Shocking Video: ಫೋಟೋ ಆಸೆಯಿಂದ ಸಮುದ್ರದಲ್ಲಿ ಕೊಚ್ಚಿ ಹೋದ ಕುಟುಂಬ; ಶಾಕಿಂಗ್ ವಿಡಿಯೋ ವೈರಲ್

Oman Beach Video: ರಜೆಯ ಮಜಾಗಾಗಿ ಹೋಗಿದ್ದ ಕುಟುಂಬದ ಐವರು ದುರಂತ ಅಂತ್ಯ ಕಂಡಿದ್ದಾರೆ. ಅಪ್ಪ-ಮಗನ ಶವಪತ್ತೆಯಾಗಿದ್ದು, ಇನ್ನೂ ಮೂವರ ಮೃತದೇಹ ಇನ್ನೂ ಸಿಕ್ಕಿಲ್ಲ.

Shocking Video: ಫೋಟೋ ಆಸೆಯಿಂದ ಸಮುದ್ರದಲ್ಲಿ ಕೊಚ್ಚಿ ಹೋದ ಕುಟುಂಬ; ಶಾಕಿಂಗ್ ವಿಡಿಯೋ ವೈರಲ್
ಓಮನ್​ ಸಮುದ್ರದಲ್ಲಿ ಕೊಚ್ಚಿಹೋದ ಜನರು
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jul 14, 2022 | 11:29 AM

ಮುಂಬೈ: ಸೆಲ್ಫೀ (Selfie) ಅಥವಾ ಫೋಟೋ ಕ್ರೇಜ್ ಕೆಲವೊಮ್ಮೆ ನಮ್ಮ ಜೀವವನ್ನೇ ಬಲಿ ಪಡೆದುಬಿಡುತ್ತದೆ. ಒಮನ್​ನಲ್ಲಿರುವ ಸಮುದ್ರಕ್ಕೆ ತೆರಳಿದ್ದ ಮಹಾರಾಷ್ಟ್ರದ ಸಾಂಗ್ಲಿ (Sangli) ಜಿಲ್ಲೆಯ ಫ್ಯಾಮಿಲಿಯೊಂದು ಸಂತೋಷದಿಂದ ಎಂಜಾಯ್ ಮಾಡುತ್ತಿರುವಾಗಲೇ ಅಪ್ಪಳಿಸಿದ ಬೃಹತ್ ಅಲೆಯೊಂದು 5 ಜನರನ್ನು ಬಲಿಪಡೆದಿದೆ. ಫೋಟೋ ತೆಗೆಸಿಕೊಳ್ಳಲು ಸಮುದ್ರದ ತೀರದಲ್ಲಿ ಬಂಡೆಯ ಮೇಲೆ ನಿಂತಿದ್ದ 7 ಜನರು ನೀರಿನ ಅಲೆಯ ಹೊಡೆತಕ್ಕೆ ಕೊಚ್ಚಿ ಹೋಗಿದ್ದರು. ಅದರಲ್ಲಿ ಇಬ್ಬರನ್ನು ರಕ್ಷಿಸಲಾಗಿದ್ದು, ಉಳಿದ ಐವರು ಮೃತಪಟ್ಟಿದ್ದಾರೆ.

ರಜೆಯ ಮಜಾಗಾಗಿ ಹೋಗಿದ್ದ ಕುಟುಂಬದ ಐವರು ದುರಂತ ಅಂತ್ಯ ಕಂಡಿದ್ದಾರೆ. 42 ವರ್ಷದ ವ್ಯಕ್ತಿ ಮತ್ತು ಅವರ 6 ವರ್ಷದ ಮಗ ಭಾನುವಾರ ಓಮನ್‌ನ ಬೀಚ್‌ನಲ್ಲಿ ಆಡುತ್ತಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇನ್ನೂ ಮೂವರು ದಡದಲ್ಲಿದ್ದವರನ್ನು ಅಲೆ ಎಳೆದುಕೊಂಡು ಹೋಗಿದೆ. ಮೃತರನ್ನು ಶಶಿಕಾಂತ ಮಾಮನೆ ಮತ್ತು ಅವರ ಪುತ್ರ ಶ್ರೇಯಸ್ ಎಂದು ಗುರುತಿಸಲಾಗಿದೆ. ಇನ್ನೂ ಮೂವರು ಶವ ಪತ್ತೆಯಾಗಿಲ್ಲ. ಈ ಇಡೀ ಘಟನೆಯನ್ನು ಬೇರೊಬ್ಬರು ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Shocking Video: ನದಿಯಲ್ಲಿ ಸ್ನಾನ ಮಾಡುವಾಗ ಹೆಂಡತಿಗೆ ಮುತ್ತು ಕೊಟ್ಟ ಗಂಡನಿಗೆ ಹಿಗ್ಗಾಮುಗ್ಗ ಥಳಿಸಿದ ಜನ!

ನೋಡ ನೋಡುತ್ತಿದ್ದಂತೆ ಕ್ಯಾಮೆರಾಗೆ ಪೋಸ್ ಕೊಟ್ಟು ನಿಂತಿದ್ದ ಮೂವರು ಯುವತಿಯರ ಮೇಲೆ ಸಮುದ್ರದ ಬೃಹತ್ ಅಲೆ ಅಪ್ಪಳಿಸಿದೆ. ಅವರು ಸಹಾಯಕ್ಕಾಗಿ ಕೈ ನೀಡುತ್ತಿದ್ದಾಗಲೇ ಆ ಅಲೆ ಅವರನ್ನು ಎಳೆದುಕೊಂಡು ಹೋಗಿದೆ. ಆಗ ಅಸಹಾಯಕತೆಯಿಂದ ಕುಟುಂಬಸ್ಥರು ಜೋರಾಗಿ ಕಿರುಚಾಡುತ್ತಿದ್ದಾರೆ. ಈ ವಿಡಿಯೋವನ್ನು ಮತ್ತೊಬ್ಬ ಪ್ರವಾಸಿಗರು ತೆಗೆದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಒಮಾನ್‌ನ ಧೋಫರ್ ಗವರ್ನರೇಟ್‌ನ ಅಲ್ ಮುಗ್ಸೈಲ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಾಮನೆ ಅವರ ಒಂಬತ್ತು ವರ್ಷದ ಮಗಳು ಶ್ರೇಯಾ ಸೇರಿದಂತೆ ಮೂವರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಈ ವ್ಯಕ್ತಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜಾತ್ ಪಟ್ಟಣದವರು. ಅವರು ದುಬೈನಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಅವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಭಾನುವಾರ ಒಂದು ದಿನದ ಪ್ರವಾಸಕ್ಕಾಗಿ ಒಮನ್​ಗೆ ತೆರಳಿದ್ದರು.

ಇದನ್ನೂ ಓದಿ: ಕೊಪ್ಪಳದಲ್ಲಿ ಕಿರು ಸೇತುವೆ ಮೇಲೆ ಯುವಕ- ಯುವತಿಯರ ಹುಚ್ಚಾಟ; ಸ್ಥಳಕ್ಕೆ ಆಗಮಿಸಿದ ಇಇಯಿಂದ ಯುವಕನಿಗೆ ಕಪಾಳಮೋಕ್ಷ

ಖುಷಿಯಿಂದ ಸಮುದ್ರ ತೀರದಲ್ಲಿ ಆಟವಾಡುತ್ತಿದ್ದಾಗ ಏಕಾಏಕಿ ಬಲವಾದ ಅಲೆ ದಡಕ್ಕೆ ಅಪ್ಪಳಿಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಮಾಮನೆ ಅವರ ಸಹೋದರನ ಪ್ರಕಾರ, ಅವರು ದುಬೈನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮಾಮನೆ ಮತ್ತು ಅವರ ಮಗನ ಶವಗಳನ್ನು ಒಮನ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ತನ್ನ ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಾಗ ನೀರಿನ ರಭಸಕ್ಕೆ ಮಾಮನೆ ಕೂಡ ನೀರುಪಾಲಾಗಿದ್ದಾರೆ. ನಾಪತ್ತೆಯಾಗಿರುವವರ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಈ ವಿಡಿಯೋ ನೋಡಿದ ನೆಟ್ಟಿಗರು ಸೋಷಿಯಲ್ ಮೀಡಿಯಾದ ಲೈಕ್​ಗಿಂತ ಲೈಫ್ ಬಹಳ ಮುಖ್ಯವಾದುದು. ಜೀವದ ಜೊತೆ ಹುಡುಗಾಟ ಆಡಬೇಡಿ ಎಂದು ಟ್ವೀಟ್ ಮಾಡಿದ್ದಾರೆ.

Published On - 11:26 am, Thu, 14 July 22