ಬೆಂಗಳೂರಿನಲ್ಲಿ ಅಮೆರಿಕಾ ಕಾನ್ಸುಲೇಟ್ ಕಚೇರಿ ಆರಂಭಿಸಲು ಬ್ಲಿಂಕನ್​ಗೆ ಮನವಿ ಸಲ್ಲಿಸುತ್ತೇನೆ: ವಿದೇಶಾಂಗ ಸಚಿವ ಜೈಶಂಕರ್

ಬೆಂಗಳೂರು ನಗರವಾಸಿಗಳ ಹಾಗೂ ಕರ್ನಾಟಕದ ಬಹುದಿನಗಳ ಬೇಡಿಕೆಯಾಗಿರುವ ಅಮೆರಿಕ ಕಾನ್ಸುಲೇಟ್ ಕಚೇರಿಯನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಲು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ರಿಗೆ ಮನವಿ ಸಲ್ಲಿಸುತ್ತೇನೆ ಎಂದು ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಹೇಳಿದರು.

ಬೆಂಗಳೂರಿನಲ್ಲಿ ಅಮೆರಿಕಾ ಕಾನ್ಸುಲೇಟ್ ಕಚೇರಿ ಆರಂಭಿಸಲು ಬ್ಲಿಂಕನ್​ಗೆ ಮನವಿ ಸಲ್ಲಿಸುತ್ತೇನೆ: ವಿದೇಶಾಂಗ ಸಚಿವ ಜೈಶಂಕರ್
ಎಸ್ ಜೈಶಂಕರ್ ಮತ್ತು ತೇಜಸ್ವಿ ಸೂರ್ಯ
Follow us
|

Updated on:Mar 24, 2023 | 7:52 PM

ಬೆಂಗಳೂರು: ನಗರವಾಸಿಗಳ ಹಾಗೂ ಕರ್ನಾಟಕದ ಬಹುದಿನಗಳ ಬೇಡಿಕೆಯಾಗಿರುವ ಅಮೆರಿಕ ಕಾನ್ಸುಲೇಟ್ ಕಚೇರಿಯನ್ನು (US consulate Office) ಬೆಂಗಳೂರಿನಲ್ಲಿ ಪ್ರಾರಂಭಿಸಲು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ (Antony John Blinken) ಅವರಿಗೆ ಮನವಿ ಸಲ್ಲಿಸುತ್ತೇನೆ ಎಂದು ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ (S Jaishankar) ಹೇಳಿದರು. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ನೇತೃತ್ವದಲ್ಲಿ ಇಂದು (ಮಾರ್ಚ್ 24) ನಡೆದ BJYM ಯುವ ಸಂವಾದ ಕಾರ್ಯಕ್ರಮದಲ್ಲಿ ಬೆಂಗಳೂರು ದೇಶದ ಐಟಿ ರಪ್ತು ಮಾಡುವಲ್ಲಿ ಅತ್ಯಂತ ಪ್ರಮುಖ ನಗರವಾಗಿದ್ದು, ಇಲ್ಲಿ ಯುಎಸ್ ಕಾನ್ಸುಲೇಟ್ ಕಚೇರಿ ಏಕಿಲ್ಲ? ಎಂಬ ಸಂಸದರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಕುರಿತು ಶೀಘ್ರವೇ ಕ್ರಮ ಕೈಗೊಳ್ಳುವ ಕುರಿತು ಭರವಸೆ ನೀಡಿದರು.

“ನಾನು ಬೆಂಗಳೂರಿನ ನಿವಾಸಿಗಳ ದೃಷ್ಟಿಕೋನದಲ್ಲಿ ನಿಮ್ಮ (ತೇಜಸ್ವೀ ಸೂರ್ಯ) ಪ್ರಶ್ನೆಗೆ ಸಕಾರಾತ್ಮಕ ಉತ್ತರ ನೀಡಬಹುದು. ಆದರೆ, ಅಮೆರಿಕ ಸರ್ಕಾರ ಈ ಕುರಿತು ನಿರ್ಣಯ ತೆಗೆದುಕೊಳ್ಳಬೇಕಾದ್ದರಿಂದ ಅಲ್ಲಿನ ಸರ್ಕಾರಕ್ಕೆ ಬೆಂಗಳೂರಿಗರ ಸಂದೇಶ ತಲುಪಿಸುವ ಕಾರ್ಯ ಮಾಡುತ್ತೇನೆ. ಮುಂದಿನ ಬಾರಿ ಅಮೇರಿಕಾ ವಿದೇಶಾಂಗ ಕಾರ್ಯದರ್ಶಿಗಳನ್ನು ಭೇಟಿಯಾದಾಗ ಈ ಕುರಿತು ಖಂಡಿತ ಪ್ರಸ್ತಾಪ ಮಾಡುತ್ತೇನೆ” ಎಂದು ತಮ್ಮದೇ ಶೈಲಿಯಲ್ಲಿ ವಿದೇಶಾಂಗ ಸಚಿವರು ಉತ್ತರಿಸಿದರು.

ಯುವ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಾ.ಜೈಶಂಕರ್, ಜಿ -20 ಶೃಂಗಸಭೆ, ರಷ್ಯಾ, ಚೀನಾ ಸಂಬಂಧಗಳು, ಕ್ವಾಡ್ ರಾಷ್ಟ್ರಗಳು, ಸಿರಿಯಾ, ಟರ್ಕಿ, ಆಫ್ಘಾನಿಸ್ತಾನಕ್ಕೆ ಭಾರತ ಮಾನವೀಯ ನೆಲೆಯಲ್ಲಿ ಒದಗಿಸಿದ ಸಹಾಯ ಸೇರಿದಂತೆ ಹಲವಾರು ಜಾಗತಿಕ ವಿದ್ಯಮಾನಗಳಿಗೆ ಸಂಬಂಧಿಸಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು.

ಇದನ್ನೂ ಓದಿ: Tejasvi Surya: ಮುಂದಿನ ಸಿಎಂ ಕುರಿತ ಬೊಮ್ಮಾಯಿ ಹೇಳಿಕೆ ನೂರಕ್ಕೆ ನೂರು ನಿಜ; ತೇಜಸ್ವಿ ಸೂರ್ಯ

ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸದ ಸೂರ್ಯ, ಇಡೀ ದೇಶದ ಆರ್ಥಿಕತೆಗೆ ಬೆಂಗಳೂರು ಮತ್ತು ಕರ್ನಾಟಕ ಗಣನೀಯ ಕೊಡುಗೆ ನೀಡುತ್ತಿದ್ದು, ಕಳೆದ 4 ವರ್ಷಗಳಲ್ಲಿ ಅತೀ ಹೆಚ್ಚಿನ ವಿದೇಶಿ ಬಂಡವಾಳ ಹೂಡಿಕೆ ಆಕರ್ಷಣೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ರಾಷ್ಟ್ರೀಯ ನಾವೀನ್ಯತಾ ಸೂಚ್ಯಂಕದಲ್ಲಿಯೂ ಕೂಡ ಅಗ್ರಗಣ್ಯ ಪ್ರಥಮ ಸ್ಥಾನದಲ್ಲಿದೆ. ದೇಶದ 500 ಫಾರ್ಚ್ಯೂನ್ ಕಂಪನಿಗಳಲ್ಲಿ 400 ಕಂಪನಿಗಳು ಬೆಂಗಳೂರಿನಲ್ಲಿವೆ. ಮುಂದಿನ 15 ವರ್ಷಗಳಲ್ಲಿ ವಿಶ್ವದ ಅತೀ ವೇಗದ ಬೆಳವಣಿಗೆ ಹೊಂದಲಿರುವ ನಗರಗಳ ಪಟ್ಟಿಯಲ್ಲಿ ನಮ್ಮ ಬೆಂಗಳೂರು ಅಗ್ರಗಣ್ಯವಾಗಿದೆ ಎಂದರು.

ಇದೆಲ್ಲದರ ಜೊತೆಗೆ ರಕ್ಷಣಾ, ವಿಮಾನಯಾನ ಕ್ಷೇತ್ರದ, ಬಾಹ್ಯಾಕಾಶ ಕ್ಷೇತ್ರದ ಶೇ.65 ರಷ್ಟು ಬಹುಮುಖ್ಯ ಉಪಕರಣಗಳು ತಯಾರಾಗುವುದು ಕೂಡ ನಮ್ಮ ಬೆಂಗಳೂರಿನಲ್ಲಿ ಎನ್ನುವುದು ಗಮನಾರ್ಹ. ಶೇ.50 ರಷ್ಟು ಯೂನಿಕಾರ್ನ್​ಗಳು ನಮ್ಮ ರಾಜ್ಯದಲ್ಲಿ ಪ್ರಾರಂಭವಾಗಿ, ಇಲ್ಲಿಯೇ ಕಾರ್ಯಾಚರಣೆ ಕೂಡ ನಡೆಸುತ್ತಿವೆ. ಅತೀ ಹೆಚ್ಚಿನ ಪ್ರಮಾಣದ ಮೆಟ್ರೋ ರೈಲು ಸಂಪರ್ಕ ಹೊಂದಿದ ನಗರ ನಮ್ಮ ಬೆಂಗಳೂರು. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಡಬಲ್ ಎಂಜಿನ್ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಪ್ರಗತಿಯಾಗಿದೆ” ಎಂದು ತಿಳಿಸಿದರು.

ವಿಜ್ಞಾನ, ತಂತ್ರಜ್ಞಾನ, ಐಟಿ, ಬಿಟಿ ಕ್ಷೇತ್ರಗಳಲ್ಲಿ ಅಗಾಧ ಪ್ರಗತಿ ಸಾಧಿಸಿರುವ ಬೆಂಗಳೂರು ನಗರಕ್ಕೆ ಅಮೆರಿಕ ಕಾನ್ಸುಲೇಟ್ ಕಚೇರಿ ಸ್ಥಾಪನೆ ಕುರಿತು, ಮಾನ್ಯ ಸಂಸದ ತೇಜಸ್ವಿ ಸೂರ್ಯ ಅವರು, ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ರವರಿಗೆ 2019 ರಲ್ಲಿ ಮನವಿ ಸಲ್ಲಿಸಿದ್ದಾರೆ. ಭಾರತದಲ್ಲಿನ ಅಮೆರಿಕ ರಾಯಭಾರಿ ಡಾ. ಕೆನೆತ್ ಜಸ್ಟರ್ ಅವರಿಗೂ 2020 ರ ಮಾರ್ಚ್ ತಿಂಗಳಲ್ಲಿ ಮನವಿ ಸಲ್ಲಿಸಿದ್ದರು. ಆದರೆ ಬೆಂಗಳೂರಿಗರ ಬಹುದಿನಗಳ ಬೇಡಿಕೆಗೆ ಇಂದಿನ ಯುವ ಸಂವಾದ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವರಿಂದಲೇ ಭರವಸೆ ಸಿಕ್ಕಿದೆ.

ರಾಜ್ಯದ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ರೀತಿಯ ಹಲವಾರು ಕಾರ್ಯಕ್ರಮಗಳನ್ನು ಯುವ ಸಂವಾದ ವೇದಿಕೆ ಅಡಿ ನಡೆಸಲು ಇಚ್ಚಿಸಲಾಗಿದ್ದು, ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸೇರಿದಂತೆ ಬಿಜೆಪಿಯ ಇನ್ನೂ ಅನೇಕ ನಾಯಕರೊಂದಿಗೆ ಏರ್ಪಡಿಸಲು ನಿರ್ಧರಿಸಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:52 pm, Fri, 24 March 23