Viral Video: ಮೆಟ್ರೋದಲ್ಲಿ ಅನೌನ್ಸ್​ಮೆಂಟ್ ಬದಲು ಭಿತ್ತರವಾಯ್ತು ಹರಿಯಾಣವಿ ಗೀತೆ, ಅಚ್ಚರಿಗೊಳಗಾದ ಪ್ರಯಾಣಿಕರು

|

Updated on: Mar 28, 2023 | 8:50 AM

ಪ್ರಯಾಣಿಕರು ಹಳದಿ ಲೈನ್ ಹಿಂದೆ ನಿಂತು ರೈಲು ಬರುವವರೆಗೆ ಕಾಯಬೇಕಾಗಿ ವಿನಂತಿ, ಹಿರಿಯ ನಾಗರಿಕರು, ಗರ್ಭಿಣಿಯರು ಹಾಗೂ ಅಂಗವಿಕರಿಗೆ ದಯವಿಟ್ಟು ಸೀಟುಗಳನ್ನು ಬಿಟ್ಟುಕೊಡಿ, ಬಾಗಿಲುಗಳಿಗೆ ಒರಗಿ ನಿಲ್ಲಬೇಡಿ, ಅಂತರ ಕಾಯ್ದುಕೊಳ್ಳಿ ಹೀಗೆ ಹತ್ತು ಹಲವು ಸೂಚನೆಗಳು ಮೆಟ್ರೋ ನಿಲ್ದಾಣದಲ್ಲಿ ಅಥವಾ ಮೆಟ್ರೋ ಒಳಗೆ ನಿಮ್ಮ ಕಿವಿಗೆ ಬೀಳುತ್ತದೆ.

Viral Video: ಮೆಟ್ರೋದಲ್ಲಿ ಅನೌನ್ಸ್​ಮೆಂಟ್ ಬದಲು ಭಿತ್ತರವಾಯ್ತು ಹರಿಯಾಣವಿ ಗೀತೆ, ಅಚ್ಚರಿಗೊಳಗಾದ ಪ್ರಯಾಣಿಕರು
ದೆಹಲಿ ಮೆಟ್ರೋ
Follow us on

ಪ್ರಯಾಣಿಕರು ಹಳದಿ ಲೈನ್ ಹಿಂದೆ ನಿಂತು ರೈಲು ಬರುವವರೆಗೆ ಕಾಯಬೇಕಾಗಿ ವಿನಂತಿ, ಹಿರಿಯ ನಾಗರಿಕರು, ಗರ್ಭಿಣಿಯರು ಹಾಗೂ ಅಂಗವಿಕರಿಗೆ ದಯವಿಟ್ಟು ಸೀಟುಗಳನ್ನು ಬಿಟ್ಟುಕೊಡಿ, ಬಾಗಿಲುಗಳಿಗೆ ಒರಗಿ ನಿಲ್ಲಬೇಡಿ, ಅಂತರ ಕಾಯ್ದುಕೊಳ್ಳಿ ಹೀಗೆ ಹತ್ತು ಹಲವು ಸೂಚನೆಗಳು ಮೆಟ್ರೋ ನಿಲ್ದಾಣದಲ್ಲಿ ಅಥವಾ ಮೆಟ್ರೋ ಒಳಗೆ ನಿಮ್ಮ ಕಿವಿಗೆ ಬೀಳುತ್ತದೆ. ಆದರೆ ಅನೌನ್ಸ್​ಮೆಂಟ್ ಬದಲಿಗೆ ಮೆಟ್ರೋದಲ್ಲಿ ಹರಿಯಾಣವಿ ಗೀತೆ ಕೇಳಿ ಜನರು ಆಶ್ಚರ್ಯಪಟ್ಟಿದ್ದಾರೆ.

ಹರಿಯಾಣವಿ ಹಾಡು 2 ನಂಬರಿ ಪ್ಲೇ ತಕ್ಷಣ ಪ್ರಯಾಣಿಕರು ಆಶ್ಚರ್ಯಚಕಿತರಾದರು, ಚಾಲಕ ಆಕಸ್ಮಿಕವಾಗಿ ಹೀಗೆ ಮಾಡಿರಬಹುದು ಎಂದು ಹೇಳಲಾಗಿದೆ. ಹಾಡು ಶುರುವಾದಾಗ ರೈಲಿನ ಒಳಗೆ ಇದ್ದ ಪ್ರಯಾಣಿಕರು ನಗಲು ಶುರು ಮಾಡಿದ್ದರು. ಈ ವಿಡಿಯೋವನ್ನು ಇನ್​ಸ್ಟಾಗ್ರಾಂ ಬಳಕೆದಾರ ಅಮನ್​ದೀಪ್ ಸಿಂಗ್ ಎಂಬುವವರು ಹಂಚಿಕೊಂಡಿದ್ದಾರೆ.
ಈ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ, ಟ್ವಿಟ್ಟರ್ ಬಳಕೆದಾರರೊಬ್ಬರು ಡ್ರೈವರ್ ಹರ್ಯಾಣದವರಿರಬಹುದು ಎಂದು ತಮಾಷೆ ಮಾಡಿದ್ದಾರೆ.

ಪ್ರಯಾಣಿಕರು ಹಳದಿ ಲೈನ್ ಹಿಂದೆ ನಿಂತು ರೈಲು ಬರುವವರೆಗೆ ಕಾಯಬೇಕಾಗಿ ವಿನಂತಿ, ಹಿರಿಯ ನಾಗರಿಕರು, ಗರ್ಭಿಣಿಯರು ಹಾಗೂ ಅಂಗವಿಕರಿಗೆ ದಯವಿಟ್ಟು ಸೀಟುಗಳನ್ನು ಬಿಟ್ಟುಕೊಡಿ, ಬಾಗಿಲುಗಳಿಗೆ ಒರಗಿ ನಿಲ್ಲಬೇಡಿ, ಅಂತರ ಕಾಯ್ದುಕೊಳ್ಳಿ ಹೀಗೆ ಹತ್ತು ಹಲವು ಸೂಚನೆಗಳು ಮೆಟ್ರೋ ನಿಲ್ದಾಣದಲ್ಲಿ ಅಥವಾ ಮೆಟ್ರೋ ಒಳಗೆ ನಿಮ್ಮ ಕಿವಿಗೆ ಬೀಳುತ್ತದೆ.

ಹಾಡನ್ನು ಕೆಲ ಸೆಕೆಂಡುಗಳ ಕಾಲ ಮಾತ್ರ ಪ್ಲೇ ಮಾಡಲಾಯಿತು, ಎಚ್ಚೆತ್ತ ಡ್ರೈವರ್ ತಕ್ಷಣ ಹಾಡು ಬಂದ್ ಮಾಡಿದ್ದರು.
ದೆಹಲಿ ಮೆಟ್ರೋದ ವೈರಲ್ ವಿಡಿಯೋ 2.1M ವೀಕ್ಷಣೆಗಳು, 160K ಇಷ್ಟಗಳು ಮತ್ತು 600 ಪ್ಲಸ್ ಕಾಮೆಂಟ್‌ಗಳನ್ನು ಕಂಡಿದೆ.
ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಟಿವಿ ಪರದೆಯಲ್ಲಿ ಅಶ್ಲೀಲ ವೀಡಿಯೋ ಪ್ರಸಾರವಾಗಿ ಸ್ಥಳದಲ್ಲಿ ನೆರೆದಿದ್ದ ನೂರಾರು ಪ್ರಯಾಣಿಕರು ಮುಜುಗರಕ್ಕೀಡಾದ ಪ್ರಸಂಗ ಬಿಹಾರದ ಪಾಟ್ನಾ ರೈಲ್ವೇ ನಿಲ್ದಾಣದಲ್ಲಿ ನಡೆದಿತ್ತು.

ಮತ್ತಷ್ಟು ಓದಿ: ರೈಲ್ವೆ ನಿಲ್ದಾಣದಲ್ಲಿ ಜಾಹೀರಾತು ಪರದೆ ಮೇಲೆ ಅಶ್ಲೀಲ ಸಿನಿಮಾ ಪ್ರಸಾರ: ದಿಗ್ಭ್ರಮೆಗೊಂಡ ಪ್ರಯಾಣಿಕರು

ನಿಲ್ದಾಣದಲ್ಲಿ ಸ್ಥಾಪಿಸಲಾಗಿದ್ದ ಟಿವಿ ಪರದೆ ಮೇಲೆ ಸುಮಾರು 3 ನಿಮಿಷಗಳ ಕಾಲ ಅಶ್ಲೀಲ ವೀಡಿಯೋ ಪ್ರದರ್ಶನವಾಗಿದೆ. ನಿಲ್ದಾಣದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಜನರಿದ್ದು, ಈ ವೇಳೆ ಜನರು ಮುಜುಗರಕ್ಕೀಡಾಗಿದ್ದರು.
ಘಟನೆ ನಡೆದ ತಕ್ಷಣವೇ ಪ್ರಯಾಣಿಕರು ಈ ಬಗ್ಗೆ ಸರ್ಕಾರಿ ರೈಲ್ವೆ ಪೊಲೀಸ್ (GRP) ಹಾಗೂ ರೈಲ್ವೆ ರಕ್ಷಣಾ ಪಡೆಗೆ (RPF) ದೂರು ನೀಡಿದ್ದಾರೆ. ಬಳಿಕ ಪೊಲೀಸರು ಜಾಹೀರಾತು ಪ್ರದರ್ಶನ ಮಾಡುವ ಸಂಸ್ಥೆ ದತ್ತಾ ಕಮ್ಯುನಿಕೇಷನ್ ಬಳಿ ಈ ಬಗ್ಗೆ ವಿಚಾರಿಸಿದ್ದಾರೆ. ಮಹಿಳೆಯರು, ಮಕ್ಕಳು ಸೇರಿದಂತೆ ಸಾರ್ವಜನಿಕರ ಮುಂದೆ ಈ ರೀತಿ ಅಶ್ಲೀಲ ವೀಡಿಯೋ ಪ್ರದರ್ಶನ ಮಾಡಿದ್ದಕ್ಕಾಗಿ ಕ್ಲಾಸ್ ತೆಗೆದುಕೊಂಡಿದ್ದರು.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ