ಕಾಡಿನ ರಾಜ ಎಂದು ಕರೆಯಲ್ಪಡುವ ಸಿಂಹದ ಮೇಲೆ ದಾಳಿ ನಡೆಯುವುದು ಅಪರೂಪವಾಗಿದೆ. ಇದೀಗ ಮೂರು ಸಿಂಹಗಳ ಮೇಲೆ ನೀರಾನೆಯೊಂದು ಏಕಾಂಗಿಯಾಗಿ ದಾಳಿ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಿಂಹಗಳು ನದಿ ದಾಟುವ ವೇಳೆ ನೀರಾನೆ ದಾಳಿ ನಡೆಸಿದ್ದು, ಗ್ರೇಟ್ ಪ್ಲೇನ್ಸ್ ಕನ್ಸರ್ವೇಶನ್ ಎಂಬ ಯೂಟ್ಯೂಬ್ ಚಾನೆಲ್ ಈ ವಿಡಿಯೋವನ್ನು ಹಂಚಿಕೊಂಡು ಮರೆಯಲಾಗದ ಕ್ಷಣ ಎಂದು ಹೇಳಿಕೊಂಡಿದೆ.
ಇದನ್ನೂ ಓದಿ: Viral Video: ರಾಡ್ನಿಂದ ಕುಟ್ಟಿದಾಗ ಶೂ ಒಳಗಡೆಯಿಂದ ಬುಸುಗುಡುತ್ತಾ ಹೊರಬಂದ ನಾಗರಹಾವು
ಮೂರು ಸಿಂಹಗಳು ನದಿಯನ್ನು ದಾಟುತ್ತಿರುವುದನ್ನು ವಿಡಿಯೋ ತೋರಿಸುತ್ತದೆ ಮತ್ತು ನದಿ ದಾಟಲು ಸುರಕ್ಷಿತವಾಗಿದೆಯೇ ಎಂದು ಯೋಚಿಸುತ್ತಿರುವಂತೆ ನಾಲ್ಕನೇ ಸಿಂಹವು ದಡದಲ್ಲಿ ನಿಂತಿರುವುದನ್ನುಕಾಣಬಹುದು. ಮೂರು ಸಿಂಹಗಳು ಈಜಾಡುತ್ತಾ ನದಿ ದಾಟುತ್ತಿದ್ದಾಗ ನೋಡಿದ ದೈತ್ಯ ನೀರಾನೆ, ವೇಗವಾಗಿ ಈಜಿಕೊಂಡು ಬಂದು ಅವುಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ಎರಡು ಸಿಂಹಗಳು ದಿಕ್ಕಾಪಾಲಾಗಿ ಹೋದರೆ ಮತ್ತೊಂದು ಸಿಂಹ ನೀರಾನೆಯ ಬಾಯಿಯಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದೆ. ಕೊನೆಯಲ್ಲಿ ಅದೇ ನೀರಿನಲ್ಲಿ ಮತ್ತೊಂದು ನೀರಾನೆ ಕಾಣಿಸಿಕೊಳ್ಳುತ್ತದೆ.
“ಅತ್ಯುತ್ತಮ ಸಫಾರಿಗಳು ಮರೆಯಲಾಗದ ಕ್ಷಣಗಳಿಂದ ಮಾಡಲ್ಪಟ್ಟಿದೆ… ಮತ್ತು ಇದು ನಿಸ್ಸಂದೇಹವಾಗಿ ಅವುಗಳಲ್ಲಿ ಒಂದಾಗಿದೆ. ಬೋಟ್ಸ್ವಾನಾದ ಸೆಲಿಂಡಾ ಎಕ್ಸ್‌ಪ್ಲೋರರ್ಸ್ ಕ್ಯಾಂಪ್‌ನಲ್ಲಿ ಇತ್ತೀಚೆಗೆ ನಾಲ್ಕು ಸಿಂಹಗಳು ಸೆಲಿಂಡಾ ಸ್ಪಿಲ್‌ವೇ ದಾಟಲು ಪ್ರಯತ್ನಿಸುತ್ತಿರುವಾಗ ನೀರಾನೆ ತಡೆಯುತ್ತದೆ. ಅದೃಷ್ಟವಶಾತ್, ಸಿಂಹಗಳು ಪಾರಾಗಿವೆ. ಮತ್ತೊಂದು ಗಮನಾರ್ಹವಾದ ಘಟನೆಗೆ ಸಾಕ್ಷಿಯಾಗಲು ನಾವು ಸೌಭಾಗ್ಯವನ್ನು ಅನುಭವಿಸುತ್ತೇವೆ. ಈ ಅದ್ಭುತ ದೃಶ್ಯಾವಳಿಗಾಗಿ ಜಾನ್ ಲೆಮನ್ ಅವರಿಗೆ ಧನ್ಯವಾದಗಳು” ಎಂದು ಗ್ರೇಟ್ ಪ್ಲೇನ್ಸ್ ಕನ್ಸರ್ವೇಶನ್ ಶೀರ್ಷಿಕೆ ನೀಡಿದೆ.
ಇದನ್ನೂ ಓದಿ: Viral Video: ಹರಿಯುತ್ತಿರುವ ನದಿಯನ್ನು ಎಚ್ಚರಿಕೆಯಿಂದ ದಾಟಿದ ಆಡಿನ ಹಿಂಡು; ಜೀವನದ ಪಾಠ ಕಲಿಸುವ ವಿಡಿಯೋ ವೈರಲ್
ವಿಡಿಯೋ ವೀಕ್ಷಣೆ ಮಾಡಿದ ಜಾಲತಾಣ ಬಳಕೆದಾರರೊಬ್ಬರು, ಭಯಾನಕವಾಗಿದೆ ಎಂದಿದ್ದಾರೆ. ಮತ್ತೊಬ್ಬರು ತಮಾಷೆಯಾಗಿ “ಏಕೆ ಎಂದು ನನಗೆ ತಿಳಿದಿಲ್ಲ, ಆದರೆ ನೀರಾನೆ ದಾಳಿ ಅಗುತ್ತಿದ್ದಂತೆ ಸಿಂಹವು ಮತ್ತೆ ದಡಕ್ಕೆ ಓಡುತ್ತಿರುವ ದೃಶ್ಯವು ನಿಜವಾಗಿಯೂ ನನ್ನನ್ನು ಛಿದ್ರಗೊಳಿಸುತ್ತದೆ” ಎಂದಿದ್ದಾರೆ.
ಬಿಬಿಸಿ ಪ್ರಕಾರ, ನೀರಾನೆ ಪ್ರಪಂಚದ ಅತ್ಯಂತ ದೊಡ್ಡ ಭೂ ಸಸ್ತನಿಯಾಗಿದೆ. ಇದು ಆಫ್ರಿಕಾದಲ್ಲಿ ವರ್ಷಕ್ಕೆ ಅಂದಾಜು 500 ಜನರನ್ನು ಕೊಲ್ಲುತ್ತದೆ. ನೀರಾನೆ ಆಕ್ರಮಣಕಾರಿ ಜೀವಿಗಳಾಗಿದ್ದು, ಅವು ತುಂಬಾ ಚೂಪಾದ ಹಲ್ಲುಗಳನ್ನು ಹೊಂದಿವೆ. ಅವು ಸಿಂಹಗಳಿಗಿಂತ ಎರಡು ಪಟ್ಟು ಮಾರಕವಾಗಿವೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: Viral Video: ಮಳೆಯ ನೀರು ತಾಗಬಾರದೆಂದು ತಂಗಿಯನ್ನು ಬೆನ್ನ ಮೇಲೆ ಕೂರಿಸಿ ರಸ್ತೆ ದಾಟಿಸಿದ ಅಣ್ಣ; ವಿಡಿಯೋ ವೈರಲ್