Viral Video: ರಾಡ್ನಿಂದ ಕುಟ್ಟಿದಾಗ ಶೂ ಒಳಗಡೆಯಿಂದ ಬುಸುಗುಡುತ್ತಾ ಹೊರಬಂದ ನಾಗರಹಾವು
ವ್ಯಕ್ತಿಯೊಬ್ಬರ ಶೂ ಒಳಗಡೆ ನಾಗರಹಾವು ಬಂದು ಅವಿತುಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ. ಹಾವಿನ ರಕ್ಷಣೆ ಮಾಡಿದ ಮಹಿಳೆ, ಮಳೆಗಾಲದಲ್ಲಿ ಜಾಗರೂಕತೆಯಿಂದ ಇರುವಂತೆ ಮನವಿ ಮಾಡಿದ್ದಾರೆ.
ಭಾರೀ ಮಳೆ ಮತ್ತು ಎಡೆಬಿಡದೆ ಸುರಿಯುತ್ತಿರುವ ಮಳೆಯು ಪ್ರಾಣಿಗಳು ಮತ್ತು ಸರೀಸೃಪಗಳಿಗೆ ಅತ್ಯಂತ ಕಠಿಣ ಸ್ಥಿತಿಯನ್ನು ತಂದಿಟ್ಟಿದೆ. ಮಳೆನೀರು ಸಾಮಾನ್ಯವಾಗಿ ತಮ್ಮ ಗೂಡುಗಳು ಮತ್ತು ಬಿಲಗಳಲ್ಲಿ ಹರಿಯುತ್ತದೆ. ಪರಿಣಾಮವಾಗಿ ಅವುಗಳಲ್ಲಿ ಹೆಚ್ಚಿನವು ಮಾನವ ಜನಸಂಖ್ಯೆಯಿರುವ ಪ್ರದೇಶಗಳಲ್ಲಿ ಆಶ್ರಯವನ್ನು ಹುಡುಕಿಕೊಂಡು ಬರುತ್ತಿವೆ. ಅದರಂತೆ ವ್ಯಕ್ತಿಯೊಬ್ಬರ ಶೂ ಒಳಗಡೆ ಅವಿತುಕೊಂಡಿರುವ ನಾಗರಹಾವನ್ನು ರಕ್ಷಣೆ ಮಾಡಿದ ವಿಡಿಯೋ ವೈರಲ್ (Video Viral) ಆಗುತ್ತಿದೆ.
ಇದನ್ನೂ ಓದಿ: Viral Video: ಮಳೆಯ ನೀರು ತಾಗಬಾರದೆಂದು ತಂಗಿಯನ್ನು ಬೆನ್ನ ಮೇಲೆ ಕೂರಿಸಿ ರಸ್ತೆ ದಾಟಿಸಿದ ಅಣ್ಣ; ವಿಡಿಯೋ ವೈರಲ್
ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಸಂತ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಾವಿನ ವಿಡಿಯೋವನ್ನು ಹಂಚಿಕೊಂಡಿದ್ದು, “ಮಾನ್ಸೂನ್‌ನಲ್ಲಿ ಸಂಭವನೀಯ ಸ್ಥಳಗಳಲ್ಲಿ ನೀವು ಅವುಗಳನ್ನು ಕಾಣಬಹುದು. ಜಾಗರೂಕರಾಗಿರಿ. ತರಬೇತಿ ಪಡೆದ ಸಿಬ್ಬಂದಿಯ ಸಹಾಯವನ್ನು ತೆಗೆದುಕೊಳ್ಳಿ” ಎಂದು ಸುಸಂತ ನಂದಾ ಅವರು ಶೀರ್ಷಿಕೆ ನೀಡಿದ್ದಾರೆ.
ಇದನ್ನೂ ಓದಿ: Viral Video: ಹರಿಯುತ್ತಿರುವ ನದಿಯನ್ನು ಎಚ್ಚರಿಕೆಯಿಂದ ದಾಟಿದ ಆಡಿನ ಹಿಂಡು; ಜೀವನದ ಪಾಠ ಕಲಿಸುವ ವಿಡಿಯೋ ವೈರಲ್
ಚಪ್ಪಲಿ ಇಡುವ ಸ್ಟ್ಯಾಂಡ್ನಲ್ಲಿರುವ ಶೂವಿನ ಒಳಗೆ ಹಾವು ರಕ್ಷಕಿಯೊಬ್ಬರು ರಾಡ್ನಿಂದ ಕುಟ್ಟುವಾಗ ನಾಗರಹಾವು ಬುಸುಗುಡುತ್ತಾ ಹೊರಗೆ ಬರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದೇ ವೇಳೆ ಹಾವಿನ ರಕ್ಷಣೆ ಮಾಡುತ್ತಿದ್ದ ಮಹಿಳೆ, ಶೂಗಳನ್ನು ಧರಿಸುವಾಗ ಜಾಗರೂಕರಾಗಿರಿ, ಶೂ ಧರಿಸುವ ಮೊದಲು ಅದನ್ನು ಪರಿಶೀಲಿಸಿ. ವಿಶೇಷವಾಗಿ ಮಾನ್ಸೂನ್ ಸಮಯದಲ್ಲಿ ಎಚ್ಚರಿಕೆ ವಹಿಸುವುದು ಮುಖ್ಯ ಎಂದು ಸಲಹೆ ನೀಡಿದ್ದಾರೆ.
You will find them at oddest possible places in https://t.co/2dzONDgCTj careful. Take help of trained personnel.WA fwd. pic.twitter.com/AnV9tCZoKS
— Susanta Nanda IFS (@susantananda3) July 11, 2022
ಸುಸಂತ ನಂದಾ ಅವರು ಹಂಚಿಕೊಂಡಿರುವ ಈ ವಿಡಿಯೋ ವೈರಲ್ ಪಡೆದು 1.72 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, 5ಸಾವಿರಕ್ಕೂ ಅಧಿಕ ಲೈಕ್ಗಳನ್ನು ಪಡೆದುಕೊಂಡಿದೆ. ವಿಡಿಯೋ ನೋಡಿದ ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಮಳೆಗಾಲದಲ್ಲಿ ಪಾದರಕ್ಷೆಗಳು, ಶೌಚಾಲಯಗಳು ಮತ್ತು ಕತ್ತಲೆಯಾದ ಸ್ಥಳಗಳಲ್ಲಿ ಸುತ್ತುವರೆದಿರುವ ವಸ್ತುಗಳು ಅಥವಾ ಪ್ರದೇಶಗಳಿಗೆ ಹೋಗುವಾಗ ಯಾವಾಗಲೂ ಜಾಗರೂಕರಾಗಿರಿ.
Published On - 4:26 pm, Thu, 14 July 22