಿಮ್​ಗೆ ಹೋಗುವದರ ಜೊತೆಗೆ ಡಯಟ್ ಕೂಡ ಮಾಡುತ್ತಾರೆ. ಈ ಎರಡರಲ್ಲಿ ಕೆಲವರಿಗೆ ಅತ್ಯಂತ ಕಷ್ಟಕರವಾಗಿರುವುದು ಎಂದರೆ ಡಯಟ್ ಮಾಡುವುದು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದನ್ನು ಮಾಡಿದ ನಟಿ ಆವಂತಿಕಾ ಹುಂಡಾಲ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಆವಂತಿಕಾ ಹುಂಡಲ್ (Avantika Hundaal) ಅವರ ತಮಾಷೆಯ ವಿಡಿಯೋ ವೈರಲ್ (Video Viral) ಆಗುತ್ತಿದೆ.

ವಿಡಿಯೋದಲ್ಲಿ ಇರುವಂತೆ, ಆವಂತಿಕಾ ಹುಂಡಾಲ್ ಒಂದು ಕೈಯಲ್ಲಿ ಬ್ರೊಕೊಲಿ ತುಂಡನ್ನು ಮತ್ತು ಇನ್ನೊಂದು ಕೈಯಲ್ಲಿ ಕಿಟ್​ಕ್ಯಾಟ್ ಚಾಕೊಲೇಟ್ ಪ್ಯಾಕೆಟ್ ಅನ್ನು ಹಿಡಿದಿದ್ದಾರೆ. ನಂತರ ಅವರು ತೆರೆದ ಚಾಕೊಲೇಟ್ ಪ್ಯಾಕೇಟ್​ನ ಪರಿಮಳವನ್ನು ಆಗ್ರಾಣಿಸುತ್ತಾ ಬ್ರಿಕೊಲಿ ತುಂಡನ್ನು ತಿನ್ನುತ್ತಾರೆ.

ಕೆಲ ದಿನಗಳ ಹಿಂದೆಯಷ್ಟೇ ವಿಡಿಯೋ ಹಂಚಿಕೊಂಡ ಆವಂತಿಕಾ, “ಡಯಟ್ ಕಠಿಣವಾಗಿದೆ, ನಾವೂ ಕೂಡ” ಎಂದು ಶೀರ್ಷಿಕೆ ಬರೆದು ನಗುತ್ತಿರುವ ಕಣ್ಣುಗಳ ಎಮೋಜಿಯನ್ನು ಹಾಕಿದ್ದಾರೆ. ಪೋಸ್ಟ್ ಹಂಚಿಕೊಂಡ ನಂತರ 4.4 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದ್ದು, 19ಸಾವಿರಕ್ಕೂ ಹೆಚ್ಚು ಲೈಕ್​ಗಳನ್ನು ಪಡೆದಿದೆ.

ವಿಡಿಯೋ ವೀಕ್ಷಣೆ ಮಾಡಿದ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್‌ಗಳನ್ನು ಮಾಡಿದೆ. ಬಳಕೆದಾರರೊಬ್ಬರು, “ಎಂತಹ ಒಂದು ಐಡಿಯಾ ಸರ್ ಜಿ, ಧನ್ಯವಾದಗಳು” ಎಂದು ಹೇಳಿದ್ದಾರೆ. ಇನ್ನೊಬ್ಬರು, “ಇದನ್ನು ಗಂಭೀರವಾಗಿ ಗಮನಿಸಿದ್ದೇನೆ” ಎಂದು ಮತ್ತೊಬ್ಬರು ತಮಾಷೆ ಮಾಡಿದರು. ಇವರೆಲ್ಲಗಿಂತ ಒಂದು ಹೆಜ್ಜೆ ಮುಂದೆ ಹೋದ ಬಳಕೆದಾರನೊಬ್ಬ, “ಇದು ತುಂಬಾ ಒಳ್ಳೆಯದು. ನಾನು ಇದನ್ನು ರೀಮಿಕ್ಸ್ ಮಾಡಲಿದ್ದೇನೆ. ಹಹ್ಹ,” ಎಂದು ಹೇಳಿದ್ದಾನೆ. ಮಗದೊಬ್ಬರು ಪ್ರತಿಕ್ರಿಯಿಸಿ, “ಹಹಾ ಖಂಡಿತವಾಗಿಯೂ ಇದನ್ನು ಪ್ರಯತ್ನಿಸುತ್ತಿದ್ದೇನೆ” ಎಂದು ಹಂಚಿಕೊಂಡಿದ್ದಾರೆ.

Published On - 10:20 am, Sat, 16 July 22