AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬೆಂಗಳೂರಿನಲ್ಲಿ ಹಿಂಬದಿಯಿಂದ ಬಂದು ಪಾದಚಾರಿಗಳನ್ನು ಭಯಗೊಳಿಸುವ ಬೈಕ್ ಸವಾರರು! ಇಬ್ಬರು ಅರೆಸ್ಟ್

ರಸ್ತೆ ಬದಿ ನಡೆದುಕೊಂಡು ಹೋಗುವ ಜನರನ್ನೇ ಗುರಿಯಾಗಿಸುತ್ತಿದ್ದ ಬೈಕ್ ಸವಾರರಿಬ್ಬರು ಹಿಂಬಂದಿಯಿಂದ ಹೋಗಿ ಕಿರುಚಿ ಭಯಗೊಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Viral Video: ಬೆಂಗಳೂರಿನಲ್ಲಿ ಹಿಂಬದಿಯಿಂದ ಬಂದು ಪಾದಚಾರಿಗಳನ್ನು ಭಯಗೊಳಿಸುವ ಬೈಕ್ ಸವಾರರು! ಇಬ್ಬರು ಅರೆಸ್ಟ್
ಬೆಂಗಳೂರಿನಲ್ಲಿ ಪಾದಾಚಾರಿಗಳನ್ನು ಭಯಗೊಳಿಸುವ ಬೈಕ್ ಸವಾರರು
Rakesh Nayak Manchi
|

Updated on:Mar 23, 2023 | 6:06 PM

Share

ಬೆಂಗಳೂರು: ಮಾಡಲು ಬೇರೆ ಕೆಲಸವಿಲ್ಲವೇನೋ.. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ಇಬ್ಬರು ಬೈಕ್ ಸವಾರರು, ಇನ್ನೊಬ್ಬರನ್ನು ಭಯಗೊಳಿಸಿ ವಿಕೃತ ಆನಂದ ಪಡೆಯುತ್ತಿದ್ದರು. ಬೈಕ್ ಚಲಾಯಿಸುತ್ತಾ ಮುಂದೆ ನಡೆದುಕೊಂಡು ಹೋಗುತ್ತಿದ್ದ ಸಾರ್ವಜನಿಕರ ಪಕ್ಕಕ್ಕೆ ಹೋಗಿ ಕರ್ಕಶವಾಗಿ ಕಿರುಚುವ ಮೂಲಕ ಭಯ ಹುಟ್ಟಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗುತ್ತಿದ್ದು, ದುಷ್ಕರ್ಮಿಗಳ ಮಾಹಿತಿ ತಿಳಿದಿದೆಯೇ ಎಂದು ಮಾಹಿತಿ ಕೇಳಲಾಗಿದೆ. ನೆಟ್ಟಿಗರ ಈ ಆಕ್ರೋಶದ ನಡುವೆ ಎಚ್ಚೆತ್ತ ನಗರದ ಜಯನಗರ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವೈರಲ್ ವಿಡಿಯೋದಲ್ಲಿ ಇರುವಂತೆ, ಹಳದಿ ಬಣ್ಣದ ಉಡುಪು ಧರಿಸಿದ ಬೈಕ್ ಸವಾರ ತನ್ನ ಪಾಡಿಗೆ ಮುಂದೆ ನಡೆದುಕೊಂಡು ಹೋಗುವ ಪಾದಚಾರಿಗಳನ್ನು ಗುರಿಯಾಗಿಸಿಕೊಂಡು ಹತ್ತಿರಕ್ಕೆ ಹೋಗಿ ಕರ್ಕಶವಾಗಿ ಕುರುಚುತ್ತಾರೆ. ಒಮ್ಮೆಲೇ ಶಬ್ದ ಕೇಳಿಸಿದ ಕೂಡಲೇ ಅಯ್ಯೋ ನಮ್ ಪಕ್ಕನೇ ಏನೋ ಆಯ್ತು ಎಂದು ಭೀತಿಗೊಂಡು ಪಕ್ಕಕ್ಕೆ ಜಿಗಿಯುವುದನ್ನು ಕಾಣಬಹುದು. ಈ ಅನುಭವ, ನಡೆದುಕೊಂಡು ಹೋಗುತ್ತಿದ್ದಾಗ ನಮ್ಮ ಪಕ್ಕದಲ್ಲೇ ವಾಹನ ಸವಾರರು ಹಾರನ್ ಹಾಕಿದಾಗ ಒಮ್ಮೆಲೆ ಯಾವ ಭಯ ಆವರಿಸುತ್ತದೋ ಅದೇ ರೀತಿ ಈ ಇಬ್ಬರು ಬೈಕ್ ಸವಾರರು ಪಾದಚಾರಿಗಳಿಗೆ ಭಯ ಹುಟ್ಟಿಸುತ್ತಿದ್ದರು.

ಈ ವಿಡಿಯೋವನ್ನು ThirdEye ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ದುಷ್ಕರ್ಮಿಗಳು ರಸ್ತೆಯಲ್ಲಿ ಕಿರಿಕಿರಿ ಉಂಟುಮಾಡುವ ಆಘಾತಕಾರಿ ದೃಶ್ಯಗಳು. ಇನ್​ಸ್ಟಾಗ್ರಾಮ್​ನಲ್ಲಿ ಅಪ್ಲೋಡ್ ಮಾಡಲಾದ ಈ ವೀಡಿಯೊದಲ್ಲಿ ಈ ದುಷ್ಕರ್ಮಿಗಳು ರಸ್ತೆಯಲ್ಲಿ ನಡೆದುಕೊಂಡು ಹೋಗುವ ಮಹಿಳೆಯರು, ಹಿರಿಯ ನಾಗರಿಕರಿಗೆ ಕಿರಿಕಿರಿಯನ್ನುಂಟು ಮಾಡುತ್ತಿರುವುದನ್ನು ತೋರಿಸುತ್ತದೆ. ಕೆಲವರು ಈ ರಸ್ತೆ ಮಾರ್ಗವನ್ನು ಗಮನಿಸಿ ಜಯನಗರ ನ್ಯಾಷನಲ್ ಕಾಲೇಜು ಎಂದು ಹೇಳಿದ್ದಾರೆ. ವಿವರಗಳು ಯಾರಿಗಾದರೂ ತಿಳಿದಿದೆಯೇ?” ಎಂದು ಪ್ರಶ್ನಿಸಲಾಗಿದೆ.

ಇದನ್ನೂ ಓದಿ: Viral News: ತಮ್ಮ ಮಗುವಿಗೆ ಹೊಡೆದ ಎಂದು ಶಿಕ್ಷಕನಿಗೆ ಅಟ್ಟಾಡಿಸಿ ಥಳಿಸಿದ ಪೋಷಕರು

ಮಾರ್ಚ್ 17ರಂದು ಈ ವಿಡಿಯೋವನ್ನು ಟ್ವಿಟರ್​ನಲ್ಲಿ ಅಪ್​ಲೋಡ್ ಮಾಡಲಾಗಿದ್ದು, ಇದೀಗ ವೈರಲ್ ಪಡೆದು 1.38 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ. ಈ ಪೋಸ್ಟ್​ನಲ್ಲಿ ಕಾಮೆಂಟ್ ಮಾಡಿದ ನೆಟ್ಟಿಗರೊಬ್ಬರು, ಇದು ನಿಖರವಾಗಿ ಬೆಂಗಳೂರಿನ ಜಯನಗರ 8ನೇ ಬ್ಲಾಕ್, 3ನೇ ಮುಖ್ಯರಸ್ತೆ ಹಾಗೂ 42ನೇ ಕ್ರಾಸ್ ಎಂದು ತಿಳಿಸಿದ್ದಾರೆ. ಇನ್ನು, ವೈರಲ್ ವಿಡಿಯೋ ಗಮನಿಸಿದ ಜಯನಗರ ಠಾಣಾ ಪೊಲೀಸರು, ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಬಗ್ಗೆ ರೀಟ್ವೀಟ್ ಮಾಡಿದ ಬೆಂಗಳೂರು ನಗರ ಪೊಲೀಸ್, “ದ್ವಿಚಕ್ರ ವಾಹನ ಸವಾರನೊಬ್ಬ ಪಾದಚಾರಿಗಳ ಬಳಿ ಕಿರುಚುವುದನ್ನು ಮತ್ತು ರಸ್ತೆಯಲ್ಲಿ ತೊಂದರೆ ನೀಡುತ್ತಿದ್ದ ವೀಡಿಯೊ ಆನ್​ಲೈನ್​ನಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಎಫ್ಐಆರ್ ದಾಖಲಿಸಲಾಗಿದ್ದು (ಸಿಆರ್ ಸಂಖ್ಯೆ 68/2023), ಆರೋಪಿಗಳನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ” ಎಂದು ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:25 pm, Thu, 23 March 23