AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Watch ಮಹಾರಾಷ್ಟ್ರದ ನಾನೆಘಾಟ್​​​ನಲ್ಲಿರುವ ಹಿಮ್ಮುಖ ಜಲಪಾತದ ವಿಸ್ಮಯಕ್ಕೆ ದಂಗಾದ ನೆಟ್ಟಿಗರು

ಎರಡು ಬೆಟ್ಟಗಳ ನಡುವಿನಿಂದ ಹರಿಯುತ್ತಿರುವ ಈ ಜಲಪಾತ ಹಿಮ್ಮುಖವಾಗಿದೆ. ಝರಿ ನೀರಿಗೆ ಗಾಳಿಯು ಸಾಥ್ ನೀಡುತ್ತಿದ್ದು ಈ ಹಿಮ್ಮುಖ ಜಲಪಾತದ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ.

Watch ಮಹಾರಾಷ್ಟ್ರದ ನಾನೆಘಾಟ್​​​ನಲ್ಲಿರುವ ಹಿಮ್ಮುಖ ಜಲಪಾತದ ವಿಸ್ಮಯಕ್ಕೆ ದಂಗಾದ ನೆಟ್ಟಿಗರು
ನಾನೆಘಾಟ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Jul 12, 2022 | 2:43 PM

Share

ಮುಂಗಾರು ಮಳೆಗೆ (monsoon season) ಪ್ರಕೃತಿಯ ವಿಸ್ಮಯಗಳು ನಮ್ಮನ್ನು ಬೆರಗುಗೊಳಿಸುತ್ತಿರುತ್ತವೆ. ಸ್ವಾತಿ ಮುತ್ತಿನಂಥಾ ಮಳೆ ಹನಿಗಳು ಮನಸಿಗೆ ಉಲ್ಲಾಸ ನೀಡುವ ಜತೆಗೆ ಪ್ರಕೃತಿ ರಮಣೀಯ ದೃಶ್ಯಗಳನ್ನು ನೋಡುವ ಅವಕಾಶವನ್ನೂ ನಮಗೆ ಕಲ್ಪಿಸುತ್ತವೆ. ಅಂಥಾ ವಿಸ್ಮಯಗಳಲ್ಲೊಂದು ಮಹಾರಾಷ್ಟ್ರದ (Maharashtra) ನಾನೆಘಾಟ್(Naneghat). ಎರಡು ಬೆಟ್ಟಗಳ ನಡುವಿನಿಂದ ಹರಿಯುತ್ತಿರುವ ಈ ಜಲಪಾತ ಹಿಮ್ಮುಖವಾಗಿದೆ. ಝರಿ ನೀರಿಗೆ ಗಾಳಿಯು ಸಾಥ್ ನೀಡುತ್ತಿದ್ದು ಈ ಹಿಮ್ಮುಖ ಜಲಪಾತದ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ. ಹಿಮ್ಮುಖ ಜಲಪಾತದ ವಿಡಿಯೊ ಟ್ವೀಟ್ ಮಾಡಿರುವ ಐಎಫ್ಎಸ್ ಅಧಿಕಾರಿ ಸುಶಾಂತ ನಂದಾ, ಗಾಳಿಯ ವೇಗದ ಪ್ರಮಾಣವು ಗುರುತ್ವಾಕರ್ಷಣೆಯ ಬಲಕ್ಕೆ ಸಮಾನವಾಗಿ ಮತ್ತು ವಿರುದ್ಧವಾಗಿದ್ದಾಗ, ಪಶ್ಚಿಮ ಘಟ್ಟಗಳ ಶ್ರೇಣಿಯ ನಾನೆಘಾಟ್‌ನಲ್ಲಿ ಜಲಪಾತ ಈ ರೀತಿ ಕಾಣುತ್ತದೆ. ಇದು ಮುಂಗಾರಿನ ಸೌಂದರ್ಯ ಎಂದಿದ್ದಾರೆ. ವೈರಲ್ ವಿಡಿಯೊದಲ್ಲಿ ಬೆಟ್ಟಗಳು ಹಸಿರಾಗಿದ್ದು, ಮೇಲೆ ಬಿಳಿ ಮೋಡಗಳು ತೇಲುತ್ತಿರುವುದು ಕಾಣುತ್ತದೆ.

ಈ ವಿಡಿಯೊಗೆ 3.5 ಲಕ್ಷಕ್ಕಿಂತಲೂ ಹೆಚ್ಚು ವೀಕ್ಷಣೆ ಸಿಕ್ಕಿದ್ದು 17ಸಾವಿರಕ್ಕಿಂತಲೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಈ ವಿಡಿಯೊ ನೋಡಿ ಹಲವರ ಅಚ್ಚರಿ ವ್ಯಕ್ತಪಡಿಸಿದ್ದು, ಪ್ರಕೃತಿ ವಿಸ್ಮಯಕ್ಕೆ ದಂಗಾಗಿದ್ದಾರೆ. ನಾನು ಇಲ್ಲಿಗೆ ಭೇಟಿ ನೀಡಿದ್ದೆ, ಇದು ಭೂಮಿಯಲ್ಲಿನ ಸ್ವರ್ಗ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಈ ವಿಸ್ಮಯಕ್ಕೆ ವೈಜ್ಞಾನಿಕ ಕಾರಣ ನೀಡಿದ ಬಳಕೆದಾರರೊಬ್ಬರು, ನ್ಯೂಟನ್​​ನ ಮೊದಲ ಚಲನೆಯ ನಿಯಮ ಪ್ರಕಾರ ಒಂದು ವಸ್ತುವಿನ ಮೇಲೆ ಬಲ ಬೀಳದೇ ಇದ್ದರೆ ಆ ವಸ್ತುಅದೇ ಚಲನೆಯ ಸ್ಥಿತಿಯಲ್ಲಿ ಉಳಿಯುತ್ತದೆ ಎಂದು ಹೇಳುತ್ತದೆ. ಗುರುತ್ವಾಕರ್ಷಣೆಯನ್ನು ಅನುಸರಿಸಲು ಈ ನೀರಿನ ನೈಸರ್ಗಿಕ ಪ್ರವೃತ್ತಿಯ ಮೇಲೆ ದೊಡ್ಡಮಟ್ಟದಲ್ಲಿ ಗಾಳಿ ಕಾರ್ಯನಿರ್ವಹಿಸುತ್ತವೆ. ಎರಡು ಶಕ್ತಿಗಳ ಪ್ರಮಾಣವು ಸಮಾನವಾಗಿರುತ್ತದೆ ಮತ್ತು ಅವುಗಳ ದಿಕ್ಕುಗಳು ವಿರುದ್ಧವಾಗಿರುತ್ತವೆ ಎಂದಿದ್ದಾರೆ. ಜಲಪಾತ ಯಾಕೆ ಈ ರೀತಿ ಹಿಮ್ಮುಖವಾಗಿದೆ ಎಂಬುದ ಬಗ್ಗೆ ವಿವರಿಸಲು ಹಲವಾರುಬಳಕೆದಾರರು ಪ್ರಯತ್ನಿಸಿದ್ದಾರೆ.

ಗುರುತ್ವಾಕರ್ಷಣೆ ಮತ್ತು ಗಾಳಿಯ ವೇಗವು ವಿವಿಧ ಆಯಾಮಗಳಲ್ಲಿರುವುದರಿಂದ ಇದನ್ನು ಹೋಲಿಸಲು ಆಗಲ್ಲ. ಇದರ ಬದಲಾಗಿ ಗಾಳಿಯ ಚಲನೆಯು ಕೆಳಗೆ ಬೀಳುವ ನೀರಿನ ಚಲನೆಯ ವೇಗವನ್ನು ನಿಲ್ಲಿಸುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಪಶ್ಚಿಮ ಘಟ್ಟದಲ್ಲಿರುವ ಕೊಂಕಣ ಕರಾವಳಿ ಮತ್ತು ಡೆಕ್ಕನ್ ಪ್ರಸ್ಥಭೂಮಿಯಲ್ಲಿರುವ ಜುನ್ನಾರ್ ನಗರದ ಮಧ್ಯೆ ಇರುವ ಬೆಟ್ಟದಲ್ಲಿ ನಾನೆಘಾಟ್ ಇದೆ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ