Kitty O’neil: ವಿಶ್ವದ ಅತ್ಯಂತ ವೇಗದ ಮಹಿಳೆ, ಓ’ನೀಲ್‌ಗೆ ಗೂಗಲ್ ಡೂಡಲ್ ಗೌರವ
Google Doodle Today:ಗೂಗಲ್ ಡೂಡಲ್ ಶುಕ್ರವಾರ ಕಿಟ್ಟಿ ಓ'ನೀಲ್ ಅವರಿಗೆ ಗೌರವ ಸಲ್ಲಿಸಿದೆ. 77ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಗೂಗಲ್, ಇವರು ಜೀವನದ ಸಾಹಸ ಮತ್ತು ಸಾಧನೆಯ ಬಗ್ಗೆ ಈ ಮೂಲಕ ತಿಳಿಸಿದೆ.
ಗೂಗಲ್ ಡೂಡಲ್ (Google Doodle) ಶುಕ್ರವಾರ ಕಿಟ್ಟಿ ಓ’ನೀಲ್ ಅವರಿಗೆ ಗೌರವ ಸಲ್ಲಿಸಿದೆ, ಇವರು ಅಮೇರಿಕದ ಸ್ಟಂಟ್ ಪ್ರದರ್ಶಕರು. Ms ಓ’ನೀಲ್ ಈ ದಿನ 1946 ರಲ್ಲಿ ಚೆರೋಕೀ ಸ್ಥಳೀಯ ಅಮೇರಿಕನದಲ್ಲಿ ಜನನಿಸಿದರು. ಇವರು ತಾಯಿ ಅಮೆರಿಕಾನ್ ಮತ್ತು ಐರಿಶ್ ತಂದೆ ಆಗಿದ್ದು, ಓ’ನೀಲ್ ಕಾರ್ಪಸ್ ಕ್ರಿಸ್ಟಿ, ಟೆಕ್ಸಾಸ್‌ನಲ್ಲಿ ಜನಿಸಿದರು. ಈಕೆಗೆ ಹುಟ್ಟಿನಿಂದಲ್ಲೇ ಕಿವುಡಾಗಿದ್ದರೂ ಕ್ರೀಡೆಗಳು ಮತ್ತು ಅಪಾಯಕಾರಿ ಸಾಹಸಗಳ ಮೂಲಕ ಅತ್ಯಂತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಾದಿಯನ್ನು ರೂಪಿಸಿದ ಅಸಾಧಾರಣ ಮಹಿಳೆ. ಇದೀಗ ಇವರ 77ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಗೂಗಲ್, ಇವರು ಜೀವನದ ಸಾಹಸ ಮತ್ತು ಸಾಧನೆಯ ಬಗ್ಗೆ ಈ ಮೂಲಕ ತಿಳಿಸಿದೆ. ಇವರ ಬಗ್ಗೆ ಗೂಗಲ್ ತನ್ನ ಮುಖಪುಟದಲ್ಲಿ ತಿಳಿಸಿರುವಂತೆ ಓ’ನೀಲ್ ಹೆಲಿಕಾಪ್ಟರ್‌ನಿಂದ ಜಿಗಿಯುವುದು, ರೇಸ್ ಕಾರನ್ನು ಓಡಿಸುವುದು ಮತ್ತು ನೀಲಿ ಮತ್ತು ಬಿಳಿ ಹಿನ್ನೆಲೆಯಲ್ಲಿ ಕಿತ್ತಳೆ ಬಣ್ಣದ ಸೂಟ್‌ನಲ್ಲಿ ವಿಜಯಶಾಲಿಯಾಗಿ ಪೋಸ್ ನೀಡುವುದನ್ನು ತೋರಿಸಿದೆ.
ಗೂಗಲ್ ಪ್ರಕಾರ, Ms ಓ’ನೀಲ್ ಅವರು ಹಲವಾರು ಕಾಯಿಲೆಗಳಿಗೆ ತುತ್ತಾಗಿದರು, ಈಕೆಗೆ ತೀವ್ರವಾದ ಜ್ವರಕ್ಕೆ ಕಾರಣವಾಯಿತು, ಕೊನೆಯ ಕ್ಷಣದ ವೆರೆಗೂ ಅತ್ಯಂತ ಅದು ಮೌಲ್ಯಯುತವಾಗಿ ಜೀವನ ನಡೆಸಿದ್ದಾರೆ. ಓ’ನೀಲ್ ವಿವಿಧ ರೀತಿಯ ಸಂವಹನ ವಿಧಾನವನ್ನು ಕಲಿತಿದ್ದರು. ತಮ್ಮ ಜೀವನದಲ್ಲಿ ಅನೇಕ ಬದಲಾವಣೆ ಮತ್ತು ಅವರ ಜೀವನದುದ್ದಕ್ಕೂ ವಿಭಿನ್ನ ಸಾಹಸಗಳನ್ನು ಮಾಡಿದ್ದಾರೆ. ತನ್ನ ಕೊನೆಯ ದಿನಗಳಲ್ಲಿ ಓದುವ ಅಭ್ಯಾಸಕ್ಕೆ ಹೆಚ್ಚು ಆದ್ಯತೆ ನೀಡಿದ್ದಾರೆ.
Ms ಓ’ನೀಲ್ ತನ್ನ ಕಿವುಡುತನವನ್ನು ದುರ್ಬಲತೆ ಎಂದುಕೊಂಡಿರಲಿಲ್ಲ, ಅದು ನನ್ನ ಆಸ್ತಿ ಎಂದುಕೊಂಡು ಜೀವನ ನಡೆಸಿದ್ದರು. ತನ್ನ ಕಷ್ಟಗಳ ನಡುವೆಯೂ ವೃತ್ತಿಪರ ಅಥ್ಲೀಟ್ ಆಗುವ ತನ್ನ ಕನಸನ್ನು ನನಸಾಗಿಸುವ ಛಲವನ್ನು ಹೊಂದಿದ್ದರು ಎಂದು ಗೂಗಲ್ ಹೇಳಿದೆ. ಓ’ನೀಲ್ ವಾಟರ್ ಸ್ಕೀಯಿಂಗ್ ಮತ್ತು ಮೋಟಾರ್‌ಸೈಕಲ್ ರೇಸಿಂಗ್‌ನಂತಹ ಹೈ-ಸ್ಪೀಡ್ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದರು. ಒಂದು ರೀತಿಯ ನಿಜವಾದ ಆಕ್ಷನ್-ಪ್ರೇಮಿಯಾಗಿದ್ದರು. ಎತ್ತರದ ಪ್ರದೇಶದಿಂದ ಹಾರುವ ಮತ್ತು ಹೆಲಿಕಾಪ್ಟರ್‌ಗಳಿಂದ ಜಿಗಿಯುವಂತಹ ಅಪಾಯಕಾರಿ ಸಾಹಸಗಳನ್ನು ಕೂಡ ಮಾಡುತ್ತಿದ್ದರು.
ಇದನ್ನೂ ಓದಿ: Google Doodle Today: ಸೂರ್ಯನ ರಾಣಿ ಮಾರಿಯಾ ಟೆಲ್ಕೆಸ್ ಅವರ 122ನೇ ಜನ್ಮ ದಿನ, ಗೂಗಲ್ ಡೂಡಲ್ ಮೂಲಕ ವಿಶೇಷ ಗೌರವ
MS ಓ’ನೀಲ್ 1976 ರಲ್ಲಿ ರಾಕೆಟ್ ಚಾಲಿತ ಕಾರಿನಲ್ಲಿ ಗಂಟೆಗೆ 512.76 ಮೈಲುಗಳ ವೇಗದಲ್ಲಿ ಓರೆಗಾನ್ ರಾಜ್ಯದ ಆಲ್ವರ್ಡ್ ಮರುಭೂಮಿಯಾದ್ಯಂತ ದೊಡ್ಡ ಸಾಹಸವನ್ನು ಕೂಡ ಮಾಡಿದ್ದರು. ಈ ಸಾಧನೆ ಮಾಡಿದ ಅದೆಷ್ಟೋ ಮಹಿಳಾ ಸಾಹಸಿಗರು ದಾಖಲೆಗಲಣ್ನು ಮುರಿದರು. ಈ ಕ್ಷೇತ್ರದಲ್ಲಿ ಪುರುಷರು ಮಾಡಿದ ದಾಖಲೆಗಳನ್ನು ಛಿದ್ರಗೊಳಿಸುವತ್ತ ದೃಷ್ಟಿ ನೆಟ್ಟರು. ಈ ಬಗ್ಗೆ ಅನೇಕ ಕಾನೂನು ಹಾಗೂ ತಂತ್ರಿಕಾ ತೊಂದರೆಗಳು ಉಂಟಾಗಿತ್ತು
ಆದರೆ Ms ಓ’ನೀಲ್ ಪೈಲಟಿಂಗ್ ರಾಕೆಟ್ ಡ್ರ್ಯಾಗ್‌ಸ್ಟರ್ ಮತ್ತು ಜೆಟ್-ಚಾಲಿತ ದೋಣಿಗಳು ಸೇರಿದಂತೆ ಇತರ ದಾಖಲೆಗಳನ್ನು ಮುರಿದರು ದೊಡ್ಡ ಸಾಧನೆಯನ್ನು ಮಾಡಿದ್ದರು. 70ರ ದಶಕದ ಉತ್ತರಾರ್ಧದಲ್ಲಿ, ಅವರು ‘ದಿ ಬ್ಲೂಸ್ ಬ್ರದರ್ಸ್’, ‘ದಿ ಬಯೋನಿಕ್ ವುಮನ್’ ಮತ್ತು ‘ ವಂಡರ್ ವುಮನ್’ ಸೇರಿದಂತೆ ಹಲವಾರು ಸಾಹಸ ಚಲನಚಿತ್ರಗಳಲ್ಲಿ ಸ್ಟಂಟ್ ಡಬಲ್ ಆಗಿ ಸೇವೆ ಸಲ್ಲಿಸಿದರು . ಹಾಲಿವುಡ್‌ನ ಅತ್ಯುತ್ತಮ ಸಾಹಸ ಪ್ರದರ್ಶನಕಾರರ ಸಂಘವಾದ ಸ್ಟಂಟ್ಸ್ ಅನ್‌ಲಿಮಿಟೆಡ್‌ಗೆ ಸೇರಿದ ಮೊದಲ ಮಹಿಳೆ ಕೂಡ ಅವರು. Ms ಓ’ನೀಲ್ 2018ರಲ್ಲಿ ದಕ್ಷಿಣ ಡಕೋಟಾದಲ್ಲಿ ನಿಧನರಾದರು.
Published On - 11:01 am, Fri, 24 March 23