ರೋಹಿಣಿ ಸಿಂಧೂರಿ ಮಾನನಷ್ಟ ಮೊಕದ್ದಮೆ: ರೂಪಾ ಮೌದ್ಗಿಲ್​ಗೆ ಸಮನ್ಸ್ ಜಾರಿಗೊಳಿಸಿದ ಮ್ಯಾಜಿಸ್ಟ್ರೇಟ್​​​ ಕೋರ್ಟ್

ಐಪಿಎಸ್​ ಡಿ.ರೂಪಾ ಮೌದ್ಗಿಲ್​ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕೇಸ್​ಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಕೋರ್ಟ್​​ ಕ್ರಿಮಿನಲ್ ಮಾನನಷ್ಟ ಪ್ರಕರಣ ದಾಖಲಿಸಿಕೊಂಡಿದ್ದು, ರೂಪಾ‌‌ ಮೌದ್ಗಿಲ್​ಗೆ ಸಮನ್ಸ್ ಜಾರಿಗೊಳಿಸಿದೆ.

ರೋಹಿಣಿ ಸಿಂಧೂರಿ ಮಾನನಷ್ಟ ಮೊಕದ್ದಮೆ: ರೂಪಾ ಮೌದ್ಗಿಲ್​ಗೆ ಸಮನ್ಸ್ ಜಾರಿಗೊಳಿಸಿದ ಮ್ಯಾಜಿಸ್ಟ್ರೇಟ್​​​ ಕೋರ್ಟ್
ರೂಪಾ ಮೌದ್ಗಿಲ್, ರೋಹಿಣಿ ಸಿಂಧೂರಿ Image Credit source: freepressjournal.in
Follow us
ಗಂಗಾಧರ​ ಬ. ಸಾಬೋಜಿ
|

Updated on:Mar 24, 2023 | 6:05 PM

ಬೆಂಗಳೂರು: ಐಪಿಎಸ್​ ಡಿ.ರೂಪಾ ಮೌದ್ಗಿಲ್​ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಕೇಸ್​ಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಕೋರ್ಟ್​​ ಕ್ರಿಮಿನಲ್ ಮಾನನಷ್ಟ ಪ್ರಕರಣ ದಾಖಲಿಸಿಕೊಂಡಿದ್ದು, ರೂಪಾ‌‌ ಮೌದ್ಗಿಲ್​ಗೆ ಸಮನ್ಸ್ ಜಾರಿಗೊಳಿಸಿದೆ. ಏ. 26ಕ್ಕೆ ಹಾಜರಾಗುವಂತೆ 8ನೇ ಎಸಿಎಂಎಂ ಕೋರ್ಟ್ ಸಮನ್ಸ್​ ಜಾರಿ ಮಾಡಿದೆ. ಡಿ.ರೂಪಾ ಮೌದ್ಗಿಲ್​ ವಿರುದ್ಧ ರೋಹಿಣಿ ಸಿಂಧೂರಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ವಿಚಾರವಾಗಿ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ರೋಹಿಣಿ ಸಿಂಧೂರಿ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದರು. ಇದು ಕರ್ನಾಟಕ ರಾಜಕೀಯದಲ್ಲಿಯೂ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಡಿ. ರೂಪಾ ವಿರುದ್ಧ ರೋಹಿಣಿ ಸಿಂಧೂರಿ ಮಾನನಷ್ಟ ಪರಿಹಾರ ಕೋರಿ ಲೀಗಲ್‌ ನೋಟಿಸ್‌ ಜಾರಿ ಮಾಡಿದ್ದರು. ಒಂದೋ ಕ್ಷಮೆ ಕೇಳಬೇಕು, ಇಲ್ಲವಾದಲ್ಲಿ 1 ಕೋಟಿ ರೂ. ಮಾನನಷ್ಟ ಪರಿಹಾರ ನೀಡಬೇಕು ಎಂದು ನೋಟಿಸ್​ನಲ್ಲಿ ಉಲ್ಲೇಖಿಸಲಾಗಿತ್ತು.

1 ಕೋಟಿ ರೂಪಾಯಿ ಮಾನನಷ್ಟ ದಾಖಲಿಸುವುದಾಗಿ ಎಚ್ಚರಿಕೆ 

ಸಾಮಾಜಿಕ ಜಾಲತಾಣಗಳಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವೈಯಕ್ತಿ ಫೋಟೋಗಳನ್ನು ಹರಿಬಿಟ್ಟು ಸಾಲು ಸಾಲು ಆರೋಪಗಳನ್ನು ಮಾಡಿರುವ ಐಪಿಎಸ್​ ಡಿ. ರೂಪಾಗೆ ಲೀಗಲ್‌ ನೋಟಿಸ್‌ ನೀಡಲಾಗಿತ್ತು. ರೋಹಿಣಿ ಸಿಂಧೂರಿ ಅವರು ತಮ್ಮ ಪರ ವಕೀಲ ಸಿವಿ ನಾಗೇಶ್‌ ಮೂಲಕ ಲೀಗಲ್‌ ನೋಟಿಸ್‌ ನೀಡಿದ್ದರು. ಈ ನೋಟಿಸ್‌ ತಲುಪಿದ 24 ಗಂಟೆಯ ಒಳಗಾಗಿ ರೂಪಾ ಅವರು ಕ್ಷಮೆ ಕೇಳಬೇಕು. ಇಲ್ಲದಿದ್ದರೆ 1 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ: ರೋಹಿಣಿ ಸಿಂಧೂರಿಯವರ ವೈಯಕ್ತಿ ಫೋಟೋ ಏಕೆ ಹಾಕಿದ್ದೀರಿ ಎಂದು ಪ್ರಶ್ನಿಸಿದವರಿಗೆ ರೂಪಾ ಕೊಟ್ಟ ಉತ್ತರ ಹೀಗಿದೆ

ನೋಟಿಸ್​ನಲ್ಲಿ 21 ಅಂಶಗಳನ್ನು ಉಲ್ಲೇಖಿಸಿ ರೂಪಾ ಅವರ ಮನೆ ಹಾಗೂ ಕೆಲಸದ ಸ್ಥಳದ ವಿಳಾಸಕ್ಕೆ ಕಳುಹಿಸಲಾಗಿತ್ತು. ಅದರೊಂದಿಗೆ ತಮ್ಮ ಫೇಸ್‌ಬುಕ್‌ ಪೇಜ್​ನಲ್ಲಿ ಹಂಚಿಕೊಂಡಿರುವ ಮಾನಹಾನಿಕರ ಮೆಸೇಜ್‌ಗಳು ಹಾಗೂ ಚಿತ್ರವನ್ನು ತಕ್ಷಣವೇ ಡಿಲೀಟ್‌ ಮಾಡಬೇಕು. ಹಾಗೇ ಕ್ಷಮೆಯಾಚಿಸಬೇಕೆಂದು ನೋಟಿಸ್​ನಲ್ಲಿ ಉಲ್ಲೇಖಿಸಿದ್ದರು.

ಡಿ. ರೂಪಾ ಮೌದ್ಗಿಲ್ ವಿರುದ್ಧ ಆಕ್ರೋಶ  

ಡಿ. ರೂಪಾ ಮೌದ್ಗಿಲ್​ ಅವರು ರೋಹಿಣಿ ಸಿಂಧೂರಿ ಅವರ ಕೆಲ ವೈಯಕ್ತಿ ಫೋಟೋಗಳನ್ನು ಬಹಿರಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಕೆಲ ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಫೋಟೋಗಳನ್ನು ಹಾಕಿದ್ದಕ್ಕೆ ಕೆಲವರು ರೂಪಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ವೈಯಕ್ತಿಕ ಫೋಟೋಗಳನ್ನು ಈ ರೀತಿ ಬಹಿರಂಗವಾಗಿ ಹಾಕುವುದು ಎಷ್ಟು ಸರಿ? ಈ ರೀತಿ ಮತ್ತೊಬ್ಬರ ಫೋಟೋಗಳನ್ನು ಅವರ ಅನುಮತಿ ಇಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚುವುದು ನಿಮ್ಮ ಸರ್ಕಾರದ ನಾಗರಿಕ ಸೇವಾ ನಿಯಮಗಳ ಉಲ್ಲಂಘನೆಯಾಗುವುದಿಲ್ವಾ? ಅಥವಾ ಇಂಥ ನಿಯಮಗಳು ನಿಮಗೆ ಮಾತ್ರ ಅನ್ವಯಿಸುವುದಿಲ್ವಾ? ಅಂತೆಲ್ಲಾ ರೂಪಾ ವಿರುದ್ಧ ಗರಂ ಆಗಿದ್ದರು.

ಇದನ್ನೂ ಓದಿ: ತಮ್ಮ ಖಾಸಗಿ ಫೋಟೋಗಳಿಗೆ ಸ್ಪಷ್ಟನೆ ಕೊಟ್ಟ ರೋಹಿಣಿ ಸಿಂಧೂರಿ, IPS ರೂಪಾ ವಿರುದ್ಧ ಕಾನೂನು ಹೋರಾಟಕ್ಕೆ ತೀರ್ಮಾನ

ಖಾಸಗಿ ಫೋಟೋಗಳು ಹಾಕಿ ಗಂಭೀರ ಆರೋಪ

ಮೊದಲ ಮೊದಲಿಗೆ ರೋಹಿಣಿ ಸಿಂಧೂರಿ ಹಾಗೂ ಡಿ. ರೂಪಾ ನಡುವೆ ಕಾಳಗ ಶುರುವಾಗಿದ್ದೆ ಈ ಫೋಟೋಗಳಿಂದ. ರೂಪಾ ಅವರೇ ಸಿಂಧೂರಿ ಅವರ ಒಂದಿಷ್ಟು ಖಾಸಗಿ ಫೋಟೋಗಳನ್ನು ಫೇಸ್​​ಬುಕ್​ನಲ್ಲಿ ಹಂಚಿಕೊಂಡಿದ್ದರು. ಅಲ್ಲದೇ ಈ ರೀತಿಯ ಪಿಕ್ಚರ್ಸ್ ನಾರ್ಮಲ್ ಅನ್ನಿಸಬಹುದು. ಆದರೆ, ಒಬ್ಬ ಮಹಿಳಾ ಐಎಎಸ್ ಅಧಿಕಾರಿ ಒಂದಲ್ಲ, ಎರಡಲ್ಲ ಮೂರು ಐಎಎಸ್ ಪುರುಷ ಅಧಿಕಾರಿಗಳಿಗೆ ಆಗಾಗ ಇವುಗಳನ್ನು ಹಾಗೂ ಈ ರೀತಿಯ ಅನೇಕ ಪಿಕ್ಸ್​ಗಳ ಒನ್​ ಟು ಒನ್ ಕಳಿಸ್ತಾರೆ ಅಂದ್ರೆ ಅದಕ್ಕೆ ಏನರ್ಥ? ಎಂದು ಪ್ರಶ್ನಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:05 pm, Fri, 24 March 23

ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು
ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು