AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬೆಸ್ಟ್ ಫ್ರೆಂಡ್ ಮದುವೆಗೆ ಹೋಗುವ ಮುನ್ನ ‘ಮೆಹಂದಿ ಹೈ ರಚನೇವಾಲಿ’ ಹಾಡಿಗೆ ನೃತ್ಯ ಮಾಡಿದ ಸುಂದರಿಯರು

ಬೆಸ್ಟ್ ಫ್ರೆಂಡ್ ಮದುವೆಗೂ ಮುನ್ನ ಯುವತಿಯರಿಬ್ಬರು ನಟಿ ಕರಿಷ್ಮಾ ಕಪೂರ್‌ ಕಾಣಿಸಿಕೊಂಡ ಮೆಹಂದಿ ಹೈ ರಚನೇವಾಲಿ ಹಾಡಿಗೆ ನೃತ್ಯ ಮಾಡಿದ ಡಾನ್ಸ್ ಸಖತ್ ವೈರಲ್ ಆಗುತ್ತಿದೆ. ವೈರಲ್ ವಿಡಿಯೋ ಇಲ್ಲಿದೆ.

Viral Video: ಬೆಸ್ಟ್ ಫ್ರೆಂಡ್ ಮದುವೆಗೆ ಹೋಗುವ ಮುನ್ನ 'ಮೆಹಂದಿ ಹೈ ರಚನೇವಾಲಿ' ಹಾಡಿಗೆ ನೃತ್ಯ ಮಾಡಿದ ಸುಂದರಿಯರು
ಯುವತಿಯರ ಡಾನ್ಸ್
TV9 Web
| Updated By: Rakesh Nayak Manchi|

Updated on:Jul 14, 2022 | 12:33 PM

Share

ಕೆಲವು ಹಿಂದಿ ಹಾಡುಗಳು ಎಷ್ಟು ಸುಮಧುರವಾಗಿವೆ ಎಂದರೆ ಜನರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. 2001ರ ಜುಬೇದಾ ಚಿತ್ರದ ಮೆಹಂದಿ ಹೈ ರಚನೇವಾಲಿ ಹಾಡು (Mehndi Hai Rachnewali Song) ಇದರಿಂದ ಹೊರತಾಗಿಲ್ಲ. ಇದೇ ಕಾರಣಕ್ಕೆ ಜನರು ಡಾನ್ಸ್ ಮಾಡುವ ವೇಳೆ ಈ ಹಾಡನ್ನು ಬಳಕೆ ಮಾಡುತ್ತಾರೆ. ನೃತ್ಯ ಸಂಯೋಜಕಿ ಆಕಾಂಕ್ಷಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಡಾನ್ಸ್ ವಿಡಿಯೋ (Dance Video)ವನ್ನು ಹಂಚಿಕೊಂಡಿದ್ದಾರೆ. “ನಮ್ಮ ಆತ್ಮೀಯ ಗೆಳೆಯನ ಮೆಹಂದಿಯಲ್ಲಿ… ನಮ್ಮದೇ ಆದ ನೃತ್ಯಗಳನ್ನು ಬದಿಯಲ್ಲಿ ಮಾಡುತ್ತಿದ್ದೇವೆ” ಎಂದು ವೀಡಿಯೊದೊಂದಿಗೆ ಶೀರ್ಷಿಕೆಯನ್ನು ಬರೆಯಲಾಗಿದೆ. ನಟಿ ಕರಿಷ್ಮಾ ಕಪೂರ್‌ ಕಾಣಿಸಿಕೊಂಡ ಈ ಹಾಡಿಗೆ ಡಾನ್ಸ್ ಮಾಡುವಾಗ ಇಬ್ಬರು ಯುವತಿಯರು ಅದ್ಭುತವಾದ ಸ್ಟೆಪ್ ಅನ್ನು ಹಾಕುತ್ತಿರುವುದು ವಿಡಿಯೋ ಕ್ಲಿಪ್​ನಲ್ಲಿ ಕಾಣಬಹುದು.

ಇದನ್ನೂ ಓದಿ: Viral Video: ವಿಮಾನದ ಕಿಟಕಿಯ ಮೂಲಕ ಹೊರಗಿದ್ದ ಸಿಬ್ಬಂದಿಯೊಂದಿಗೆ ಪ್ರಯಾಣಿಕನ ರಾಕ್ ಪೇಪರ್ ಕತ್ತರಿ ಆಟ

ಡಾನ್ಸ್ ವಿಡಿಯೋವನ್ನು ಜೂನ್ 18 ರಂದು ಪೋಸ್ಟ್ ಮಾಡಲಾಗಿದ್ದು, ಇದೀಗ ವೈರಲ್ ಪಡೆದುಕೊಂಡಿದೆ. ವಿಡಿಯೋ ಹಂಚಿಕೊಂಡ ನಂತರದಿಂದ ಈವರೆಗೆ 3.3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ ಮತ್ತು 8 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಶೇರ್ಸ್​ ಕೂಡ ಆಗಿವೆ.

ಇದನ್ನೂ ಓದಿ: Viral Video: ಗೋಲ್ಗಪ್ಪ ಪ್ರಿಯರೇ ಇಲ್ಲಿ ನೋಡಿ… ಗೋಲ್ಗಪ್ಪ ನೀರಿನ ರುಚಿಯನ್ನು ಹೆಚ್ಚಿಸಲು ಟಾಯ್ಲೆಟ್ ಕ್ಲೀನರ್ ಬಳಕೆ

ವಿಡಿಯೋ ವೀಕ್ಷಣೆ ಮಾಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಕಾಮೆಂಟ್ ಬಾಕ್ಸ್​ನಲ್ಲಿ ಕಾಮೆಂಟ್ ಮಾಡಿದ್ದು, “ಈ ಹಾಡು ಚಿನ್ನ” ಎಂದು ಹೇಳಿದ್ದಾರೆ. ಮತ್ತೊಬ್ಬರು, “ತುಂಬಾ ಸುಂದರ” ಎಂದು ಹೇಳಿದರೆ, ಮಗದೊಬ್ಬರು, “ಹಹಹಾ ತುಂಬಾ ಮುದ್ದಾಗಿದೆ” ಎಂದು ಪ್ರತಿಕ್ರಿಯಿಸಿದ್ದಾರೆ. ಒಂದಷ್ಟು ಮಂದಿ ತಮ್ಮ ಪ್ರತಿಕ್ರಿಯೆಗಳನ್ನು ಪ್ರದರ್ಶಿಸಲು ಹೃದಯದ ಎಮೋಟಿಕಾನ್‌ಗಳನ್ನು ಕಳುಹಿಸಿದ್ದಾರೆ.

ಇದನ್ನೂ ಓದಿ: Viral Video: ಟೋಲ್ ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿಕೊಂಡ “ದಿ ಗ್ರೇಟ್ ಖಲಿ”

Published On - 12:33 pm, Thu, 14 July 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ