AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru: ಆಟೋ ಚಾಲಕರಿಗೆ ಕೌಂಟರ್ ಕೊಟ್ಟ ಬೈಕ್ ಟ್ಯಾಕ್ಸಿ ಚಾಲಕರು

ನಮಗೆ ಬೈಕ್ ಟ್ಯಾಕ್ಸಿ ಒಂದು ಹೊತ್ತಿನ ಅನ್ನ ನೀಡುತ್ತಿದೆ. ಆಟೋ‌ ಚಾಲಕರು ನಮ್ಮನ್ನು ಹಿಡಿದು ಹೊಡಿತಾರೆ. ಬೆಲೆ ಬಾಳುವ ಮೊಬೈಲ್ ಒಡೆದು ಹಾಕುತ್ತಾರೆ. ಬೈಕ್ ಟ್ಯಾಕ್ಸಿ ಚಾಲಕರ ಮೇಲೆ ಆಗುತ್ತಿರುವ ದಬ್ಬಾಳಿಕೆ ತಡೆಗಟ್ಟಬೇಕು ಎಂದು ಬೈಕ್ ಟ್ಯಾಕ್ಸಿ ಚಾಲಕರು ಒತ್ತಾಯಿಸುವ ಮೂಲಕ ಆಟೋ ಚಾಲಕರಿಗೆ ಕೌಂಟರ್ ಕೊಟ್ಟಿದ್ದಾರೆ.

Bengaluru: ಆಟೋ ಚಾಲಕರಿಗೆ ಕೌಂಟರ್ ಕೊಟ್ಟ ಬೈಕ್ ಟ್ಯಾಕ್ಸಿ ಚಾಲಕರು
ಸಾಂದರ್ಭಿಕ ಚಿತ್ರ
ಕಿರಣ್ ಹನುಮಂತ್​ ಮಾದಾರ್
ಕಿರಣ್ ಹನುಮಂತ್​ ಮಾದಾರ್| Edited By: |

Updated on:Mar 19, 2023 | 12:21 PM

Share

ಬೆಂಗಳೂರು: ಆಟೋ ಚಾಲಕರಿಗೆ( (Auto Drivers)  ಬೈಕ್ ಟ್ಯಾಕ್ಸಿ ಚಾಲಕರು ಕೌಂಟರ್ ಕೊಟ್ಟಿದ್ದಾರೆ. ಹೌದು ರ್ಯಾಪಿಡೋ ಬೈಕ್​ ಟ್ಯಾಕ್ಸಿ (Rapido bike taxi)ಯನ್ನು ನಿಷೇಧಿಸಿ ಎಂದು ಸರ್ಕಾರಕ್ಕೆ(Karnataka Government) ಆಟೋ ಚಾಲಕರು ಒತ್ತಾಯ ಮಾಡಿದ್ದು, ನಾಳೆ(ಮಾ.20) ರಂದು ಬೆಂಗಳೂರಿನಲ್ಲಿ ಆಟೋ ಬಂದ್​ ಮಾಡಲು ತೀರ್ಮಾನಿಸಿದ್ದಾರೆ.ಇದೀಗ ಇದಕ್ಕೆ ಕೌಂಟರ್​ ಕೊಟ್ಟಿರುವ ಬೈಕ್ ಟ್ಯಾಕ್ಸಿ ಚಾಲಕರು, ಬೇಕೆ ಬೇಕು ಬೈಕ್ ಟ್ಯಾಕ್ಸಿ ಬೇಕೆಂದು ಪ್ರತಿಭಟನೆ ನಡೆಸಿದ್ದಾರೆ. ಯುವಕರು ನಿರೋದ್ಯೋಗಿಗಳಾಗಿದ್ದಾರೆ. ಸರ್ಕಾರ ಜಾಬ್ ಕೊಡುತ್ತಾಯಿದೆಯಾ ಎಂದು ಪ್ರಶ್ನಿಸಿದ್ದಾರೆ. ಟ್ರಾಫಿಕ್ ಜಾಮ್​ನಲ್ಲಿ ಜನ ಸಿಲುಕಿದ್ದಾಗ ನಾವು ಬೈಕ್ ಟ್ಯಾಕ್ಸಿ ಮೂಲಕ ಸಲ್ಯೂಷನ್ ನೀಡಿದ್ದೇವೆ ಎಂದಿದ್ದಾರೆ.

ಯುವಕರು ಕೆಲಸ ಇಲ್ಲವೆಂದು ಸುಸೈಡ್ ಮಾಡಿಕೊಳ್ಳುತ್ತಿದ್ದಾರೆ. ನಮಗೆ ಬೈಕ್ ಟ್ಯಾಕ್ಸಿ ಒಂದು ಹೊತ್ತಿನ ಅನ್ನ ನೀಡುತ್ತಿದೆ. ಆಟೋ‌ ಚಾಲಕರು ನಮ್ಮನ್ನು ಹಿಡಿದು ಹೊಡಿತಾರೆ. ಬೆಲೆ ಬಾಳುವ ಮೊಬೈಲ್ ಒಡೆದು ಹಾಕುತ್ತಾರೆ. ನಾವು ಹೆಲ್ಮೆಟ್ ಹಾಕುತ್ತೇವೆ ಜೊತೆಗೆ 5 ಲಕ್ಷದ ವಿಮೆ ಮಾಡುವ ಮೂಲಕ ಸೇಫ್ಟಿ ಕಾಪಾಡುತ್ತೇವೆ. ಆಟೋ ಖರೀದಿ ಮಾಡುವಷ್ಟು ದುಡ್ಡು ನಮ್ಮ ಹತ್ತಿರ ಇಲ್ಲ. ನಮಗೆ ನ್ಯಾಯಬೇಕು, ಬೈಕ್ ಟ್ಯಾಕ್ಸಿ ಚಾಲಕರ ಮೇಲೆ ಆಗುತ್ತಿರುವ ದಬ್ಬಾಳಿಕೆ ತಡೆಗಟ್ಟಬೇಕು ಎಂದು ಬೈಕ್ ಟ್ಯಾಕ್ಸಿ ಚಾಲಕರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಸಾರಿಗೆ ನೌಕರರ ಮುಷ್ಕರ್​ ವಾಪಸ್​: ಒಕ್ಕೂಟದಲ್ಲೇ ಭಿನ್ನಮತ ಸ್ಫೋಟ

ರ್ಯಾಪಿಡೋ ಬೈಕ್​ ಟ್ಯಾಕ್ಸಿಯನ್ನು ನಿಷೇಧಿಸಿ ಎಂದು ಸರ್ಕಾರಕ್ಕೆ ಆಟೋ ಚಾಲಕರ ಒತ್ತಾಯ

ರಾಜಧಾನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರ್ಯಾಪಿಡೋ ಬೈಕ್​ ಟ್ಯಾಕ್ಸಿಯನ್ನು ನಿಷೇಧಿಸಿ ಎಂದು ಆಟೋ ಚಾಲಕರು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ. ಈಗ ಮತ್ತೆ ರ್ಯಾಪಿಡೋ ಬೈಕ್​ ಟ್ಯಾಕ್ಸಿಯನ್ನು ನಿಷೇಧಿಸುವಂತೆ ನಗರದ 21 ಆಟೋ ಚಾಲಕರ‌ ಸಂಘಟನೆಗಳು ರಾಜ್ಯ ಸರ್ಕಾರಕ್ಕೆ  ಒತ್ತಾಯ ಮಾಡಿವೆ. ಈ ಹಿನ್ನಲೆ ನಾಳೆ(ಮಾ.20) ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಟೋ ಚಾಲಕರಿಂದ ಮುಷ್ಕರಕ್ಕೆ ಕರೆ ನೀಡಲಾಗಿದೆ. ಇಂದು ಮಧ್ಯರಾತ್ರಿ 12 ಗಂಟೆಯಿಂದ ನಾಳೆ ಮಧ್ಯರಾತ್ರಿಯವರೆಗೆ ಆಟೋ ಸಂಚಾರ ಸಂಪೂರ್ಣ ಬಂದ್ ಆಗಲಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:55 am, Sun, 19 March 23

Follow Us
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್