Viral Video: ಮದುವೆ ದಿನ ಅಪ್ಪನ ಜೊತೆಗೆ ವೇದಿಕೆಯ ಮೇಲೆ ಕುಣಿದ ಮಗಳು; ಹೃದಯಸ್ಪರ್ಶಿ ವಿಡಿಯೊ ವೈರಲ್

ವಿಡಿಯೊದಲ್ಲಿ ಗಮನಿಸುವಂತೆ ವಧು ತಂದೆಯೊಂದಿಗೆ ವೇದಿಕೆಯ ಮೇಲೆ ನೃತ್ಯ ಮಾಡುತ್ತಿದ್ದಾಳೆ. ತಂದೆ ಮಗಳ ಬಾಂಧವ್ಯ ಸಾರುವ ದೃಶ್ಯ ಇದೀಗ ಸಕತ್​ ವೈರಲ್ ಆಗಿದೆ.

Viral Video: ಮದುವೆ ದಿನ ಅಪ್ಪನ ಜೊತೆಗೆ ವೇದಿಕೆಯ ಮೇಲೆ ಕುಣಿದ ಮಗಳು; ಹೃದಯಸ್ಪರ್ಶಿ ವಿಡಿಯೊ ವೈರಲ್
ಮದುವೆ ದಿನ ಅಪ್ಪನ ಜೊತೆಗೆ ವೇದಿಕೆಯ ಮೇಲೆ ಕುಣಿದ ವಧು
Edited By:

Updated on: Nov 08, 2021 | 12:39 PM

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೊಗಳು ಹರಿದಾಡುತ್ತವೆ. ಅವುಗಳಲ್ಲಿ ಕೆಲವು ಹೆಚ್ಚು ಮನ ಗೆಲ್ಲುತ್ತವೆ. ಇದೀಗ ವೈರಲ್ ಆದ ವಿಡಿಯೊದಲ್ಲಿ ಗಮನಿಸುವಂತೆ ವಧು ತಂದೆಯೊಂದಿಗೆ ವೇದಿಕೆಯ ಮೇಲೆ ನೃತ್ಯ ಮಾಡುತ್ತಿದ್ದಾಳೆ. ತಂದೆ ಮಗಳ ಬಾಂಧವ್ಯ ಸಾರುವ ದೃಶ್ಯ ಇದೀಗ ಸಕತ್​ ವೈರಲ್ ಆಗಿದೆ. ಮಗಳೊಂಂದಿಗೆ ಅಪ್ಪ ನೃತ್ಯ ಮಾಡುತ್ತಿರುವ ದೃಶ್ಯ ಸುಮಾರು 2,400 ಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ.

ವಿವಾಹ ಅಂದಾಕ್ಷಣ ಮೋಜು, ಮಸ್ತಿ ಎಲ್ಲವೂ ಇರುತ್ತದೆ. ಸಂಗೀತ ಕಾಯ್ರಕ್ರಮಗಳನ್ನು ಏರ್ಪಡಿಸಿ ಮದುವೆ ಸಮಾರಂಭವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಬೇರೊಂದು ಮನೆಗೆ ಸೊಸೆಯಾಗಿ ಹೋಗುವ ವಧು ಅಪ್ಪನ ಜೊತೆಗೆ ನೃತ್ಯ ಮಾಡುತ್ತಿರುವ ಹೃದಯಸ್ಪರ್ಶಿ ವಿಡಿಯೊ ಇದೀಗ ಫುಲ್ ವೈರಲ್ ಆಗಿದೆ. ವಧು ತನ್ನ ತಂದೆಯೊಂದಿಗೆ ಅದ್ಭುತವಾಗಿ ನೃತ್ಯ ಮಾಡುತ್ತಿದ್ದಾಳೆ. ತಂದೆ ಮಗಳ ಸುಂದರವಾದ ಭಾಂದವ್ಯ ವ್ಯಕ್ತವಾಗಿದೆ. ಈ ದೃಶ್ಯವನ್ನು ನೆಟ್ಟಿಗರು ಇಷ್ಟಪಟ್ಟಿದ್ದು, ಫುಲ್ ವೈರಲ್ ಆಗಿದೆ.

ವಿಡಿಯೊವನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ. ವೆಡ್ಡಿಂಗ್ ಕೊರಿಯಾಗ್ರಫರ್ಸ್ ಎಂಬ ಪುಟದಿಂದ ವಿಡಿಯೊ ಹಂಚಿಕೊಳ್ಳಲಾಗಿದೆ. ವಧು ಸುಂದರವಾದ ಲೆಹೆಂಗಾ ತೊಟ್ಟು ನೃತ್ಯ ಮಾಡಿದ್ದಾಳೆ. ವಿಡಿಯೊದಿಂದ ವಧು ತನ್ನ ತಂದೆಯೊಂದಿಗೆ ನೃತ್ಯ ಮಾಡುತ್ತಿದ್ದಾಳೆ. ನೆಟ್ಟಿಗರು ವಿಡಿಯೊವನ್ನು ಹೆಚ್ಚಿ ಇಷ್ಟಪಟ್ಟಿದ್ದು ಎಮೊಜಿಗಳನ್ನು ಕಳುಹಿಸುವ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ. ವಿಡಿಯೊ ಸುಮಾರು 2,400 ಕ್ಕೂ ಹೆಚ್ಚಿನ ಲೈಕ್ಸ್​ಗಳನ್ನು ಗಳಿಸಿಕೊಂಡಿದೆ.

ಇದನ್ನೂ ಓದಿ:

Viral Video: ಮನಿಕೆ ಮಗೆ ಹಿತೆ ಹಾಡಲು ಪ್ರಯತ್ನಿಸಿದ ವ್ಯಕ್ತಿ! ವಿಡಿಯೊ ಮಜವಾಗಿದೆ ನೀವೇ ನೋಡಿ

Viral Video: ಟ್ರಾಫಿಕ್ ಕ್ಯಾಮೆರಾ ಮುಂದೆ ಬಂದು ಪೋಸ್ ಕೊಟ್ಟ ಮುದ್ದಾದ ಗಿಳಿ; ವಿಡಿಯೊ ವೈರಲ್

Published On - 12:37 pm, Mon, 8 November 21

Web contact

TV9 Kannada

Read More
Follow Us