ಪುಟ್ಟ ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಸಂವಹನವು ಯಾವಾಗಲೂ ನೋಡಲು ಆರೋಗ್ಯಕರವಾಗಿರುತ್ತದೆ. ಒಂದೊಮ್ಮೆ ಪ್ರಾಣಿಗಳಿಗೆ ಪ್ರೀತಿ ನೀಡಿದರೆ ಅವುಗಳು ಮನುಷ್ಯರನ್ನು ತುಂಬಾ ಹಚ್ಚಿಕೊಂಡು ಬಿಡುತ್ತವೆ. ಇಂತಹ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ಹೆಚ್ಚು ಆಕರ್ಷಿಸುತ್ತದೆ. ಇದೇ ಕಾರಣಕ್ಕೆ ಸಣ್ಣ ನಾಯಿಮರಿಯೊಂದು ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದೆ. ಮುದ್ದಾದ ನಾಯಿಮರಿ ಜೊತೆ ಯುವತಿಯೊಬ್ಬಳು ಆರೋಗ್ಯಯುತವಾದ ಸಂಭಾಷಣೆ ನಡೆಸುವುದನ್ನು ತೋರಿಸುವ ವಿಡಿಯೋ ಇದಾಗಿದೆ.
ಸಾಮಾನ್ಯವಾಗಿ ಹೆಚ್ಚಿನ ಯುವತಿಯರಿಗೆ ನಾಯಿಗಳೆಂದರೆ ಇಷ್ಟ. ಈ ಸಮೂಹಕ್ಕೆ ಸೇರಿದವರು ನಾಯಿಮರಿ ಎಲ್ಲಿ ಕಂಡರೂ ಮುದ್ದಾಡುತ್ತಾರೆ. ವಿಡಿಯೋದಲ್ಲಿ ಕಾಣುವಂತೆ, ಸ್ಥಳೀಯ ಉಪಾಹಾರ ಗೃಹದ ಹೊರಗೆ ಯುವತಿ ಕುಳಿತಿದ್ದಾಗ ನಾಯಿಮರಿ ಆಕೆಯ ಬಳಿ ಬರುತ್ತದೆ. ಈ ವೇಳೆ ಯುವತಿ ನಾಯಿಮರಿಯೊಂದಿಗೆ ಮಾತನಾಡಲು ಆರಂಭಿಸುತ್ತಾಳೆ. ಸ್ವಲ್ಪದರಲ್ಲೇ ನಾಯಿಮರಿಯು ಆಕೆಗೆ ಶೇಕ್ ಹ್ಯಾಂಡ್ ಮಾಡಲು ಮುಂದಾಗುತ್ತದೆ. ಈ ವೇಳೆ ಯುವತಿಯೂ ಆ ಮರಿಯ ಕೈಯನ್ನು ಹಿಡಿಯುತ್ತಾಳೆ. ನಂತರ ಮರಿಯ ತಲೆ ಸವರುತ್ತಾಳೆ.
ಅನುರಾಗ್ ಪಾಟೀಲ್ ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, “ಈ ರೀತಿಯ ಸಂಭಾಷಣೆಗಳು ತುಂಬಾ ಆರೋಗ್ಯಕರವಾಗಿವೆ” ಎಂದು ಶೀರ್ಷಿಕೆ ಬರೆದಿದ್ದಾರೆ. ಸೆಪ್ಟೆಂಬರ್ 28 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಈಗಾಗಲೇ 2.7 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಮರಿ ಮತ್ತು ಯುವತಿಯ ನಡುವಿನ ಸಂಭಾಷಣೆ ನೋಡಿದ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ ಅದನ್ನು ಮನೆಗೆ ಕೊಂಡೊಯ್ಯುವಂತೆ ಹೇಳಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published On - 11:03 am, Mon, 17 October 22