
Viral Video : ಉಪದ್ವ್ಯಾಪ ಮಾಡಬೇಕು ಆದರೆ ಹೀಗೆ ಪ್ರಾಣಕ್ಕೆ ಕುತ್ತು ತರುವಂಥವುಗಳನ್ನು ಮಾಡಬಾರದು ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ಈ ಯುವತಿ ಬೈಕ್ನ ಹಿಂದೆ ಕುಳಿತು ಸವಾರಿ ಮಾಡುತ್ತಿದ್ದಾಳೆ. ಪಕ್ಕದಲ್ಲಿ ಬಂದ ಬೈಕ್ಗೆ ಕಾಲಿನಿಂದ ಒದೆಯುತ್ತಾಳೆ. ಆದರೆ ಆ ಒದೆತಕ್ಕೆ ತಾನೇ ಬ್ಯಾಲೆನ್ಸ್ ಕಳೆದುಕೊಂಡು ರಸ್ತೆ ಬೀಳುತ್ತಾಳೆ. ಹಿಂದಿನಿಂದ ಬರುತ್ತಿರುವ ಕಾರು ಇದನ್ನು ವಿಡಿಯೋ ಮಾಡಿಕೊಂಡಿದೆ. ಅಕಸ್ಮಾತ್ ಆ ಕಾರು ನಿಯಂತ್ರಣ ಕಳೆದುಕೊಂಡು ಆಕೆಯ ಮೇರೆ ಹರಿದಿದ್ದರೆ?
ಈ ವಿಡಿಯೋ ಅನ್ನು ರೆಡ್ಡಿಟ್ನಲ್ಲಿ ಹಂಚಿಕೊಳ್ಳಲಾಗಿದೆ. ನಂತರ ಟ್ವಿಟರ್ನಲ್ಲಿ. ನೆಟ್ಟಿಗರು ಈಕೆಯನ್ನು ಸರಿಯಾಗಿ ಬೈದಿದ್ದಾರೆ. ಇಂಥ ಹುಚ್ಚಾಟದ ಪರಿಣಾಮ ಏನಾಗುತ್ತದೆ ಎನ್ನುವುದನ್ನು ಸ್ವತಃ ಕಂಡುಕೊಂಡಳಲ್ಲ ಒಳ್ಳೆಯದೇ ಆಯಿತು ಎಂದಿದ್ದಾರೆ. ದೇವರೇ ನಿನಗೆ ಧನ್ಯವಾದ ತಕ್ಷಣವೇ ಅವಳ ಕರ್ಮದ ಫಲವನ್ನು ಕೊಟ್ಟಿದ್ದೀಯಾ ಎಂದಿದ್ದಾರೆ ಇನ್ನೂ ಒಬ್ಬರು. ಇನ್ನಾದರೂ ಇಂಥವುಗಳಿಂದ ದೂರವಿರುವುದನ್ನು ಈ ಯುವತಿ ಕಲಿತರೆ ಸಾಕು ಎಂದಿದ್ದಾರೆ ಮಗದೊಬ್ಬರು. ದೇವರಿದ್ದಾನೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ ಎಂದಿದ್ದಾರೆ ಇನ್ನೂ ಒಬ್ಬರು. ಅವಳ ಬೆನ್ನಿಗಿರುವ ಬ್ಯಾಗ್ ಅವಳನ್ನು ಕಾಪಾಡಿದೆ ಸದ್ಯ ಎಂದಿದ್ದಾರೆ ಮತ್ತೊಬ್ಬರು.
ಪ್ರಯಾಣಿಸುವುದು ನಮ್ಮ ಖುಷಿಗಾಗಿ ಇನ್ನೊಬ್ಬರನ್ನು ತಡುವಲು ಖಂಡಿತ ಅಲ್ಲ. ಹೀಗೇನಾದರೂ ಮಾಡಿದರೆ ಅಪಾಯ ಯಾರಿಗೆ?
ನಿಮಗೇನು ಅನ್ನಿಸಿತು ಈ ವಿಡಿಯೋ ನೋಡಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:48 am, Wed, 9 November 22