Viral Video: 76% ಅಂಗವೈಕಲ್ಯ ಹೊಂದಿರುವ ವ್ಯಕ್ತಿ ಮ್ಯಾರಾಥಾನ್ ಪೂರ್ಣಗೊಳಿಸಿದ್ದಾರೆ; ಇದು ವಿಶ್ವದಲ್ಲೇ ಮೊದಲು!
76% ಅಂಗವಿಕಲರಾಗಿರುವ ರೋಕಾ 42 ಕಿಮೀ ಮ್ಯಾರಥಾನ್ ಅನ್ನು ಪೂರ್ಣಗೊಳಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಸ್ಪ್ಯಾನಿಷ್ ಅಥ್ಲೀಟ್ ಅಲೆಕ್ಸ್ ರೋಕಾ (Alex Roca) ಅವರಿಗೆ ದೈಹಿಕ ದೌರ್ಬಲ್ಯವಿದ್ದರೂ ಅದನ್ನು ಮೆಟ್ಟಿ ನಿಂತು ಜಗತ್ತಿನಾದ್ಯಂತ ಜನರ ಹೃದಯವನ್ನು ಗೆದ್ದಿದ್ದಾರೆ. 76% ಅಂಗವಿಕಲರಾಗಿರುವ ರೋಕಾ 42 ಕಿಮೀ ಮ್ಯಾರಥಾನ್ (Marathon) ಅನ್ನು ಪೂರ್ಣಗೊಳಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ಸಖತ್ ವೈರಲ್ ಆಗಿದೆ. ಈ ವಿಡಿಯೋ, ರೋಕಾ ಅವರು ಹೇಗೆ ಮ್ಯಾರಥಾನ್ ಅನ್ನು ಓಡುತ್ತಾರೆ, ಮತ್ತು ಮುಗಿದ ನಂತರ ಅವರ ಮುಖ್ದ ಮೇಲೆ ಕಾಣುವ ಸಂತೋಷವನ್ನು ಸೆರೆಹಿಡಿದಿದೆ. ಮ್ಯಾರಥಾನ್ ಅನ್ನು ಪೂರ್ಣಗೊಳಿಸುವುದು ಒಂದು ಸವಾಲಿನ ಕೆಲಸವಾಗಿದ್ದು, ತಿಂಗಳುಗಳ ತಯಾರಿ, ತರಬೇತಿ ಜೊತೆಗೆ ಮನೋಸ್ಥೈರ್ಯದ ಅಗತ್ಯವಿರುತ್ತದೆ. ಇದೀಗ ರೊಖಾ ಅವರ ಅದ್ಭುತ ಸಾಧನೆ ಜನರನ್ನು ಬೆರಗುಗೊಳಿಸಿದೆ.
ರೋಕಾ ಸೆರೆಬ್ರಲ್ ಪಾಲ್ಸಿ ಹೊರತಾಗಿಯೂ ಮ್ಯಾರಥಾನ್ ಅನ್ನು ಪೂರ್ಣಗೊಳಿಸಿದರು. ಕೆನಡಿಯನ್ ರನ್ನಿಂಗ್ ಮ್ಯಾಗಜೀನ್ ವರದಿ ಪ್ರಕಾರ, ರೋಕಾ ಬಾರ್ಸಿಲೋನಾ ಮ್ಯಾರಥಾನ್ ಅನ್ನು ಐದು ಗಂಟೆ, 50 ನಿಮಿಷ ಮತ್ತು 51 ಸೆಕೆಂಡುಗಳ ಅತ್ಯುತ್ತಮ ಸಮಯದೊಂದಿಗೆ ಮುಗಿಸಿದರು.
ತನ್ನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ರೋಕಾ,“ಇತಿಹಾಸವನ್ನು ಮಾಡಲಾಗಿದೆ! 76% ಅಂಗವೈಕಲ್ಯ ಹೊಂದಿರುವ ವಿಶ್ವದ ಮೊದಲ ವ್ಯಕ್ತಿ 42.195 ಕಿ.ಮೀ. ಮ್ಯಾರಾಥಾನ್ ಅನ್ನು ಪೂರ್ಣಗೊಳಿಸಿದ್ದಾನೆ. ಇದನ್ನು ಸಾಧ್ಯವಾಗುವಂತೆ ಮಾಡಿದ ನನ್ನ ತಂಡಕ್ಕೆ ಧನ್ಯವಾದ. ಹುರಿದುಂಬಿಸಿದ ಎಲ್ಲರಿಗೂ ಧನ್ಯವಾದಗಳು. ನನಗೆ ಮಾತೆ ಬರುತ್ತಿಲ್ಲ.” ಎಂದು ಬರೆದಿದ್ದಾರೆ. ರೋಕಾಗೆ ಸೆರೆಬ್ರಲ್ ಪಾಲ್ಸಿ ಇರುವುದರಿಂದ, ದೈನಂದಿನ ಕೆಲಸ ಮಾಡವುದು ಸವಾಲಾಗಿದೆ. ಇಂತಹ ಕಾಯಿಲೆ ಇದ್ದರೂ, ರೋಕಾ ಈ ಮ್ಯಾರಥಾನ್ ಅನ್ನು ಮುಗಿಸಿದ್ದು ಅಸಾಮಾನ್ಯವೇ ಸರಿ.
Making History!
First person on the PLANET with 76% disability who managed to finish a MARATHON!
— Kevin W. (@Brink_Thinker) March 21, 2023
ರೋಕಾ ಅವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ 200,000 ಲೈಕ್‌ಗಳು ಮತ್ತು ವಿವಿಧ ಪ್ರೋತ್ಸಾಹದಾಯಕ ಕಾಮೆಂಟ್‌ಗಳನ್ನು ಸ್ವೀಕರಿಸಿದೆ. ನೈಕಿ ಬ್ರಾಂಡ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ರೋಕಾ ಅವರ ಛಾಯಾಚಿತ್ರಗಳನ್ನು ಸಹ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ವಿಶ್ವದ ಅತ್ಯಂತ ವೇಗದ ಮಹಿಳೆ, ಓ’ನೀಲ್‌ಗೆ ಗೂಗಲ್ ಡೂಡಲ್ ಗೌರವ
“ಅಲೆಕ್ಸ್ ವಿಶ್ವ-ದರ್ಜೆಯ ಪ್ರಗತಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 76% ದೈಹಿಕ ಅಸಾಮರ್ಥ್ಯ ಮತ್ತು ಸೆರೆಬ್ರಲ್ ಪಾಲ್ಸಿಯೊಂದಿಗೆ ಮ್ಯಾರಥಾನ್ ಅನ್ನು ಪೂರ್ಣಗೊಳಿಸಿದರು. ಇದೀಗ ಅವರು ಆ ಮೈಲಿಗಲ್ಲು ಸಾಧಿಸಿದ್ದಾರೆ. ಇದು ಸಂತೋಷದ ಸಮಯವಾಗಿದೆ, ಆದರೆ ಹೊಸ ಗುರಿಗಳು ಶೀಘ್ರದಲ್ಲೇ ಕಾಣಿಸಿಕೊಳ್ಳುತ್ತವೆ. ಹೊಸ ಸವಾಲುಗಳನ್ನು ಹುಡುಕುವುದನ್ನು ಎಂದಿಗೂ ಇವರು ನಿಲ್ಲಿಸುವುದಿಲ್ಲ ”ಎಂದು ನೈಕಿ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದೆ.
Published On - 2:55 pm, Fri, 24 March 23