Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಚಪ್ಪಲಿಯಲ್ಲಿ ಹೊಡೆಯುವ ಯಂತ್ರ ಆವಿಷ್ಕಾರ ಮಾಡಿದ ಪಾಕಿಸ್ತಾನದ ಜನರು

ಪಾಕಿಸ್ತಾನದಲ್ಲಿ ಪ್ರತಿಭಟನಾಕಾರರು ರಾಜಕೀಯ ನಾಯಕರ ಫೋಟೋಗಳಿಗೆ ಕೈಯಲ್ಲಿ ಚಪ್ಪಲಿ ಹಿಡಿದು ಹೊಡೆಯುವ ಬದಲು ಸ್ವಯಂಚಾಲಿತವಾಗಿ ಹೊಡೆಯುವ ಯಂತ್ರವನ್ನು ಕಂಡುಹಿಡಿದಿದ್ದಾರೆ.

Viral Video: ಚಪ್ಪಲಿಯಲ್ಲಿ ಹೊಡೆಯುವ ಯಂತ್ರ ಆವಿಷ್ಕಾರ ಮಾಡಿದ ಪಾಕಿಸ್ತಾನದ ಜನರು
ಪಾಕಿಸ್ತಾನದಲ್ಲಿ ಜನರ ಪ್ರತಿಭಟನೆಯಲ್ಲಿ ವಿನೂತನ ಯಂತ್ರ
Follow us
TV9 Web
| Updated By: Rakesh Nayak Manchi

Updated on: Aug 20, 2022 | 4:59 PM

ವೈರಲ್ ವಿಡಿಯೋ: ಪಾಕಿಸ್ತಾನದ ಜನರು ಹೊಸ ‘ಸ್ವಯಂಚಾಲಿತವಾಗಿ ಚಪ್ಪಲಿಯಿಂದ ಹೊಡೆಯುವ ಯಂತ್ರ’ವನ್ನು ತಯಾರಿಸಿದ್ದಾರೆ. ಈ ವಿಡಿಯೋವನ್ನು ನೀವು ನೋಡಿದರೆ ವಾಹ್ ಎಂದು ಹೇಳುವಿರಿ! ಪ್ರಸ್ತುತ ಪಾಕಿಸ್ತಾನದಲ್ಲಿ ಹಣದುಬ್ಬರ ಹೆಚ್ಚಾಗಿದೆ. ಆಹಾರ ಪದಾರ್ಥಗಳ ಬೆಲೆಗೆ ರೆಕ್ಕೆಪುಕ್ಕ ಬಂದಿದೆ. ಚಹಾ ಕುಡಿಯಲೂ ಆಗದ ಸ್ಥಿತಿಗೆ ತಲುಪಿದೆ. ಇದೇ ಕಾರಣಕ್ಕೆ ಜನರು ಪ್ರಧಾನಿ ಶಹಬಾಜ್ ಷರೀಫ್ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಪ್ರತಿಭಟನಾಕಾರರು ಚಪ್ಪಲಿಯಿಂದ ಭಾವಚಿತ್ರಕ್ಕೆ ಹೊಡೆಯುವ ಹೊರೆಯನ್ನು ಕಡಿಮೆ ಮಾಡಲು ಸ್ವಯಂಚಾಲಿತ ಯಂತ್ರವೊಂದನ್ನು ತಯಾರಿಸಿದ್ದಾರೆ.

ವೈರಲ್ ವಿಡಿಯೋದಲ್ಲಿ, ಹೋರ್ಡಿಂಗ್‌ನಲ್ಲಿ ಮೂವರು ಪಾಕಿಸ್ತಾನಿ ನಾಯಕರ ಫೋಟೋಗಳನ್ನು ಹಾಕಲಾಗಿದೆ. ಇದರ ಕೆಳಗಡೆ ಒಂದು ಯಂತ್ರವನ್ನು ಅಳವಡಿಸಲಾಗಿತ್ತು. ಈ ಯಂತ್ರಕ್ಕೆ ಚಪ್ಪಲಿಯನ್ನು ಜೋಡಿಸಲಾಗಿದೆ. ಪ್ರತಿಭಟನಾಕಾರರು ಒಂದು ಕಡೆಯಿಂದ ಹಗ್ಗ ಎಳೆದಾಗ ಆ ಮೂರು ಚಪ್ಪಲಿಗಳು ಮೂರು ರಾಜಕೀಯ ನಾಯಕರ ಫೋಟೋಗಳಿಗೆ ಏಕಕಾಲದಲ್ಲಿ ಹೊಡೆಯುತ್ತದೆ.  ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ವೀಡಿಯೊವನ್ನು ಮೇಜರ್ ಗೌರವ್ ಆರ್ಯ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ಪಾಕಿಸ್ತಾನದಲ್ಲಿ ಸ್ಟಾರ್ಟಪ್ ಪರಿಸರ ವ್ಯವಸ್ಥೆಯು ನಿಜವಾಗಿಯೂ ಪ್ರಬುದ್ಧವಾಗಿದೆ. ಈ ಸ್ವಯಂಚಾಲಿತ ಲ್ಯಾನಾಟ್ ಯಂತ್ರವು ಹೊಸ ಆವಿಷ್ಕಾರವಾಗಿದೆ”ಎಂದು  ಶೀರ್ಷಿಕೆ ಬರೆದುಕೊಂಡಿದ್ದಾರೆ.

ವೀಡಿಯೊವನ್ನು ವೀಕ್ಷಿಸಿದ ನಂತರ ಬಳಕೆದಾರರು ‘ಈ ಯಂತ್ರಕ್ಕೆ ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗಲಿದೆ’ ಎಂದು ಕಾಮೆಂಟ್ ಮಾಡಿದ್ದಾರೆ. ವೈರಲ್ ಪಡೆದ ಈ ವಿಡಿಯೋ ಸುಮಾರು ಮೂರು ಲಕ್ಷ ವೀಕ್ಷಣೆಗಳನ್ನು, 1850 ರೀಟ್ವೀಟ್‌ಗಳು ಮತ್ತು 11 ಸಾವಿರಕ್ಕೂ ಹೆಚ್ಚು ಲೈಕ್​ಗಳು ಬಂದಿವೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ