ಜೆಡಿಎಸ್ ಪಕ್ಷದ ಜೊತೆಗೆ ನನಗೆ ಸಖ್ಯ ಕಡಿಮೆ: ಹಾಸನದಿಂದ ರೇವಣ್ಣ ಸ್ಪರ್ಧೆಗೆ ಲೇವಡಿ ಮಾಡಿದ ಪ್ರೀತಂಗೌಡ
Karnataka Election 2023: ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಯಾರು ಎಂಬುದು ಇದುವರೆಗೆ ಅಂತಿಮವಾಗಿಲ್ಲ. ಭವಾನಿ ಅವರನ್ನು ಕಣಕ್ಕಿಳಿಸುವ ಬಗ್ಗೆ ಭಾರೀ ಚರ್ಚೆ ಆಗಿತ್ತು. ಬಳಿಕ ಅವರ ಪತಿ ಹೆಚ್.ಡಿ.ರೇವಣ್ಣ ಇದೇ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬಿಜೆಪಿ ಶಾಸಕ ಪ್ರೀತಂಗೌಡ ವ್ಯಂಗ್ಯವಾಡಿದ್ದಾರೆ.
ಹಾಸನ: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಸಮೀಪಿಸುತ್ತಿದ್ದರೂ ಹಾಸನ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಯುವ ಅಭ್ಯರ್ಥಿ (Hassan JDS Candidate) ಯಾರೆಂದು ಇನ್ನೂ ಘೋಷಣೆಯಾಗಿಲ್ಲ. ಭವಾನಿ (Bhavani Revanna) ಅವರನ್ನು ಕಣಕ್ಕಿಳಿಸುವ ಬಗ್ಗೆ ಭಾರೀ ಚರ್ಚೆ ಆಗಿತ್ತು. ನಂತರ ಅವರ ಪತಿಯೂ ಆಗಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ (H.D.Revanna) ಸ್ಪರ್ಧಿಸುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹಾಸನದ ಬಿಜೆಪಿ ಶಾಸಕ ಪ್ರೀತಂಗೌಡ (MLA Preetham Gowda) ಅವರನ್ನು ಕೇಳಿದಾಗ, ನನಗೆ ಗೊತ್ತಿಲ್ಲ, ಜೆಡಿಎಸ್ ಪಕ್ಷದ ಜೊತೆಗೆ ನನಗೆ ಸಖ್ಯ ಕಡಿಮೆ ಎಂದು ವ್ಯಂಗ್ಯವಾಡಿದ್ದಾರೆ.
ಜೆಡಿಎಸ್ ಪಕ್ಷದ ಜೊತೆಗೆ ನನಗೆ ಸಖ್ಯ ಕಡಿಮೆ. ಆ ಪಕ್ಷದಿಂದ ಅಂತಿಮವಾಗಿ ಯಾರಾದರೂ ಒಬ್ಬರು ಅಭ್ಯರ್ಥಿಯಂತು ಆಗಲೇಬೇಕು. ಇರುವುದು ಮೂವರು ವ್ಯಕ್ತಿಗಳು. ಹೆಚ್.ಡಿ.ರೇವಣ್ಣ, ಭವಾನಿ ಅಥವಾ ಸ್ವರೂಪ್ ಯಾರಾದರೊಬ್ಬರು ಅಭ್ಯರ್ಥಿಯಾಗಿ ಆಯ್ಕೆಯಾಗುತ್ತಾರೆ. ಅಲ್ಲಿಯವರೆಗೆ ದಿನಾ ಯಾಕೆ ಅವರ ಬಗ್ಗೆ ಮಾತಾಡುವುದು ಎಂದ ಪ್ರೀತಂಗೌಡ, ಜನ ಸಾಮಾನ್ಯರ ಸಮಸ್ಯೆ ಬಗ್ಗೆ ಚರ್ಚೆ ಮಾಡಿ ಎಂದರು.
ಮೂರರಲ್ಲಿ ಒಬ್ಬರೇ ನಿಲ್ಲುವುದು, ಯಾರೇ ಅಭ್ಯರ್ಥಿ ಅದರೂ ನಾಮಪತ್ರ ಸಲ್ಲಿಕೆ ಮಾಡುತ್ತಾರೆ. ನಂತರ ಹಿಂಪಡೆಯಲು ಅವಕಾಶ ಇರುತ್ತದೆ. ಅದಾದ ಬಳಿಕ ಅಭ್ಯರ್ಥಿ ಬಗ್ಗೆ ಯೋಚನೆ ಮಾಡಿ. ಸದ್ಯ ಈ ವಿಚಾರ ಬಿಟ್ಟು ಹಾಸನದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡೋಣ. ನಾನು ಸವಾಲು ಹಾಕಿ ಹೊಟೆಲ್ ಒಳಗೆ ಚುನಾವಣೆ ಮಾಡಲ್ಲ. ಚುನಾವಣೆ ಆಯೋಗ ಇದೆ ಚುನಾವಣೆ ಮಾಡುತ್ತದೆ ಎಂದರು.
ಇದನ್ನೂ ಓದಿ: ಬಗೆಹರಿಯದ ಹಾಸನ ಜೆಡಿಎಸ್ ಟಿಕೆಟ್ ಗೊಂದಲ, ಒಂದು ತಿಂಗಳ ಜಟಾಪಟಿಗೆ ತೆರೆ ಎಳಿತಾರಾ ಮಾಜಿ ಪ್ರಧಾನಿ ದೇವೇಗೌಡ
ನನ್ನ ಪಕ್ಷ ನನ್ನ ಕ್ಷೇತ್ರದ ಬಗ್ಗೆ ಕೇಳಿದರೆ ಹೇಳುತ್ತೇನೆ. ನನ್ನ ಎದುರಾಳಿ ತೆನೆಹೊತ್ತ ಮಹಿಳೆ, ಕಾಂಗ್ರೆಸ್ನ ಹಸ್ತ ಆ ಗುರುತಲ್ಲಿ ಯಾರು ನಿಲುತ್ತಾರೆ ಎನ್ನೋದು ಅವರಿಗೆ ಬಿಟ್ಟ ವಿಚಾರ. ಬಿಜೆಪಿ ಸಂಭವನೀಯ ಅಭ್ಯರ್ಥಿ ಹತ್ತಿರ ಬೇರೆ ಪಕ್ಷ ಬಗ್ಗೆ ಕೇಳಿದರೆ ಹೇಗೆ? ನಾವೆಲ್ಲಾ ಅಣ್ಣ ತಮ್ಮಂದಿರೇ, ಹಾಗಾಗಿ ಏನು ಸಮಸ್ಯೆ ಇಲ್ಲ ಎಂದರು.
ನಾನು ಅವಿರೋಧ ಆಯ್ಕೆಗೆ ರೆಡಿ, ಒಟ್ಟಾರೆ ಹಾಸನ ಅಭಿವೃದ್ಧಿ ಆಗಬೇಕು. ಯಾರು ಅಭಿವೃದ್ಧಿ ಮಾಡಿದ್ದಾರೆ ಸರ್ವೆ ಮಾಡಿಬಿಡಿ. ಕಳೆದ 25 ವರ್ಷದಲ್ಲಿ ನನ್ನ ಐದು ವರ್ಷ ಸೇರಿ ಯಾರು ಹೆಚ್ಚಿನ ಕೆಲಸ ಮಾಡಿದ್ದಾರೆ ಅವರು ಅವಿರೋಧವಾಗಿ ಆಯ್ಕೆಯಾಗಲಿ. ಹೀಗೆ ಅವಿರೋಧ ಮಾಡಲು ಆಗಲ್ಲ ಎಂದೇ ಚುನಾವಣೆ ಮಾಡುವುದು. ಅಭ್ಯರ್ಥಿ ಯಾರಾಗಲಿ ಎಂದು ತೀರ್ಮಾನ ಆಗಲಿ ಬಿಡಿ. ಹೊಳೆನರಸೀಪುರದಲ್ಲಿ ಸ್ಪರ್ಧೆ ಮಾಡುತ್ತಿದ್ದ ರೇವಣ್ಣ 30 ಕಿಲೋಮೀಟರ್ ದೂರ ಬರುತ್ತಾರೆ ಅಷ್ಟೇ. ಅದರಲ್ಲಿ ವ್ಯತ್ಯಾಸ ಇಲ್ಲ. ನಾನು ಏನು ಮಾತಾಡಿದ್ದೇನೆ ಅದಕ್ಕೆ ಈಗಲು ನಾನು ಬದ್ಧ. ರೇವಣ್ಣಗೆ ಹಾಕಿರುವ ಐವತ್ತು ಸಾವಿರ ಅಂತರದ ಗೆಲುವಿನ ಸವಾಲಿಗೆ ಬದ್ದ ಎಂದು ಪುನರುಚ್ಚಾರ ಮಾಡಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:21 pm, Sun, 19 February 23