Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ತನ್ನ ಗಂಡನ ಸಂತೋಷಕ್ಕಾಗಿ ಹೆಂಡತಿಯ ಭರ್ಜರಿ ಆಫರ್​​

ತನ್ನ ಪತಿಗೆ ಪ್ರತೀ ಕ್ಷಣ ಸಂತೋಷ ನೀಡುವುದು ತನ್ನ ಆದ್ಯ ಕರ್ತವ್ಯ. ಆದ್ದರಿಂದ ತನಗೆ ಬಿಡುವಿಲ್ಲದ ಸಮಯದಲ್ಲಿ ತನ್ನ ಗಂಡನಿಗೆ ಬೇರೆ ಮಹಿಳೆಯೊಂದಿಗೆ ಸಂತೋಷವಾಗಿ ಸಮಯ ಕಳೆಯಲು ನಾನು ಅವಕಾಶ ನೀಡಿದ್ದೇನೆ ಎಂದು ಅಮೆರಿಕಾದ ಮಹಿಳೆಯೊಬ್ಬಳು ಬಹಿರಂಗವಾಗಿ ಹೇಳಿಕೊಂಡಿದ್ದಾಳೆ.

Viral News: ತನ್ನ ಗಂಡನ ಸಂತೋಷಕ್ಕಾಗಿ ಹೆಂಡತಿಯ ಭರ್ಜರಿ ಆಫರ್​​
ತನ್ನ ಗಂಡನಿಗೆ ಬೇರೆ ಮಹಿಳೆಯೊಂದಿಗೆ ಸಮಯ ಕಳೆಯಲು ನಾನು ಅವಕಾಶ ನೀಡಿದ ಪತ್ನಿ
Follow us
ಅಕ್ಷತಾ ವರ್ಕಾಡಿ
|

Updated on:Mar 28, 2023 | 1:06 PM

ಹೆಂಡತಿಗೆ ನನ್ನ ಮೇಲೆ ಯಾವಾಗಲೂ ಅನುಮಾನ. ಬೇರೆ ಯಾವ ಮಹಿಳೆಯೊಂದಿಗೆ ಮಾತನಾಡಿದರೂ ಕೂಡ ಆ ದಿನ ಮನೆ ರಣರಂಗವಾಗಿ ಬಿಡುತ್ತದೆ ಎಂದು ಹೆದರುವ ಪುರುಷರೇ ಹೆಚ್ಚು. ಯಾಕೆಂದರೆ ಒಂದು ಹೆಣ್ಣಿಗೆ ತನ್ನ ಪತಿ ತನಗೆ ಮಾತ್ರ ಸೀಮಿತ, ಆದ್ದರಿಂದ ಆಕೆಯ ಅತಿಯಾದ ಪ್ರೀತಿ ಕೆಲವೊಮ್ಮೆ ಅಸೂಯೆ ಹಾಗೂ ಅನುಮಾನವನ್ನುಂಟು ಮಾಡುತ್ತದೆ. ಆದರೆ ಅಮೇರಿಕಾದ ಮೋನಿಕಾ ಹಲ್ಟ್ ಎಂಬ ಮಹಿಳೆ ತನ್ನ ಪತಿಯನ್ನು ಪ್ರತೀ ದಿನ ಸಂತೋಷವಾಗಿಟ್ಟುಕೊಳ್ಳಲು ತಾನು ಬ್ಯೂಸಿಯಾಗಿರುವ ಸಮಯದಲ್ಲಿ ಬೇರೆ ಮಹಿಳೆಯರೊಂದಿಗೆ ಮಲಗಲು ಅವಕಾಶ ನೀಡಿದ್ದಾಳೆ. ತನ್ನ ಪತಿಯನ್ನು ಸಂತೋಷಪಡಿಸುವುದು ತನ್ನ ಕರ್ತವ್ಯ ಎಂದು ನಂಬುತ್ತಾಳೆ ಈಕೆ. ತನಗೆ ಬಿಡುವಿಲ್ಲದ ಕಾರಣ ಇತರ ಮಹಿಳೆಯರೊಂದಿಗೆ ಸಂಬಂಧ ಹೊಂದಲು ಕಳುಹಿಸಿದ ನಂತರ ಅವಳು ತನ್ನ ಪತಿಗೆ ಬೇಕಾಗುವಂತಹ ಅಡುಗೆ ಮಾಡಿ, ಮನೆಯನ್ನು ಸ್ವಚ್ಛಗೊಳಿಸುತ್ತಾಳೆ.

ಅಮೆರಿಕಾದ ಸುದ್ದಿ ಸಂಸ್ಥೆಯಾದ ನ್ಯೂಯಾರ್ಕ್ ಪೋಸ್ಟ್‌ನ ಸಂದರ್ಶನವೊಂದರಲ್ಲಿ, ತನ್ನ ಪತಿ ಜಾನ್ ಅವರನ್ನು ಸಂತೋಷಪಡಿಸುವುದು ಹೆಂಡತಿಯಾಗಿ ತನ್ನ ಪ್ರಾಥಮಿಕ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ. ತನ್ನ ಪತಿಗೆ ಇತರ ಮಹಿಳೆಯರೊಂದಿಗೆ ಮಲಗಲು ಅವಕಾಶ ನೀಡುವುದು ನಮ್ಮ ಸಂಬಂಧಕ್ಕೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂದು ಆಕೆ ಹೇಳಿದ್ದಾಳೆ.

ಇದನ್ನೂ ಓದಿ: 76% ಅಂಗವೈಕಲ್ಯ ಹೊಂದಿರುವ ವ್ಯಕ್ತಿ ಮ್ಯಾರಾಥಾನ್ ಪೂರ್ಣಗೊಳಿಸಿದ್ದಾರೆ; ಇದು ವಿಶ್ವದಲ್ಲೇ ಮೊದಲು!

ತಾನು ಗೃಹಿಣಿಯಾಗಿದ್ದು, ತನ್ನ ಮನೆಯ ಜವಾಬ್ದಾರಿಯನ್ನು ಜೊತೆಗೆ ಅಡುಗೆ ಮತ್ತು ಮನೆಕೆಲಸಗಳನ್ನು ನೋಡಿಕೊಳ್ಳುವಾಗ ತನ್ನ ಪತಿಯೊಂದಿಗೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ, ಆಗ ತನ್ನ ಪತಿಯನ್ನು ಇತರ ಮಹಿಳೆಯರೊಂದಿಗೆ ಸಮಯ ಕಳೆಯಲು ಕಳುಹಿಸುತ್ತೇನೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾಳೆ. ಇದಲ್ಲದೆ, ತನ್ನ ಪತಿ ಬೇರೆ ಮಹಿಳೆಯೊಂದಿಗೆ ಸಮಯ ಕಳೆಯಲು ಹೋಗುವಾಗ ಯಾವ ರೀತಿ ಬಟ್ಟೆಗಳನ್ನು ಧರಿಸಬೇಕು ಎಂದು ನಿರ್ಧರಿಸುವುದು ಕೂಡ ನಾನೇ ಎಂದು ಹೇಳಿಕೊಂಡಿದ್ದಾಳೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 1:06 pm, Tue, 28 March 23

ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ