Kannada News Trending Viral Video A man trapped in a crane at a height of many feet video gone viral
Viral Video: ಹಲವು ಅಡಿಗಳಷ್ಟು ಎತ್ತರದಲ್ಲಿ ಕ್ರೇನ್ನಲ್ಲಿ ಸಿಕ್ಕಿಹಾಕಿಕೊಂಡ ವ್ಯಕ್ತಿ, ಮುಂದೇನಾಯ್ತು ಎಂದು ಈ ವಿಡಿಯೋ ನೋಡಿ
ಹಲವಾರು ಅಡಿಗಳಷ್ಟು ಎತ್ತರದಲ್ಲಿ ಕಾರ್ಮಿಕರೊಬ್ಬರು ಕ್ರೇನ್‌ಗೆ ಸಿಕ್ಕಿಹಾಕಿ ನೇತಾಡಿಕೊಂಡು ಕೆಳಗಿಳಿದ ಹೃದಯ ನಡುಗಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ.
ಕ್ರೇನ್ನಲ್ಲಿ ನೇತಾಡಿದ ಕಾರ್ಮಿಕ
Follow us on
ಕಟ್ಟಡ ಕಾರ್ಮಿಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕಟ್ಟಡಗಳ ಕೆಲಸ ಮಾಡುತ್ತಾರೆ. ಕೆಲವೊಮ್ಮೆ ನಡೆಯುವ ಸಣ್ಣ ತಪ್ಪು ಕೂಡ ಅವರ ಜೀವಕ್ಕೆ ಕುತ್ತು ತರುತ್ತದೆ. ಅದಾಗ್ಯೂ ಕೆಲಸಗಾರನೊಬ್ಬ ಹಲವು ಅಡಿಗಳಷ್ಟು ಎತ್ತರದಲ್ಲಿ ಕ್ರೇನ್ನಲ್ಲಿ ಸಿಕ್ಕಿಹಾಕಿಕೊಂಡು ನೇತಾಡುವ ಹೃದಯ ಮಿಡಿಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ಈ ವಿಡಿಯೋ ಟೊರೊಂಟೊದಲ್ಲಿ ಸೆರೆಹಿಡಿಯಲಾಗಿದೆ.
ಟೊರೊಂಟೊ ನಗರದ ಡೌನ್‌ಟೌನ್‌ನಲ್ಲಿನ ನಿರ್ಮಾಣ ಹಂತದ ಕಟ್ಟಡದ ಸ್ಥಳದಲ್ಲಿ, ಕ್ರೇನ್ನಲ್ಲಿ ಹಲವಾರು ಅಡಿಗಳಷ್ಟು ಎತ್ತರದಿಂದ ವ್ಯಕ್ತಿಯೊಬ್ಬರು ನೇತಾಡುವುದನ್ನು ಈ ವಿಡಿಯೋ ತೋರಿಸುತ್ತದೆ. ಬುಧವಾರದಂದು ಈ ಘಟನೆ ನಡೆದಿದ್ದು, ಅಲ್ಲಿದ್ದವರು ಈ ದೃಶ್ಯವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ನೋಡುವಾಗ ಪ್ರತಿಯೊಬ್ಬರ ಹೃದಯವೂ ಮಿಡಿಯುತ್ತದೆ. ಮಾತ್ರವಲ್ಲದೆ ವಿಡಿಯೋ ವೀಕ್ಷಿಸಿದ ನೆಟ್ಟಿಗರು ಶಾಕ್ ಆಗಿದ್ದಾರೆ.
ಕ್ರೇನ್ನಲ್ಲಿ ಹಗ್ಗದೊಂದಿಗೆ ನೇತಾಡಿದ ಕಾರ್ಮಿಕನನ್ನು ಕ್ರೇನ್ ಚಾಲಕ ಸುರಕ್ಷಿತವಾಗಿ ಕೆಳಗಿಳಿಸಿದ್ದಾನೆ. ಅವರು ಗಂಭೀರವಾಗಿ ಗಾಯಗೊಂಡಿಲ್ಲ ಎಂದು ಸಿಬಿಸಿ ನ್ಯೂಸ್ ವರದಿ ಮಾಡಿದೆ. ಆದರೆ ಕೆಲಸಗಾರ ನೆಲಕ್ಕೆ ಇಳಿಯುವವರೆಗೂ ಎಲ್ಲರೂ ಉಸಿರು ಬಿಗಿ ಹಿಡಿದಿದ್ದರು. ಸಿಬಿಸಿ ವರದಿಯ ಪ್ರಕಾರ, ಕ್ರೇನ್‌ಗೆ ಲೋಡ್ ಅನ್ನು ಜೋಡಿಸಿದ ನಂತರ ಟ್ಯಾಗ್‌ಲೈನ್‌ಗೆ ಕಾರ್ಮಿಕನ ಕೈ ಸಿಕ್ಕಿಕೊಂಡಿದೆ ಎಂದು ಯೋಜನೆಯ ಉಸ್ತುವಾರಿ ನಿರ್ಮಾಣ ಕಂಪನಿಯ ವಕ್ತಾರರು ತಿಳಿಸಿದ್ದಾರೆ. ಘಟನೆಯ ನಂತರ ವಲಸೆ, ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವಾಲಯವು ತನಿಖಾಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿದೆ.
ಘಟನೆಯ ವಿಡಿಯೋವನ್ನು ‘ಮೈ ಎಸ್ 1’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಇದುವರೆಗೆ 71,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅಲ್ಲದೆ ಎರಡೂವರೆ ಸಾವಿರಕ್ಕೂ ಹೆಚ್ಚು ಮಂದಿ ಲೈಕ್ಗಳನ್ನು ಮಾಡಿದ್ದಾರೆ. ಕೆಲವರು ಈ ಬಗ್ಗೆ ಹಾಸ್ಯವಾಗಿ ಕಾಮೆಂಟ್ ಮಾಡಿದರೆ, ಇನ್ನು ಕೆಲವರು ಮುಂದೆ ಇಂಥ ಘಟನೆಗಳು ನಡೆಯದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.