Viral Video: “ಉಫ್…. ನಾನೊಂದು ಜೀವ ಉಳಿಸಿದೆ…” ನಾಯಿಯ ವಿಡಿಯೋ ವೈರಲ್

ಬೆಕ್ಕೊಂದು ನೀರಿದ್ದ ತಟ್ಟೆಯಿಂದ ಮೀನನ್ನು ಹೊರಹಾಕಿದೆ. ಇದನ್ನು ನೋಡಿದ ನಾಯಿ ಮಾಡಿದ್ದೇನು? ನೀವೇ ನೋಡಿ..

Viral Video: ಉಫ್.... ನಾನೊಂದು ಜೀವ ಉಳಿಸಿದೆ... ನಾಯಿಯ ವಿಡಿಯೋ ವೈರಲ್
ಬೆಕ್ಕಿನಿಂದ ಮೀನನ್ನು ರಕ್ಷಿಸಿದ ನಾಯಿ
Follow us
TV9 Web
| Updated By: Rakesh Nayak Manchi

Updated on:Aug 20, 2022 | 1:38 PM

ಸಾಕು ಪ್ರಾಣಿಗಳ ಭಿನ್ನ ವಿಭಿನ್ನ ವರ್ತನೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮೂಲಕ ನೆಟ್ಟಿಗರಿಗೆ ಸಖತ್ ಮನರಂಜನೆಯನ್ನು ನೀಡುತ್ತದೆ. ಅದಾಗ್ಯೂ ತನ್ನಿಷ್ಟದ ಆಹಾರವನ್ನು ನೋಡಿದಾಗ ತಿನ್ನುವಾ ಎಂದು ಅನಿಸುವುದು ಸಾಮಾನ್ಯ. ಇದರಿಂದ ಪ್ರಾಣಿಗಳೂ ಹೊರತಾಗಿಲ್ಲ. ಬೆಕ್ಕೊಂದು ತಿನ್ನುವ ಉದ್ದೇಶದಿಂದಲೇನೋ ಗೊತ್ತಿಲ್ಲ ಆದರೆ ಗೋಲ್ಡನ್ ಫಿಶ್ (ಮೀನು) ಅನ್ನು ನೀರಿದ್ದ ತಟ್ಟೆಯಿಂದ ಹೊರಗೆ ಹಾಕಿದೆ. ಆದರೆ ತನಗೂ ಮೀನಿನ ಪದಾರ್ಥ ಮಾಡಿಕೊಟ್ಟರೆ ಗಬಗಬ ಎಂದು ತಿನ್ನುವ ನಾಯಿ, ಆ ಮೀನನ್ನು ರಕ್ಷಣೆ ಮಾಡಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ.

Gabriele Corno ಎಂಬ ಟ್ವಿಟರ್ ಖಾತೆಯಲ್ಲಿ ಬೆಕ್ಕು ಮತ್ತು ನಾಯಿಯ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ನಮ್ಮ ಜೀವನದಲ್ಲಿ ಪ್ರಾಣಿಯನ್ನು ಹೊಂದಿದ್ದರೆ ನಮ್ಮನ್ನು ಉತ್ತಮ ಮನುಷ್ಯರನ್ನಾಗಿ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ” ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಪಡೆದು 4.5 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದ್ದು, 2.12ಲಕ್ಷ ಲೈಕ್​ಗಳು, 29ಸಾವಿರ ರೀಟ್ವೀಟ್​ಗಳನ್ನು ಪಡೆದುಕೊಂಡಿದೆ.

ಆದಾಗ್ಯೂ, ನೆಟಿಜನ್‌ಗಳ ಒಂದು ವಿಭಾಗವು, ಪ್ರದರ್ಶನದ ಉದ್ದೇಶದಿಂದ ಮಾಡಿದ ವಿಡಿಯೋ ಇದಾಗಿದ್ದು, ನಾಯಿಯು ತರಬೇತಿ ಪಡೆದಂತೆ ಕಾಣುತ್ತಿದೆ ಎಂದಿದ್ದಾರೆ. “ಸರಿ, ನಾವು ಈ ರೀತಿಯ ಪ್ರಾಣಿ ಹಿಂಸೆಯನ್ನು ಪ್ರದರ್ಶಿಸದಿದ್ದರೆ ಮತ್ತು ಅದನ್ನು ಚಿತ್ರೀಕರಿಸದಿದ್ದರೆ ನಾವು ಉತ್ತಮ ಮನುಷ್ಯರಾಗುತ್ತೇವೆ… ನಾನು ಈ ಕೃತ್ಯದ ಬಗ್ಗೆ ತುಂಬಾ ಕೋಪಗೊಂಡಿದ್ದೇನೆ” ಎಂದು ಬಳಕೆದಾರರೊಬ್ಬರು ವೀಡಿಯೊಗೆ ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ಟ್ರೆಂಡಿಂಗ್ ವಿಡಿಯೋಗಳನ್ನು ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ

Published On - 1:38 pm, Sat, 20 August 22

ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ