AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google Doodle Today: ಸೂರ್ಯನ ರಾಣಿ ಮಾರಿಯಾ ಟೆಲ್ಕೆಸ್ ಅವರ 122ನೇ ಜನ್ಮ ದಿನ, ಗೂಗಲ್ ಡೂಡಲ್ ಮೂಲಕ ವಿಶೇಷ ಗೌರವ

ಡಾ. ಮರಿಯಾ ಟೆಲ್ಕೆಸ್ ಅವರು ಮನೆಗಳಿಗೆ ಸೌರ ಹೀಟರ್‌ಗಳನ್ನು ಅಭಿವೃದ್ಧಿಪಡಿಸುವ ಆರಂಭದಲ್ಲಿ ವಿಫಲಾದರೂ ನಿರಂತರ ಪ್ರಯತ್ನದಲ್ಲಿ ತೊಡಗಿದ್ದರು. ವಾಸ್ತುಶಿಲ್ಪಿ ಎಲೀನರ್ ರೇಮಂಡ್ ಅವರ ಸಹಭಾಗಿತ್ವದಲ್ಲಿ ಡೋವರ್ ಸನ್ ಹೌಸ್ ಅನ್ನು ರಚಿಸುವಲ್ಲಿ ಯಶಸ್ವಿಯಾದರುಪರಿಣಾಮ

Google Doodle Today: ಸೂರ್ಯನ ರಾಣಿ ಮಾರಿಯಾ ಟೆಲ್ಕೆಸ್ ಅವರ 122ನೇ ಜನ್ಮ ದಿನ, ಗೂಗಲ್ ಡೂಡಲ್ ಮೂಲಕ ವಿಶೇಷ ಗೌರವ
ಸೂರ್ಯನ ರಾಣಿ ಮಾರಿಯಾ ಟೆಲ್ಕೆಸ್ ಅವರ 122ನೇ ಜನ್ಮ ದಿನದ ಪ್ರಯುಕ್ತ ಗೂಗಲ್ ಡೂಡಲ್ ಮೂಲಕ ವಿಶೇಷ ಗೌರವ
TV9 Web
| Updated By: Rakesh Nayak Manchi|

Updated on:Dec 12, 2022 | 7:06 AM

Share

ಪ್ರಸಿದ್ಧ ವಿಜ್ಞಾನಿ, ಜೈವಿಕ ಭೌತಶಾಸ್ತ್ರಜ್ಞೆ ಹಾಗೂ ಸೌರಶಕ್ತಿಯ ಮೊದಲ ಪ್ರವರ್ತಕರಲ್ಲಿ ಒಬ್ಬರಾದ ಡಾ ಮಾರಿಯಾ ಟೆಲ್ಕೆಸ್ (Dr Maria Telkes) ಅವರ 122ನೇ ಜನ್ಮ ವಾರ್ಷಿಕೋತ್ಸವ (Birth Anniversary) ಇಂದು. ಈ ನಿಟ್ಟಿನಲ್ಲಿ ಗೂಗಲ್ ಡೂಡಲ್ (Google Doodle) ಮೂಲಕ ವಿಶೇಷ ಗೌರವ ಸಲ್ಲಿಸಿದೆ. ಸೂರ್ಯನ ಶಕ್ತಿಯು ಮಾನವ ಜೀವನವನ್ನು ಬದಲಾಯಿಸಬಹುದು ಎಂದು ನಂಬಿದ್ದ ಇವರು ಇದೇ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದರು. ಇದೇ ಕಾರಣಕ್ಕೆ ಅವರನ್ನು ಸೂರ್ಯನ ರಾಣಿ (Queen Of Sun) ಎಂದು ಕರೆಯುತ್ತಾರೆ. 1900ರ ಡಿಸೆಂಬರ್ 12ರಂದು ಜನಿಸಿದ ಮರಿಯಾ ಅವರು, ಖ್ಯಾತ ವಿಜ್ಞಾನಿಯಾಗಿದ್ದು, ಅವರು ಸೌರ ಶಕ್ತಿಯ ಕ್ಷೇತ್ರದಲ್ಲಿ ಮಹತ್ತರವಾದ ಪ್ರಗತಿಯನ್ನು ಸಾಧಿಸಿದರು. ಪ್ರಸ್ತುತ ದಿನಗಳಲ್ಲಿ ಸೌರ ಕುಕ್ಕರ್‌ಗಳು ಮತ್ತು ಇತರ ಸೌರ ಚಾಲಿತ ತಂತ್ರಜ್ಞಾನಗಳನ್ನು ಬಳಸಲು ಇವರೇ ಕಾರಣರಾಗಿದ್ದಾರೆ.

ಇದನ್ನೂ ಓದಿ: Kitchen Cleaning Tips: ಅಡುಗೆ ಮನೆಯಲ್ಲಿನ ಎಣ್ಣೆ ಜಿಡ್ಡು ತೆಗೆದು ಹಾಕಲು ಸಿಂಪಲ್ ಟಿಪ್ಸ್ ಇಲ್ಲಿದೆ

ಹಂಗೇರಿಯನ್ ಜೈವಿಕ ಭೌತಶಾಸ್ತ್ರಜ್ಞರಾಗಿರುವ ಮರಿಯಾ, ಸೌರಶಕ್ತಿ ಸಮಿತಿಯ ಭಾಗವಾಗಿ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಸೇರಿಕೊಂಡರು. ಅಲ್ಲದೆ, ವಿಶ್ವ ಸಮರ II ರ ಸಮಯದಲ್ಲಿ ಪ್ರಮುಖ ಕೊಡುಗೆ ನೀಡಿದರು. ಸೌರಶಕ್ತಿಯಿಂದ ಚಾಲಿತವಾಗಿರುವ ನೀರಿನ ಬಟ್ಟಿ ಇಳಿಸುವಿಕೆಯನ್ನು ಅಭಿವೃದ್ಧಿಪಡಿಸಲು ಯುಎಸ್ ಸೈನ್ಯವು ಅವರನ್ನು ಕರೆಸಿತು. ಆ ಮೂಲಕ ಸಮುದ್ರದ ನೀರನ್ನು ಸಿಹಿನೀರಿಗೆ ಫಿಲ್ಟರ್ ಮಾಡಲು ಸಹಾಯ ಮಾಡಿದರು. ಇದರಿಂದಾಗಿ ಅನೇಕ ಸೈನಿಕರ ಜೀವಗಳನ್ನು ಉಳಿಸಿದ್ದರು.

ಮರಿಯಾ ಅವರು ಮನೆಗಳಿಗೆ ಸೌರ ಹೀಟರ್‌ಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಿರತರಾಗಿದ್ದರು. ಆರಂಭಿಕ ವಿನ್ಯಾಸದಲ್ಲಿ ವಿಫಲರಾದ ಹಿನ್ನಲೆ ಅವರನ್ನು MIT ಸಮಿತಿಯಿಂದ ತೆಗೆದುಹಾಕಲಾಯಿತು. ವೈಫಲ್ಯದ ಹೊರತಾಗಿಯೂ ಅವರು ಸೌರ ಹೀಟರ್ ಅಭಿವೃದ್ಧಿಯಲ್ಲಿ ನಿರಂತರವಾಗಿ ತೊಡಗಿದರು. ಕೊನೆಗೆ ವಾಸ್ತುಶಿಲ್ಪಿ ಎಲೀನರ್ ರೇಮಂಡ್ ಅವರ ಸಹಭಾಗಿತ್ವದಲ್ಲಿ ಡೋವರ್ ಸನ್ ಹೌಸ್ ಅನ್ನು ರಚಿಸುವಲ್ಲಿ ಯಶಸ್ವಿಯಾದರು. ಸೌರಶಕ್ತಿ ಚಾಲಿತ ಮನೆಗಳು ವ್ಯಾಪಕ ಪ್ರಚಾರವಾಯಿತು.

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:06 am, Mon, 12 December 22

ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?