AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳಾ ಐಎಎಸ್ ಅಧಿಕಾರಿ ಪುರುಷ ಅಧಿಕಾರಿಗಳಿಗೆ ಈ ರೀತಿಯ ಪಿಕ್ಸ್ ಕಳಿಸಿದ್ರೆ ಏನರ್ಥ? ರೋಹಿಣಿ ಸಿಂಧೂರಿ ವಿರುದ್ಧ ಡಿ. ರೂಪ ಮತ್ತೊಂದು ಅಸ್ತ್ರ

IAS vs IPS Fight: ರೋಹಿಣಿ ಸಿಂಧೂರಿ ವಿರುದ್ಧ 19 ಆರೋಪಗಳ ಪಟ್ಟಿ ಪೋಸ್ಟ್ ಮಾಡಿದ್ದ ರೂಪ ಅವರು ಈಗ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ರೋಹಿಣಿ ಸಿಂಧೂರಿ ಅವರ ಕೆಲವು ಖಾಸಗಿ ಫೋಟೋಗಳನ್ನು ಹರಿಬಿಟ್ಟಿದ್ದಾರೆ.

TV9 Web
| Updated By: ಆಯೇಷಾ ಬಾನು|

Updated on:Feb 19, 2023 | 1:53 PM

Share

ಬೆಂಗಳೂರು: ರೋಹಿಣಿ ಸಿಂಧೂರಿ(Rohini Sindhuri) ಮತ್ತು ಡಿ.ರೂಪ(D Roopa) ಪೋಸ್ಟ್ ವಾರ್ ಮುಂದುವರೆದಿದೆ. ರೋಹಿಣಿ ಸಿಂಧೂರಿ ವಿರುದ್ಧ 19 ಆರೋಪಗಳ ಪಟ್ಟಿ ಪೋಸ್ಟ್ ಮಾಡಿದ್ದ ರೂಪ ಅವರು ಈಗ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ರೋಹಿಣಿ ಸಿಂಧೂರಿ ಅವರ ಕೆಲವು ಖಾಸಗಿ ಫೋಟೋಗಳನ್ನು ಹರಿಬಿಟ್ಟಿದ್ದಾರೆ. ಇನ್ನು ಮತ್ತೊಂದೆಡೆ ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ ಫೋಸ್ಟ್ ವಾರ್​​​ ವಿಚಾರಕ್ಕೆ ಸಂಬಂಧಿಸಿ ಟಿವಿ9ಗೆ ಐಪಿಎಸ್​ ಅಧಿಕಾರಿ ಡಿ.ರೂಪಾ ಪ್ರತಿಕ್ರಿಯೆ ನೀಡಿದ್ದಾರೆ.

ರೋಹಿಣಿ ಸಿಂಧೂರಿ ರಾಜೀ ಸಂಧಾನಕ್ಕೆ ಹೋಗುವ ಅಗತ್ಯವೇನಿತ್ತು? IAS ಅಧಿಕಾರಿ ಆಗಿ ರಾಜಕಾರಣಿಗಳ ಬಳಿ ಸಂಧಾನಕ್ಕೆ ಯಾಕೆ ಹೋಗ್ಬೇಕು? ರೋಹಿಣಿ ಏನಾದರೂ ಭ್ರಷ್ಟಾಚಾರ, ಕರ್ತವ್ಯಲೋಪ ಎಸಗಿದ್ದಾರಾ? ಏನೋ ಮುಚ್ಚಿಡುವ ಕೆಲಸ ರೋಹಿಣಿ ಸಿಂಧೂರಿ ಮಾಡ್ತಿದ್ದಾರೆ. ನಾನು ಮಾಡಿದ ಎಲ್ಲಾ ಆರೋಪಗಳಿಗೆ ದಾಖಲೆ ಇದೆ. ಡಿ.ಕೆ.ರವಿ ಜತೆ ನಡೆಸಿದ್ದ ಸಿಂಧೂರಿ ವಾಟ್ಸಾಪ್​ ಚಾಟ್​ ನೋಡಿದ್ದೇನೆ. ಇಂತಹ ಅನೇಕ ವಿಚಾರಗಳು ನನ್ನ ಗಮನಕ್ಕೆ ಬಂದಿವೆ. ರೋಹಿಣಿ ನಡವಳಿಕೆಯ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಅಧಿಕಾರಿಗಳಿಗೆ ಫೋಟೋ ಕಳುಹಿಸಿರುವ ದಾಖಲೆ ನನ್ನ ಬಳಿ ಇದೆ. ಒಬ್ಬ ಮಹಿಳೆ ಪುರುಷರಿಗೆ ಫೋಟೋ ಕಳುಹಿಸ್ತಾರೆ ಅಂದ್ರೆ ಏನರ್ಥ? ಶಾಸಕರೊಬ್ಬರು ಐಎಎಸ್ ಅಧಿಕಾರಿ​ ವಿರುದ್ಧ ಆರೋಪ ಮಾಡಿದ್ದಾರೆ. ಆರೋಪ ಮಾಡಿದ ಶಾಸಕರ ಜತೆ ಸಂಧಾನಕ್ಕೆ ಹೋಗಿದ್ದು ಎಷ್ಟು ಸರಿ? ಶಾಸಕರ ಬಳಿ IAS​ ಅಧಿಕಾರಿ ಸಂಧಾನಕ್ಕೆ ಹೋಗಿದ್ದು ಇದೇ ಮೊದಲು ಎಂದು ಐಪಿಎಸ್​ ಅಧಿಕಾರಿ ಡಿ.ರೂಪಾ ರೋಹಿಣಿ ಸಿಂಧೂರಿ ವಿರುದ್ಧ ಆರೋಪಗಳ ಸುರಿಮಳೆ ಗೈದಿದ್ದಾರೆ.

ಇದನ್ನೂ ಓದಿ: IAS vs IPS Fight: ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ 19 ಆರೋಪಗಳ ಪಟ್ಟಿ, ಡಿ.ಕೆ.ರವಿ ಹೆಸರು ಉಲ್ಲೇಖ

ರೋಹಿಣಿ ಸಿಂಧೂರಿ ಖಾಸಗಿ ಚಿತ್ರ ಫೋಸ್ಟ್ ಮಾಡಿದ ಡಿ. ರೂಪ

ಡಿ. ರೂಪ ಅವರು ರೋಹಿಣಿ ಸಿಂಧೂರಿ ಅವರ ಕೆಲವು ಖಾಸಗಿ ಚಿತ್ರಗಳನ್ನು ಫೋಸ್ಟ್ ಮಾಡಿದ್ದು ಪ್ರಶ್ನೆಗಳನ್ನು ಮಾಡಿದ್ದಾರೆ. ಈ ರೀತಿಯ ಪಿಕ್ಚರ್ಸ್ normal ಅನ್ನಿಸಬಹುದು. ಆದರೆ, ಒಬ್ಬ ಮಹಿಳಾ ಐಎಎಸ್ ಅಧಿಕಾರಿ ಒಂದಲ್ಲ, ಎರಡಲ್ಲ ಮೂರು ಐಎಎಸ್ ಪುರುಷ ಅಧಿಕಾರಿಗಳಿಗೆ ಆಗಾಗ ಇವುಗಳನ್ನು ಹಾಗೂ ಈ ರೀತಿಯ ಅನೇಕ ಪಿಕ್ಸ್ ಗಳ one to one ಕಳಿಸ್ತಾರೆ ಅಂದ್ರೆ ಅದಕ್ಕೆ ಏನರ್ಥ? ಇದು ಆಕೆಯ private matter ಆಗುವುದಿಲ್ಲ ಐಎಎಸ್ SERVICE CONDUCT RULES ಪ್ರಕಾರ ಅಪರಾಧ. ಈ ಪಿಕ್ಸ್ ಗಳ ನೈಜತೆ ಬಗ್ಗೆ ಯಾವುದೇ ತನಿಖಾ ಸಂಸ್ಥೆ ಕೂಡಾ investigate ಮಾಡಬಹುದು. ಸಲೂನ್ haircut chitra, ತಲೆದಿಂಬು ಇತ್ತು ಮಲಗಿ ತೆಗೆದಿರುವ ಚಿತ್ರ. Normal ಅನ್ನಿಸಬಹುದು ಕೆಲವರಿಗೆ. ಕಳಿಸಿರುವ ಸನ್ನಿವೇಶ speaks otherwise. ಎಂದು ತಮ್ಮ ಫೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:45 pm, Sun, 19 February 23