ನೀವು ಪ್ರಸಿದ್ಧ ತಾಣಗಳನ್ನು ನೋಡಲು ಬಯಸುತ್ತಿದ್ದರೆ ಕನಕಪುರದ ಮುಖ್ಯ ರಸ್ತೆಯಿಂದ 80 ಅಡಿ ರಸ್ತೆ ರಘುವನಹಳ್ಳಿಗೆ ಭೇಟಿ ನೀಡಿ. ಇಲ್ಲಿ ಬಿಡಿಎ ಮತ್ತು ಬಿಬಿಎಂಪಿಯಿಂದ ನಿರಂತರವಾಗಿ ಕಡೆಗಣಿಸಲ್ಪಟ್ಟ ಹತ್ತು ವರ್ಷಗಳ ಹಳೆಯ ಹೊಂಡ ಕಾಣಸಿಗುತ್ತದೆ. ಹಾಗಂತ ನೆಟ್ಟಿಗರು ವಿಡಿಯೋ ಹಂಚಿಕೊಂಡು ಹೇಳಿಕೊಂಡಿದ್ದಾರೆ. ‘ಐ ಚೇಂಜ್ ಹೆಮ್ಮಿಗೆಪುರ’ ಎಂಬ ಟ್ವಿಟ್ಟರ್ ಹ್ಯಾಂಡಲ್, ರಸ್ತೆಯ ಮಧ್ಯದಲ್ಲಿ ಬೃಹತ್ ಹೊಂಡದ ವೀಡಿಯೊವನ್ನು ಹಂಚಿಕೊಂಡು, “ಈ ಪ್ರಸಿದ್ಧ 10 ವರ್ಷಗಳ ಹಳೆಯ ಹೊಂಡ ಕನಕಪುರ ಮುಖ್ಯ ರಸ್ತೆಯಿಂದ 80 ಅಡಿ ರಸ್ತೆ ರಘುವನಹಳ್ಳಿಯಲ್ಲಿದೆ. BDA ಮತ್ತು BBMP ಎರಡರಿಂದಲೂ ನಿರಂತರವಾಗಿ ನಿರ್ಲಕ್ಷಿಸಲ್ಪಟ್ಟಿರುವ ಕಾರಣ, ಈ ಸ್ಥಳವು ಸರಿಯಾದ ಸಮಯದಲ್ಲಿ ಭೇಟಿ ನೀಡಲು ಪ್ರಸಿದ್ಧವಾದ ತಾಣವಾಗಲು ನಾವು ಎದುರು ನೋಡುತ್ತಿದ್ದೇವೆ” ಎಂದು ಶೀರ್ಷಕೆ ಬರೆಯಲಾಗಿದೆ.
This famous 10 year old pothole is at 80 ft road Raghuvanahalli off Kanakapura main road. Due to continuously neglected by both BDA and BBMP we look forward this spot becoming one the famous spot to visit in due course pic.twitter.com/UASptJnYrr
— I CHANGE Hemmigepura (@hemmigepura) July 30, 2022
ರಸ್ತೆಯಲ್ಲಿ ಹೊಂಡ ಬಿದ್ದು ಹತ್ತು ವರ್ಷಗಳು ಕಳೆದರೂ ಸರಿಪಡಿಸದಂತೆ ನಿರ್ಲಕ್ಷ್ಯ ತೋರಲಾಗಿದೆ ಎಂದು ವೈರಲ್ ವಿಡಿಯೋದ ಮೂಲಕ ಟೀಕಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಹೊಂಡಕ್ಕೆ 10 ನೇ ಹುಟ್ಟುಹಬ್ಬದ ಸಂಭ್ರಮವನ್ನು ಆಯೋಜಿಸಲು ಮುಂದಾಗಿದ್ದಾರೆ. ವಿಡಿಯೋಗೆ ಪ್ರತಿಕ್ರಿಯೆ ನೀಡಿದ capt_hinsight ಎಂಬ ಟ್ವಿಟರ್ ಖಾತೆದಾರ, ಹೊಂಡಕ್ಕೆ ಹುಟ್ಟುಹಬ್ಬ ಆಯೋಜಿಸುವ ಬಗ್ಗೆ ಪ್ರಸ್ತಾಪ ಮಾಡುತ್ತಾ ಇದ್ದೇವೆ. ನಾವು ಮಾಡಬಹುದಾ ಮಾಡಬಹುದಾ ಬೆಂಗಳೂರು ಟ್ವಿಟ್ಟರ್ ?” ಎಂದು ಹೇಳಿಕೊಂಡಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, “ಈ ಸ್ಥಳವನ್ನು BDA ನ ಪರಂಪರೆಯ ಸ್ಮಾರಕವೆಂದು ಘೋಷಿಸಬೇಕು” ಎಂದು ಬರೆದುಕೊಂಡಿದ್ದಾರೆ.
Proposing a birthday party for the pothole .. can we make it happen, Bangalore Twitter? @peakbengaluru @WeAreBangalore
— AJ (@capt_hinsight) July 31, 2022
ಉತ್ತಮ ರಸ್ತೆಗಳಿಗಾಗಿ ಈ ಹಿಂದೆ ಬೆಂಗಳೂರಿನ ಅಂಜನಪುರ ರಸ್ತೆಯಲ್ಲಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ರಸ್ತೆಯಲ್ಲಿ ಯಮರಾಜನ ವೇಷ ಧರಿಸಿದ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರನ್ನು ನೋಡಿದರು. ಈ ವೈರಲ್ ಪ್ರತಿಭಟನೆಯು ನಗರದಲ್ಲಿ ಹೊಂಡಗಳಿಂದ ಕೂಡಿದ ರಸ್ತೆಗಳು ಹೇಗೆ ಸಾವಿನ ಹಾಸಿಗೆಯಾಗಿ ಮಾರ್ಪಟ್ಟಿವೆ ಎಂಬುದನ್ನು ಅಧಿಕಾರಿಗಳಿಗೆ ತಿಳಿಸುವ ಸಾಂಕೇತಿಕ ಸಂದೇಶವಾಗಿದೆ ಎಂದು ಹೇಳಲಾಗಿದೆ. ಮಾರತ್ತಹಳ್ಳಿಯ ಸ್ಪೈಸ್ ಗಾರ್ಡನ್ ಲೇಔಟ್‌ನಲ್ಲಿ 200 ಮೀಟರ್ ರಸ್ತೆಯಲ್ಲಿ 40 ಗುಂಡಿಗಳ ವಿಡಿಯೋವೊಂದು ವೈರಲ್ ಆಗಿತ್ತು.
Published On - 4:38 pm, Mon, 1 August 22