Viral News: ತಮ್ಮ ಮಗುವಿಗೆ ಹೊಡೆದ ಎಂದು ಶಿಕ್ಷಕನಿಗೆ ಅಟ್ಟಾಡಿಸಿ ಥಳಿಸಿದ ಪೋಷಕರು

ತಮಿಳುನಾಡಿನ ಶಾಲೆಯೊಂದರಲ್ಲಿ ಶಿಕ್ಷಕನಿಗೆ ಥಳಿಸಿದ ಎರಡನೆ ತರಗತಿ ವಿದ್ಯಾರ್ಥಿಯ ಪೋಷಕರನ್ನು ಬಂಧಿಸಲಾಗಿದೆ. ತಮ್ಮ ಮಗುವಿಗೆ ಹೊಡೆದಿದ್ದಾರೆ ಎಂದು ಆರೋಪಿಸಿ ಶಿಕ್ಷಕನ ಮೇಲೆ ಪೋಷಕರು ಹಲ್ಲೆ ನಡೆಸಿದ್ದಾರೆ.

Viral News: ತಮ್ಮ ಮಗುವಿಗೆ ಹೊಡೆದ ಎಂದು ಶಿಕ್ಷಕನಿಗೆ ಅಟ್ಟಾಡಿಸಿ ಥಳಿಸಿದ ಪೋಷಕರು
ವೈರಲ್ ವಿಡಿಯೋ
Follow us
ಅಕ್ಷಯ್​ ಪಲ್ಲಮಜಲು​​
|

Updated on:Mar 22, 2023 | 4:48 PM

ಚೆನ್ನೈ: ತಮಿಳುನಾಡಿನ ಶಾಲೆಯೊಂದರಲ್ಲಿ ಶಿಕ್ಷಕನಿಗೆ ಥಳಿಸಿದ ಎರಡನೆ ತರಗತಿ ವಿದ್ಯಾರ್ಥಿಯ ಪೋಷಕರನ್ನು ಬಂಧಿಸಲಾಗಿದೆ. ತಮ್ಮ ಮಗುವಿಗೆ ಹೊಡೆದಿದ್ದಾರೆ ಎಂದು ಆರೋಪಿಸಿ ಶಿಕ್ಷಕನ ಮೇಲೆ ಪೋಷಕರು ಹಲ್ಲೆ ನಡೆಸಿದ್ದಾರೆ. ಶಿಕ್ಷಕಿ ಆರೋಪವನ್ನು ನಿರಾಕರಿಸಿದ್ದಾರೆ. ತಮಿಳುನಾಡಿನ ಟುಟಿಕೋರಿನ್ ಜಿಲ್ಲೆಯ ಸರ್ಕಾರಿ ಅನುದಾನಿತ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕನನ್ನು ಆರ್ ಭರತ್ ಎಂದು ಗುರುತಿಸಲಾಗಿದೆ. ಮೂರು ನಿಮಿಷಗಳ ವೀಡಿಯೊದಲ್ಲಿ ದಂಪತಿಗಳು ತರಗತಿಗೆ ನುಗ್ಗಿ ತಮ್ಮ ಮಗುವಿಗೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಶಿಕ್ಷಕರೊಂದಿಗೆ ಜಗಳವಾಡಿದ್ದರೆ. ಮಗುವನ್ನು ಹೊಡೆಯುವುದು ಕಾನೂನುಬಾಹಿರ ಎಂದು ತಾಯಿ ಸೆಲ್ವಿ ಹೇಳುತ್ತಾರೆ. ಮಗುವನ್ನು ಹೊಡೆಯುವುದು ಕಾನೂನುಬಾಹಿರ, ನಿಮಗೆ ಯಾರು ಹಕ್ಕು ನೀಡಿದ್ದು? ನಾನು ನನ್ನ ಚಪ್ಪಲಿಯಿಂದ ಹೊಡೆಯುತ್ತೇನೆ, ಸೆಲ್ವಿ ಹೇಳುತ್ತಾರೆ.

ಇತರ ಮಕ್ಕಳು ನೋಡುತ್ತಿರುವಂತೆಯೇ, ತಂದೆ ಶಿವಲಿಂಗಂ, ತರಗತಿಯ ಸುತ್ತಲೂ ಶಿಕ್ಷಕರನ್ನು ಹಿಂಬಾಲಿಸಿದ್ದಾರೆ. ನಂತರ ಶಿಕ್ಷಕನಿಗೆ ಥಳಿಸಿದ್ದಾರೆ. ಶಿಕ್ಷಕನ ಮೇಲೆ ಅವನು ಇಟ್ಟಿಗೆ, ಕಲ್ಲಿನಂತೆ ತೋರುವ ಸಣ್ಣ ವಸ್ತುವನ್ನು ಶಿಕ್ಷಕರ ಮೇಲೆ ಎಸೆಯಲು ಪ್ರಯತ್ನಿಸಿದ್ದಾರೆ. ದಂಪತಿಗಳು ಭರತ್ ಮೇಲೆ ಹಲ್ಲೆ ನಡೆಸುತ್ತಿದ್ದಂತೆ ಮತ್ತೊಬ್ಬ ಶಿಕ್ಷಕಿ ಸಹಾಯಕ್ಕಾಗಿ ಕಿರುಚುತ್ತಿರುವುದು ಈ ವಿಡಿಯೊದಲ್ಲಿ ನೋಡಬಹುದು.

ಇದನ್ನೂ ಓದಿ:Video Viral : ಅಣ್ಣ-ತಂಗಿ ಮಧ್ಯೆ ಜಗಳ, ಅಮ್ಮ ಬರದಿದ್ರೆ ಮಹಾಯುದ್ಧ ನಡೆಯುತ್ತಿತ್ತು?

ಈ ದಂಪತಿಗಳನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ವಿದ್ಯಾರ್ಥಿಯ ಅಜ್ಜ ಮುನುಸಾಮಿಯನ್ನು ಸಹ ಬಂಧಿಸಿದ್ದಾರೆ. ನಾವು ಅವರ ಮೇಲೆ ಹಲ್ಲೆ, ಕ್ರಿಮಿನಲ್ ಬೆದರಿಕೆ, ಪಿತೂರಿ ಮತ್ತು ಸರ್ಕಾರಿ ನೌಕರನನ್ನು ಕರ್ತವ್ಯದಿಂದ ನಿರ್ವಹಿಸದಂತೆ ತಡೆದಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ ಎಲ್ ಬಾಲಾಜಿ ಸರವಣನ್ ಹೇಳುತ್ತಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ತರಗತಿ ಎಂಬ ಅರಿವೇ ಇಲ್ಲದೆ ಮಕ್ಕಳೊಂದಿಗೆ ಜಗಳವಾಡುತ್ತಿದ್ದ ಏಳು ವರ್ಷದ ಮಗುವಿಗೆ ತರಗತಿಯನ್ನು ಬದಲಾಯಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

Published On - 4:48 pm, Wed, 22 March 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್