AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru: ಬೈಕ್​ ಟ್ಯಾಕ್ಸಿ ರೈಡರ್​ಗೆ ಆಟೋ ಚಾಲಕನಿಂದ ಕಿರುಕುಳ: ವಿಡಿಯೋ ವೈರಲ್​

ನಗರದಲ್ಲಿ ಬೈಕ್​​ ಟ್ಯಾಕ್ಸಿ ರೈಡರ್​ಗಳ ಮೇಲೆ ಆಟೋ ಚಾಲಕರು ಪದೇ ಪದೇ ಕಿರುಕುಳ ನೀಡುತ್ತಿರುವುದು ವರದಿಯಾಗುತ್ತಿವೆ. ಸದ್ಯ ಅಂಥಹುದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Bengaluru: ಬೈಕ್​ ಟ್ಯಾಕ್ಸಿ ರೈಡರ್​ಗೆ ಆಟೋ ಚಾಲಕನಿಂದ ಕಿರುಕುಳ: ವಿಡಿಯೋ ವೈರಲ್​
ಬೈಕ್ ಟ್ಯಾಕ್ಸಿ ರೈಡರ್​ಗೆ ಆಟೋ ಚಾಲಕನಿಂದ ನಿಂದನೆ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Mar 24, 2023 | 6:42 PM

Share

ಬೆಂಗಳೂರು: ನಗರದಲ್ಲಿ ಬೈಕ್​​ ಟ್ಯಾಕ್ಸಿ ರೈಡರ್​ಗಳ (Rapido Bike Taxi) ಮೇಲೆ ಆಟೋ ಚಾಲಕರು ಪದೇ ಪದೇ ಕಿರುಕುಳ ನೀಡುತ್ತಿರುವುದು ವರದಿಯಾಗುತ್ತಿವೆ. ಬೈಕ್​​ ಟ್ಯಾಕ್ಸಿ ಸೇವೆಗೆ ನಗರದಲ್ಲಿ ಅನುಮತಿ ನೀಡಲಾಗಿದ್ದರೂ ಸಹ ಅನೇಕ ಆಟೋ ಚಾಲಕರು ಇದು ಅಕ್ರಮ ಎಂದು ಆರೋಪಿಸಿ ಹಲ್ಲೆ ನಡೆಸುವ, ದೌರ್ಜನ್ಯ ನಡೆಸುವಂತಹ ಘಟನೆಗಳು ನಡೆಯುತ್ತಿವೆ. ಸದ್ಯ ಅಂಥಹುದೇ ಒಂದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಬೈಕ್ ಟ್ಯಾಕ್ಸಿ ರೈಡರ್​ನ ಸುತ್ತುವರಿದಿರುವ ಆಟೋ ಚಾಲಕರ ಗುಂಪು ಇರುವ ವೈರಲ್​ ಆಗಿರುವ ವಿಡಿಯೋದಲ್ಲಿ ಕಾಣಬಹುದು. ಬೈಕ್​​ ಟ್ಯಾಕ್ಸಿ ರೈಡರ್ ವಾಣಿಜ್ಯ ಉದ್ದೇಶಗಳಿಗಾಗಿ ತನ್ನ ವಾಹನವನ್ನು ಬಳಸಿದ್ದಕ್ಕಾಗಿ ಆತನನ್ನು ಅವಾಚ್ಯವಾಗಿ ನಿಂದಿಸಿದಲ್ಲದೇ, ಬೈಕ್​ ಸುಡುವುದಾಗಿ ಬೆದರಿಕೆ ಹಾಕಿದ್ದಾನೆ.

ರ್ಯಾಪಿಡೊ ಮತ್ತು ಉಬರ್ ನಂತಹ ಬೈಕ್ ಟ್ಯಾಕ್ಸಿ ಅಪ್ಲಿಕೇಶನ್​ಗಳಿಗೆ ಸಂಬಂಧಿಸಿದವರು ಬಿಳಿ ಪರವಾನಗಿ ಫಲಕಗಳನ್ನು ಹೊಂದಿರುವ ದ್ವಿಚಕ್ರ ವಾಹನಗಳನ್ನು ಬಳಸುವುದು ಕಾನೂನುಬಾಹಿರ ಎಂದು ಆಟೋ ಚಾಲಕರು ಆರೋಪಿಸಿದ್ದಾರೆ. ಬೈಕ್ ಟ್ಯಾಕ್ಸಿ ಅಗ್ರಿಗೇಟರ್ಗಳು ನಮ್ಮ ಜೀವನೋಪಾಯಕ್ಕೆ ದೊಡ್ಡ ಹೊಡೆತ ನೀಡಿದ್ದಾರೆ. ಕೋವಿಡ್-19 ನಂತರ ಆಟೋ ಚಾಲಕರ ಆದಾಯದ ಮೇಲೆ ಭಾರಿ ಪರಿಣಾಮ ಬೀರಿದೆ ಎಂದು ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಒಕ್ಕೂಟದ ಅಧ್ಯಕ್ಷ ಎಂ.ಮಂಜುನಾಥ್ ಹೇಳಿದರು.

ಇದನ್ನೂ ಓದಿ: Bengaluru: ಆಟೋ ಚಾಲಕರಿಗೆ ಕೌಂಟರ್ ಕೊಟ್ಟ ಬೈಕ್ ಟ್ಯಾಕ್ಸಿ ಚಾಲಕರು

ಈ ಹಿಂದೆ ಇಂದಿರಾನಗರ ಮೆಟ್ರೋ ನಿಲ್ದಾಣದ ಬಳಿ ಆಟೋ ಚಾಲಕ ಬೈಕ್​​ ಟ್ಯಾಕ್ಸಿ ಸವಾರನ ಹೆಲ್ಮೆಟ್​ನ್ನು ಪುಡಿಪುಡಿ ಮಾಡಿದ ವಿಡಿಯೋ ಕೂಡ ವೈರಲ್ ಆಗಿತ್ತು. ದೂರು ನೀಡದಿರುವುದರಿಂದ ಆಟೋ ಚಾಲಕನನ್ನು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆ ಮಾಡಲಾಗಿತ್ತು.

ಮಾರ್ಚ್ 20 ರಂದು ಬೆಂಗಳೂರಿನಲ್ಲಿ ಆಟೋ ಚಾಲಕರ ಸಂಘವು ಅಕ್ರಮ ಬೈಕ್ ಟ್ಯಾಕ್ಸಿಗಳ ವಿರುದ್ಧ ಪ್ರತಿಭಟನೆ ಮಾಡಿದ್ದರು. ಮುಷ್ಕರದ ಹೊರತಾಗಿಯೂ ಕೆಲವು ಚಾಲಕರು ಆಟೋಗಳನ್ನು ಓಡಿಸಲು ನಿರ್ಧರಿಸಿದ್ದರಿಂದ ಪ್ರತಿಭಟನೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿಂದು ಸರಿಯಾದ ಸಮಯಕ್ಕೆ ಆಟೋ ಸಿಗಲ್ಲ, ಚಾಲಕರಿಂದ ವಿಧಾನಸೌಧಕ್ಕೆ ಮುತ್ತಿಗೆ ಕರೆ

ಸ್ಥಳದಲ್ಲೇ ವಿಷ ಕುಡಿದ ಪ್ರತಿಭಟನಾ ನಿರತ ಆಟೋ ಚಾಲಕ

ಇತ್ತೀಚೆಗೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ನಿಷೇಧಿಸುವಂತೆ ಒತ್ತಾಯಿಸಿ ಬೆಂಗಳೂರಿನ ಶಾಂತಿನಗರದ RTO ಮುಖ್ಯ ಕಚೇರಿ ಬಳಿ  ಆಟೋ ಚಾಲಕರಿಂದ ಪ್ರತಿಭಟನೆ ಮಾಡಲಾಗಿತ್ತು. ಈ ವೇಳೆ ಸ್ಥಳದಲ್ಲೇ ಆಟೋ ಚಾಲಕ ಸುನೀಲ್ ಎನ್ನುವವರು ವಿಷ ಕುಡಿದ ಕುಡಿದಿರುವಂತಹ ಘಟನೆ ಕೂಡ ನಡೆದಿತ್ತು. ಅಸ್ವಸ್ಥ ಆಟೋ ಚಾಲಕ​ನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಶಾಂತಿನಗರ ಬಸ್ ನಿಲ್ದಾಣ ಮುಂದೆ ನೂರಾರು ಸಂಖ್ಯೆಯಲ್ಲಿ ಆಟೋ ಚಾಲಕರು ಜಮಾಯಿಸಿದ್ದು, ಬಿಎಂಟಿಸಿ ಬಸ್​​​​ಗೆ ಅಡ್ಡ ಮಲಗಿ ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:39 pm, Fri, 24 March 23