Viral Video: ಕಾಲುವೆಗೆ ಬಿದ್ದಿದ್ದ ನಾಯಿಯನ್ನು ಜೆಸಿಬಿಯಲ್ಲಿ ಕಾಪಾಡಿದ ಕಾರ್ಮಿಕ; ವಿಡಿಯೋಗೆ ಭಾರೀ ಮೆಚ್ಚುಗೆ

ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ನಾಯಿಯನ್ನು ಕಟ್ಟಡ ಕಾರ್ಮಿಕರು ತಮ್ಮ ಪ್ರಾಣ ಲೆಕ್ಕಿಸದೆ ಚರಂಡಿಯಿಂದ ಹೊರತೆಗೆದು ರಕ್ಷಿಸಿದ್ದಾರೆ.

Viral Video: ಕಾಲುವೆಗೆ ಬಿದ್ದಿದ್ದ ನಾಯಿಯನ್ನು ಜೆಸಿಬಿಯಲ್ಲಿ ಕಾಪಾಡಿದ ಕಾರ್ಮಿಕ; ವಿಡಿಯೋಗೆ ಭಾರೀ ಮೆಚ್ಚುಗೆ
ಜೆಸಿಬಿಯಲ್ಲಿ ನಾಯಿಯನ್ನು ರಕ್ಷಿಸಿದ ಕಾರ್ಮಿಕ
Updated By: ಸುಷ್ಮಾ ಚಕ್ರೆ

Updated on: Apr 25, 2022 | 2:12 PM

ಮೂಕಪ್ರಾಣಿಗಳು ಸದಾ ಪ್ರೀತಿಗಾಗಿ ಹಂಬಲಿಸುತ್ತವೆ. ಅವುಗಳಿಗೆ ಮಾತನಾಡಲು ಬರದೇ ಇದ್ದರೂ ತಮ್ಮ ಪ್ರೀತಿಯನ್ನು ಅಭಿವ್ಯಕ್ತಿಸುವುದರಲ್ಲಿ ಅವುಗಳು ಎಂದಿಗೂ ಹಿಂದುಳಿಯುವುದಿಲ್ಲ. ಹಾಗೇ ಮನುಷ್ಯರಲ್ಲೂ ನಾಯಿಗಳನ್ನು ಮಕ್ಕಳಂತೆ ಪ್ರೀತಿಸುವವರು ಕೂಡ ಇದ್ದಾರೆ. ಈಕ್ವೆಡಾರ್‌ನ ಕಟ್ಟಡ ಕಾರ್ಮಿಕರೊಬ್ಬರು ಅಗೆಯುವ ಯಂತ್ರದ ಸಹಾಯದಿಂದ ನಾಯಿಯನ್ನು ಕಾಲುವೆಯಿಂದ ರಕ್ಷಿಸುವ ಮೂಲಕ ಮಾನವೀಯತೆಗೆ ಮಾದರಿಯಾಗಿದ್ದಾರೆ. ವೈರಲ್ (Viral Video) ಆಗಿರುವ ಈ ವಿಡಿಯೋ ಇಂಟರ್ನೆಟ್ ಬಳಕೆದಾರರ ಹೃದಯವನ್ನು ಕಲಕಿದೆ. ಜಾಣತನದಿಂದ ಕಟ್ಟಡ ಕಾರ್ಮಿಕನು ನಾಯಿಯನ್ನು ಮೇಲೆತ್ತಿ ಕಾಪಾಡಿರುವ ಈ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

“ನೀರಿನ ಕಾಲುವೆಗೆ ಬಿದ್ದ ನಾಯಿಯನ್ನು ರಕ್ಷಿಸಲು ನಿರ್ಮಾಣ ಸಿಬ್ಬಂದಿ ಯಶಸ್ವಿಯಾಗಿದ್ದಾರೆ” ಎಂದು ಈ ಪೋಸ್ಟ್‌ನ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋವನ್ನು ಶೇರ್ ಮಾಡಿದಾಗಿನಿಂದ ಇಂಟರ್ನೆಟ್​ನಲ್ಲಿ ಭಾರೀ ಚರ್ಚೆಯಾಗುತ್ತಿದೆ. ಕಾಲುವೆಯನ್ನು ಅಗೆಯುವ ಕ್ರೇನ್​ನ ಬಕೆಟ್ ಮೇಲೆ ಹತ್ತುತ್ತಿರುವ ವ್ಯಕ್ತಿಯನ್ನು ಈ ವಿಡಿಯೋದಲ್ಲಿ ನೋಡಬಹುದು. ಆ ಕ್ರೇನ್ ಮೂಲಕ ಅವನನ್ನು ಕಾಲುವೆಯ ಮಧ್ಯಕ್ಕೆ ಕರೆದೊಯ್ಯಲಾಗುತ್ತದೆ. ಆಗ ನಾಯಿ ಅವನ ಹತ್ತಿರ ಬರುತ್ತಿದ್ದಂತೆ ಆತ ನಾಯಿಯನ್ನು ಹಿಡಿದು ತನ್ನೊಂದಿಗೆ ಕ್ರೇನ್​ನ ಬಕೆಟ್​ಗೆ ಹಾಕಿಕೊಳ್ಳುತ್ತಾನೆ. ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ನಾಯಿಯನ್ನು ಕಟ್ಟಡ ಕಾರ್ಮಿಕರು ತಮ್ಮ ಪ್ರಾಣ ಲೆಕ್ಕಿಸದೆ ಚರಂಡಿಯಿಂದ ಹೊರತೆಗೆದು ರಕ್ಷಿಸಿದ್ದಾರೆ.

ಈ ವಿಡಿಯೋಗೆ ಈಗಾಗಲೇ ಲಕ್ಷಾಂತರ ವ್ಯೂ ಸಿಕ್ಕಿದೆ. ಇಂಟರ್ನೆಟ್ ಬಳಕೆದಾರರು ಆ ಕಾರ್ಮಿಕನ ಧೈರ್ಯ ಮತ್ತು ಮಾನವೀಯತೆಯನ್ನು ಶ್ಲಾಘಿಸಿದ್ದಾರೆ. ಈ ವಿಡಿಯೋ ಸಾಕಷ್ಟು ಶೇರ್ ಕೂಡ ಆಗಿದೆ.

ಇದನ್ನೂ ಓದಿ: Viral Video: ಜಮ್ಮುವಿನಲ್ಲಿ ಸೈನಿಕರಿದ್ದ ಬಸ್ ಮೇಲೆ ಉಗ್ರರ ದಾಳಿಯ ಶಾಕಿಂಗ್ ವಿಡಿಯೋ ವೈರಲ್

Viral Video: ಸಬರಮತಿ ಆಶ್ರಮದಲ್ಲಿ ಚರಕ ತಿರುಗಿಸಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್; ವಿಡಿಯೋ ವೈರಲ್

Published On - 2:11 pm, Mon, 25 April 22