AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪ್ರದೇಶ: ಚಲಿಸುತ್ತಿದ್ದ ರೈಲಿನ ಎದುರು ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

ಹತ್ತನೇ ತರಗತಿ ವಿದ್ಯಾರ್ಥಿನಿ ಚಲಿಸುತ್ತಿರುವ ರೈಲಿನ ಎದುರು ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 16 ವರ್ಷದ ಬಾಲಕಿ ಗಜರೌಲಾ ಪಟ್ಟಣದ ಆವಂತಿಕಾ ನಗರದ ನಿವಾಸಿಯಾಗಿದ್ದಳು. ಶುಕ್ರವಾರ ಬೆಳಿಗ್ಗೆ ಶಾಲೆಗೆ ತೆರಳಲು ಮನೆಯಿಂದ ಹೊರಟವನು ಶವವಾಗಿ ಪತ್ತೆಯಾಗಿದ್ದಾಳೆ. ಭಾನ್ಪುರ್ ಬಳಿ ಓಡುತ್ತಿದ್ದ ರೈಲಿಗೆ ತಲೆಕೊಟ್ಟಿದ್ದಾಳೆ.

ಉತ್ತರ ಪ್ರದೇಶ: ಚಲಿಸುತ್ತಿದ್ದ ರೈಲಿನ ಎದುರು ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ
ಪೊಲೀಸ್ Image Credit source: India TV
ನಯನಾ ರಾಜೀವ್
|

Updated on: Dec 29, 2024 | 12:33 PM

Share

ಚಲಿಸುತ್ತಿರುವ ರೈಲಿನ ಎದುರು ಹಾರಿ 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಆಮ್ರೋಹಾದಲ್ಲಿ ನಡೆದಿದೆ. 16 ವರ್ಷದ ಬಾಲಕಿ ಗಜರೌಲಾ ಪಟ್ಟಣದ ಆವಂತಿಕಾ ನಗರದ ನಿವಾಸಿಯಾಗಿದ್ದಳು. ಶುಕ್ರವಾರ ಬೆಳಗ್ಗೆ ಶಾಲೆಗೆ ತೆರಳಲು ಮನೆಯಿಂದ ಹೊರಟವಳು ಶವವಾಗಿ ಪತ್ತೆಯಾಗಿದ್ದಾಳೆ. ಭಾನ್ಪುರ್ ಬಳಿ ಓಡುತ್ತಿದ್ದ ರೈಲಿಗೆ ತಲೆಕೊಟ್ಟಿದ್ದಾಳೆ.

ಅಲ್ಲೇ ಓಡಾಡುತ್ತಿದ್ದವರು ಈ ದೃಶ್ಯ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಆರ್‌ಪಿಎಫ್ ಮತ್ತು ಜಿಆರ್‌ಪಿ ತಂಡಗಳು ಸ್ಥಳಕ್ಕೆ ತಲುಪಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಆರ್‌ಪಿ ಔಟ್‌ಪೋಸ್ಟ್ ಇನ್‌ಚಾರ್ಜ್ ಗಜ್ರೌಲಾ ರಾಜೀವ್ ಸಿಂಗ್ ತಿಳಿಸಿದ್ದಾರೆ. ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಕೇರಳ: ರೈಲ್ವೆ ಗುತ್ತಿಗೆ ಕಾರ್ಮಿಕರ ಮೇಲೆ ಹರಿದ ಎಕ್ಸ್​ಪ್ರೆಸ್ ರೈಲು, ನಾಲ್ವರು ಸಾವು

ರೈಲಿನ ಇಂಜಿನ್ ಅಡಿಯಲ್ಲಿ ಕುಳಿತು 290 ಕಿ.ಮೀ ಪ್ರಯಾಣಿಸಿದ ವ್ಯಕ್ತಿ ದಾನಪುರ ಎಕ್ಸ್‌ಪ್ರೆಸ್‌ನ ಕೋಚ್‌ನಡಿಯಲ್ಲಿ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಜಬಲ್‌ಪುರದದಲ್ಲಿ ನಡೆದಿದೆ. ಈತ ಇಟಾರ್ಸಿಯಿಂದ ಜಬಲ್‌ಪುರದವರೆಗೆ (290 ಕಿಮೀ) ರೈಲಿನ ಬೋಗಿಯ ಕೆಳಗೆ, ಚಕ್ರಗಳ ನಡುವೆ ಅಡಗಿ ಕುಳಿತುಕೊಂಡು ಪ್ರಯಾಣಿಸಿರುವುದು ತನಿಖೆಯ ವೇಳೆ ತಿಳಿದುಬಂದಿದೆ.

ಜಬಲ್ಪುರ ರೈಲು ನಿಲ್ದಾಣದ ಬಳಿ ರೋಲಿಂಗ್ ಪರೀಕ್ಷೆಯ ಸಮಯದಲ್ಲಿ ರೈಲಿನ ಸಿಬ್ಬಂದಿ ಕೋಚ್ ಅಡಿಯಲ್ಲಿ ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ಅಡಗಿರುವುದು ತಿಳಿಬಂದಿದೆ. ಆಘಾತಕ್ಕೊಳಗಾದ ನೌಕರರು ಕೂಡಲೇ ಸ್ಥಳಕ್ಕೆ ಆರ್‌ಪಿಎಫ್‌ಗೆ ಕರೆ ಮಾಡಿದ್ದಾರೆ. ರೈಲಿನಡಿಯಿಂದ ವ್ಯಕ್ತಿ ಹೊರಬರುತ್ತಿರುವ ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

ವ್ಯಕ್ತಿ ಮದ್ಯದ ಅಮಲಿನಲ್ಲಿದ್ದು, ಆ ವ್ಯಕ್ತಿ ಎಲ್ಲಿಂದ ಬಂದವನು ಅಥವಾ ರೈಲಿನ ಟ್ರಾಲಿಯನ್ನು ಹೇಗೆ ಪ್ರವೇಶಿಸಿದನು ಎಂಬುದು ಸ್ಪಷ್ಟವಾಗಿಲ್ಲ. ರೈಲ್ವೇ ರಕ್ಷಣಾ ಪಡೆ ವ್ಯಕ್ತಿಯನ್ನು ಬಂಧಿಸಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿದೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ. ವಿಚಾರಣೆ ಮುಂದುವರೆದಂತೆ ಹೆಚ್ಚಿನ ವಿವರಗಳು ಬಹಿರಂಗಗೊಳ್ಳಲಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ