Viral Video : ಮುತ್ತಿಗೆ ಎಷ್ಟೊಂದು ಬೆಲೆ ಇದೆಯಲ್ಲವೇ? ಮಕ್ಕಳಿಂದ ಹಿಡಿದು ಮುಪ್ಪಾನುಮುದುಕರವರೆಗೂ ಮುತ್ತು (Kiss) ಮನಸ್ಸನ್ನು ಅರಳಿಸುತ್ತದೆ. ಈ ವಿಡಿಯೋ ನೋಡಿ. ಇಲ್ಲಿರುವ ಈ ಪುಟ್ಟಿ, ಪುಟ್ಟನಿಗೆ ಮುತ್ತು ಕೊಡುತ್ತಾಳೆ. ಖುಷಿಯಿಂದ ಈ ಪುಟ್ಟ ಕುಣಿದಾಡಿ, ನೆಲಕ್ಕೆ ಬಾಗಿ ಸಂಭ್ರಮಿಸುತ್ತಾನೆ. ವೈರಲ್ ಆಗಿರುವ ಈ ವಿಡಿಯೋ ನೋಡಿ ನೆಟ್ಟಿಗರ ಮನಸ್ಸು ಮುದಗೊಂಡಿದೆ. ಈ ಗುರುವಾರವನ್ನು ಶುಭವಾಗಿಸಲು ಇದಕ್ಕಿಂತ ಒಳ್ಳೆಯ ವಿಡಿಯೋ ಬೇಕೆ?
His first kiss.. ? pic.twitter.com/6BSV8XwdpP
ಇದನ್ನೂ ಓದಿ— Buitengebieden (@buitengebieden) January 11, 2023
ಈತನಕ ಈ ವಿಡಿಯೋ ಅನ್ನು 3 ಲಕ್ಷಕ್ಕಿಂತಲೂ ಹೆಚ್ಚು ಜನರು ನೋಡಿದ್ಧಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ. ಎಮೋಟಿಕಾನ್ಗಳ ಸುರಿಮಳೆಗಂತೂ ಲೆಕ್ಕವೇ ಇಲ್ಲ. ಎಂಥವರನ್ನೂ ಈ ವಿಡಿಯೋ ಉಲ್ಲಸಿತಗೊಳಿಸುತ್ತದೆ ಎನ್ನುತ್ತಿದ್ಧಾರೆ ಹಲವರು. ಆಹಾ ಎಂಥ ಮುಗ್ಧತೆ ಮತ್ತು ಖುಷಿ ಇಲ್ಲಿ, ನಮಗೂ ಸ್ವಲ್ಪ ರವಾನಿಸಿ ಎನ್ನುತ್ತಿದ್ಧಾರೆ ಕೆಲವರು. ಮಕ್ಕಳೇ ಇದೇ ಖುಷಿ ನಿಮ್ಮ ಬದುಕಿನುದ್ದಕ್ಕೂ ಇರಲಿ. ಈ ಉತ್ಸಾಹವನ್ನು ಎಂದೂ ಕಳೆದುಕೊಳ್ಳಬೇಡಿ ಎಂದು ಹಾರೈಸಿದ್ಧಾರೆ ಅನೇಕರು.
ಮಕ್ಕಳು ಏನು ಮಾಡಿದರೂ ಚೆಂದವೇ. ಮನಸ್ಸನಲ್ಲಿ ನೀವೀಗ ಹೀಗೆ ಅಂದುಕೊಳ್ಳುತ್ತಿರಬಹುದು!
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:33 pm, Thu, 12 January 23