ಸಾಕು ಪ್ರಾಣಿಗಳ ಭಿನ್ನ ವಿಭಿನ್ನ ವರ್ತನೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮೂಲಕ ನೆಟ್ಟಿಗರಿಗೆ ಸಖತ್ ಮನರಂಜನೆಯನ್ನು ನೀಡುತ್ತದೆ. ಅದಾಗ್ಯೂ ತನ್ನಿಷ್ಟದ ಆಹಾರವನ್ನು ನೋಡಿದಾಗ ತಿನ್ನುವಾ ಎಂದು ಅನಿಸುವುದು ಸಾಮಾನ್ಯ. ಇದರಿಂದ ಪ್ರಾಣಿಗಳೂ ಹೊರತಾಗಿಲ್ಲ. ಬೆಕ್ಕೊಂದು ತಿನ್ನುವ ಉದ್ದೇಶದಿಂದಲೇನೋ ಗೊತ್ತಿಲ್ಲ ಆದರೆ ಗೋಲ್ಡನ್ ಫಿಶ್ (ಮೀನು) ಅನ್ನು ನೀರಿದ್ದ ತಟ್ಟೆಯಿಂದ ಹೊರಗೆ ಹಾಕಿದೆ. ಆದರೆ ತನಗೂ ಮೀನಿನ ಪದಾರ್ಥ ಮಾಡಿಕೊಟ್ಟರೆ ಗಬಗಬ ಎಂದು ತಿನ್ನುವ ನಾಯಿ, ಆ ಮೀನನ್ನು ರಕ್ಷಣೆ ಮಾಡಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ.
Gabriele Corno ಎಂಬ ಟ್ವಿಟರ್ ಖಾತೆಯಲ್ಲಿ ಬೆಕ್ಕು ಮತ್ತು ನಾಯಿಯ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ನಮ್ಮ ಜೀವನದಲ್ಲಿ ಪ್ರಾಣಿಯನ್ನು ಹೊಂದಿದ್ದರೆ ನಮ್ಮನ್ನು ಉತ್ತಮ ಮನುಷ್ಯರನ್ನಾಗಿ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ” ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಪಡೆದು 4.5 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದ್ದು, 2.12ಲಕ್ಷ ಲೈಕ್ಗಳು, 29ಸಾವಿರ ರೀಟ್ವೀಟ್ಗಳನ್ನು ಪಡೆದುಕೊಂಡಿದೆ.
ಆದಾಗ್ಯೂ, ನೆಟಿಜನ್‌ಗಳ ಒಂದು ವಿಭಾಗವು, ಪ್ರದರ್ಶನದ ಉದ್ದೇಶದಿಂದ ಮಾಡಿದ ವಿಡಿಯೋ ಇದಾಗಿದ್ದು, ನಾಯಿಯು ತರಬೇತಿ ಪಡೆದಂತೆ ಕಾಣುತ್ತಿದೆ ಎಂದಿದ್ದಾರೆ. “ಸರಿ, ನಾವು ಈ ರೀತಿಯ ಪ್ರಾಣಿ ಹಿಂಸೆಯನ್ನು ಪ್ರದರ್ಶಿಸದಿದ್ದರೆ ಮತ್ತು ಅದನ್ನು ಚಿತ್ರೀಕರಿಸದಿದ್ದರೆ ನಾವು ಉತ್ತಮ ಮನುಷ್ಯರಾಗುತ್ತೇವೆ… ನಾನು ಈ ಕೃತ್ಯದ ಬಗ್ಗೆ ತುಂಬಾ ಕೋಪಗೊಂಡಿದ್ದೇನೆ” ಎಂದು ಬಳಕೆದಾರರೊಬ್ಬರು ವೀಡಿಯೊಗೆ ಪ್ರತಿಕ್ರಿಯಿಸಿದ್ದಾರೆ.
I think having an animal in our life makes us better humans pic.twitter.com/XMCujNAx1n
— Gabriele Corno (@Gabriele_Corno) August 18, 2022
ಮತ್ತಷ್ಟು ಟ್ರೆಂಡಿಂಗ್ ವಿಡಿಯೋಗಳನ್ನು ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ
Published On - 1:38 pm, Sat, 20 August 22