ತಮ್ಮ ಖಾಸಗಿ ಫೋಟೋಗಳಿಗೆ ಸ್ಪಷ್ಟನೆ ಕೊಟ್ಟ ರೋಹಿಣಿ ಸಿಂಧೂರಿ, IPS ರೂಪಾ ವಿರುದ್ಧ ಕಾನೂನು ಹೋರಾಟಕ್ಕೆ ತೀರ್ಮಾನ
IPS ಅಧಿಕಾರಿ ಡಿ. ರೂಪಾ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಕೆಲ ವೈಯಕ್ತಿ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ, ಇದೀಗ ಆ ಫೋಟೋಗಳಿಗೆ ಸ್ವತಃ ರೋಹಿಣಿ ಸಿಂಧೂರಿ ಸ್ಪಷ್ಟನೆ ನೀಡಿ ರೂಪಗೆ ತಿರುಗೇಟು ನೀಡಿದ್ದಾರೆ. ಇದರೊಂದಿಗೆ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಿಬ್ಬರ ನಡುವಿನ ಆರೋಪ-ಪ್ರತ್ಯಾರೋಪಗಳು ಮತ್ತೊಂದು ಹಂತಕ್ಕೆ ಹೋಗಿದೆ.
ಬೆಂಗಳೂರು: IAS ರೋಹಿಣಿ ಸಿಂಧೂರಿ(Rohini SIndhuri) ವರ್ಸಸ್ IPS ರೂಪಾ ಮೌದ್ಗಿಲ್( d roopa moudgil) ನಡುವಿನ ಮುಸುಕಿನ ಗುದ್ದಾಟ ಸ್ಫೋಟಗೊಂಡಿದೆ. ರೋಹಿಣಿ ಸಿಂಧೂರಿ ಅವರ ಕೆಲ ಖಾಸಗಿ ಫೋಟೋಗಳನ್ನು ಬಿಡುಗಡೆ ಮಾಡಿ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ರೋಹಿಣಿ ಸಿಂಧೂರಿ ಪ್ರತಿಕ್ರಿಯಿಸಿ ಐಪಿಎಸ್ ರೂಪಾ ಮೌದ್ಗಿಲ್ ಆರೋಪಿಗಳಿಗೆ ತಿರುಗೇಟು ನೀಡಿದ್ದಾರೆ. ಅಲ್ಲದೇ ಅವರ ವಿರುದ್ಧ ಕಾನೂನು ಮೊರೆ ಹೋಗಲು ತೀರ್ಮಾನಿಸಿದ್ದಾರೆ. ಮೊದಲ ಬಾರಿಗೆ IPS ರೂಪಾ ವಿರುದ್ಧ ಮೌನಮುರಿದ ರೋಹಿಣಿ ಸಿಂಧೂರಿ ತಮ್ಮ ಫೋಟೋಗಳ ಬಗ್ಗೆ ಸ್ಪಷ್ಟನೆ ನೀಡಿದ್ದು, ಅದು ಈ ಕೆಳಗಿನಂತಿದೆ.
ಇದನ್ನೂ ಓದಿ: ಸತ್ಯವನ್ನೇ ಟ್ವೀಟ್ ಮಾಡಿದ್ದೇನೆ: ರೋಹಿಣಿ ಸಿಂಧೂರಿ ವಿರುದ್ಧ ಮಾಡಿದ ಆರೋಪ ಸಮರ್ಥಿಸಿಕೊಂಡ ಡಿ.ರೂಪ
ರೂಪಾ ಮೌದ್ಗಿಲ್ ಸುದ್ದಿಗೋಷ್ಠಿ ಬೆನ್ನಲ್ಲೇ ರೋಹಿಣಿ ಸಿಂಧೂರಿ ಸಹ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದು, ವಾಟ್ಸಪ್ ಸ್ಟೇಟಸ್ ಗಳಲ್ಲಿ ಹಾಕಿದ್ದ ಫೋಟೋಗಳನ್ನು ಬಳಸಿ ನಿಂದನೆ ಮಾಡಿದ್ದಾರೆ. ನಾನು ಯಾವ ಅಧಿಕಾರಿಗೆ ಫೋಟೋಸ್ ಕಳುಹಿಸಿದ್ದೆ ಅಂತ ಹೆಸರು ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದ್ದಾರೆ. ಅಲ್ಲದೇ ಆ ಬಗ್ಗೆ ತನಿಖೆ ನಡೆಯಬೇಕೆಂದು ರೋಹಿಣಿ ಸಿಂಧೂರಿ ಒತ್ತಾಯಿಸಿದ್ದಾರೆ.
ಡಿ.ರೂಪಾ ಮಾನಸಿಕ ಸ್ಥಿಮಿತ ಕಳೆದುಕೊಂಡ ರೀತಿ ವರ್ತಿಸುತ್ತಿದ್ದಾರೆ. ಆಧಾರರಹಿತ ಆರೋಪ ಮಾಡಿ ಮಾಧ್ಯಮಗಳ ಗಮನ ಸೆಳೆಯುತ್ತಾರೆ. ವೈಯಕ್ತಿಕ ನಿಂದನೆ, ತೇಜೋವಧೆ ವಿರುದ್ಧ IPS ಸೆಕ್ಷನ್ ಗಳಡಿ ಕಾನೂನು ಕ್ರಮ. ಸಕ್ಷಮ ಪ್ರಾಧಿಕಾರದ ಮುಂದೆ ದೂರು ಸಲ್ಲಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಜವಾಬ್ದಾರಿ ಸ್ಥಾನದಲ್ಲಿದ್ದು ವೈಯಕ್ತಿಕ ದ್ವೇಷಕಾರಿವುದು ಸಮಾಜಕ್ಕೆ ಅಪಾಯಕಾರಿ. ನನ್ನ ಮೇಲೆ ವೈಯಕ್ತಿಕ ಹಗೆ ಸಾಧಿಸಲು ರೂಪಾಗೆ ಅಭ್ಯಾಸ ಆಗಿದೆ. ಆಧಾರರಹಿತ ಆರೋಪಗಳ ಮೂಲಕ ಗಮನಸೆಳೆಯುವುದಕ್ಕೆ ರೂಪಾ ಪ್ರಯತ್ನ ಮಾಡುತ್ತಿದ್ದಾರೆ. ತಾವು ದ್ವೇಷಿಸುವ ವ್ಯಕ್ತಿಗಳ ವಿರುದ್ಧ ವೈಯಕ್ತಿಕ ಹಗೆತನಕ್ಕೆ ರೂಪಾ ಪ್ರಯತ್ನಿಸುತ್ತಿದ್ದಾರೆ. ಯಾವಾಗಲು ಸುದ್ದಿಯಲ್ಲಿರಬೇಕೆಂದು ಬಯಸಿ ರೂಪಾರಿಂದ ಈ ರೀತಿ ಪೋಸ್ಟ್ ಹಾಕಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಈ ರೀತಿ ಪೋಸ್ಟ್ ಗಳ ಮೂಲಕ ಸುದ್ದಿಯಲ್ಲಿರಲು ಪ್ರಯತ್ನ ಮಾಡುತ್ತಿದ್ದಾರೆ. ಒಳ್ಳೆಯ ಕೆಲಸ ಮಾಡುವುದು ಬಿಟ್ಟು ಇನ್ನೊಬ್ಬರ ತೋಜೋವಧೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ರೋಹಿಣಿ ಸಿಂಧೂರಿ ಖಾಸಗಿ ಫೋಟೋ ಹರಿಬಿಟ್ಟಿದ್ದ ರೂಪ
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಫೋಟೋಗಳನ್ನು ರೂಪ ಮೌದ್ಗಿಲ್ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದರು. ಅಲ್ಲದೇ ಈ ರೀತಿಯ ಫೋಟೋಗಳು ಒಬ್ಬರಲ್ಲ, ಇಬ್ಬರಲ್ಲ ನಾಲ್ವರು ಪುಡುಷ ಐಎಎಸ್ ಅಧಿಕಾರಿಗಳಿಗೆ ಕಳುಹಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಅಲ್ಲದೇ ಈ ಚಿತ್ರಗಳನ್ನು ಏಕೆ ಕಳುಹಿಸಿದ್ದರು ಎಂದು ರೋಹಿಣಿ ಮೇಲೆ ಅನುಮಾನಗಳನ್ನು ವ್ಯಕ್ತಪಡಿಸಿದ್ದರು.