Viral Photo: ಮಾನವನಂತೆ ಹಲ್ಲುಗಳಿರುವ ಏಡಿ ಪತ್ತೆ, ಮನುಕುಲ ಅಚ್ಚರಿಗೊಳ್ಳುವ ವೈರಲ್ ಫೋಟೋ ಇಲ್ಲಿದೆ
ಮಾನವನಂತೆ ಹಲ್ಲುಗಳಿರುವ ಏಡಿ ರಷ್ಯಾದಲ್ಲಿ ಪತ್ತೆಯಾಗಿದ್ದು, ಇದರ ಫೋಟೋ ವೈರಲ್ ಆಗುತ್ತಿದೆ. ಫೋಟೋ ನೋಡಿದ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.
ಈ ಜಗತ್ತೇ ಒಂದು ವಿಸ್ಮಯ, ಒಂದಲ್ಲಾ ಒಂದು ರೀತಿಯಲ್ಲಿ ಅಚ್ಚರಿಗಳು ನಡೆಯುತ್ತಲೇ ಇರುತ್ತವೆ ಮತ್ತು ಅಚ್ಚರಿಗಳಿಗೆ ಸಾಕ್ಷಿಯಾಗುತ್ತಲೇ ಇರುತ್ತದೆ. ಇಂತಹ ಅಚ್ಚರಿಗಳ ಸಂಗತಿಗಳಿಗೆ ಸಾಮಾಜಿಕ ಜಾಲತಾಣಗಳು ಹಾಟ್ಸ್ಪಾಟ್ ಆಗಿದ್ದು, ನೆಟ್ಟಿಗರು ಅಚ್ಚರಿಗೊಳಿಸುವಂತಹ ವಿಡಿಯೋಗಳು, ಫೋಟೋಗಳು ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಇಡೀ ಮಾನವ ಕುಲವೇ ಅಚ್ಚರಿಗೊಳ್ಳುವಂತಹ ಜೀವಿಯ ಫೋಟೋವೊಂದು ವೈರಲ್ ಆಗುತ್ತಿದೆ.
ವೈರಲ್ ಫೋಟೋದಲ್ಲಿ ಇರುವಂತೆ, ಏಡಿಯೊಂದರ ಬಾಯಿಯಲ್ಲಿ ಮಾನವನ ಹಲ್ಲುಗಳಂತೆ ಹಲ್ಲುಗಳು ಕಾಣಿಸಿಕೊಂಡಿದೆ. ಈ ಏಡಿ ರಷ್ಯಾದಲ್ಲಿ ಪತ್ತೆಯಾಗಿದೆ. ಇದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವಾಗ, “ಏಡಿಗಳು… ಆದರೂ, ಅವುಗಳಲ್ಲಿ ಯಾವುದೋ ಆಕರ್ಷಕ ಮತ್ತು ವಿಕರ್ಷಣೆಯಿದೆ. ತಾಯಿ ಪ್ರಕೃತಿ ತನ್ನ ಕೈಲಾದಷ್ಟು ಮಾಡಿದೆ” ಎಂದು ಫೋಟೋಗೆ ಶೀರ್ಷಿಕೆ ನೀಡಲಾಗಿದೆ.
ಸದ್ಯ ಏಡಿಯ ಫೋಟೋ ವೈರಲ್ ಆಗುತ್ತಿದ್ದು, ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಈ ಫೋಟೋ 10,000 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಮಾನವನಂತಿರುವ ಹಲ್ಲುಗಳಿಂದ ಕೂಡಿದ ಏಡಿಯನ್ನು ನೋಡಿದ ನೆಟ್ಟಿಗರು ತಬ್ಬಿಬ್ಬಾದರು. ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿ, “ಏಡಿಗಳು ಪುನರ್ಜನ್ಮ ಪಡೆದ ಮನುಷ್ಯರಾಗಿದ್ದರೆ ಏನು?” ಎಂದಿದ್ದಾರೆ.
ಅದಾಗ್ಯೂ 2019ರಲ್ಲಿ ಏಡಿಯ ಅಚ್ಚರಿಯ ವಿಡಿಯೋವೊಂದು ಭಾರೀ ವೈರಲ್ ಆಗಿತ್ತು. 0910 ಟ್ವಿಟ್ಟರ್ ಖಾತೆಯಲ್ಲಿ ದೊಡ್ಡ ಗಾತ್ರದ ಏಡಿಯ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿತ್ತು. ಈ ವಿಡಿಯೋದಲ್ಲಿ ಏಡಿ ಭಾರೀ ದೊಡ್ಡ ಗಾತ್ರದಲ್ಲಿ ಕಾಣಿಸಿಕೊಂಡಿದೆ. ಅದಾಗ್ಯೂ ಈ ಏಡಿಯನ್ನು ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದರು. ಏಕೆಂದರೆ, ಈ ಏಡಿಯಲ್ಲೂ ಮಾನವಂತೆ ಹಲ್ಲುಗಳನ್ನು ಹೊಂದಿತ್ತು.