ಭಿಕ್ಷುಕಿಯ ಪ್ಲಾಸ್ಟಿಕ್ ಚೀಲದೊಳಗೆ 40 ಪರ್ಸ್, 75000 ರೂ. ನಗದು ಪತ್ತೆ
ಇಂದೋರ್ ನಗರದಲ್ಲಿ ಜನವರಿ 1, 2025 ರಿಂದ ಭಿಕ್ಷಾಟನೆ ನಿಷೇಧಿಸಲಾಗುವುದು ಮತ್ತು ಭಿಕ್ಷೆ ನೀಡುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಇತ್ತೀಚೆಗೆ ಇಂದೋರ್ನ ಹೈಕೋಟ್ ಬಳಿ ಭಿಕ್ಷುಕಿಯೊಬ್ಬಳು ಪತ್ತೆಯಾಗಿದ್ದು, ಆಕೆಯನ್ನು ತನಿಖೆ ನಡೆಸಿದಾಗ, ಆಕೆಯ ಬಳಿ ಇದ್ದ ಹಣ ಕಂಡು ಅಧಿಕಾರಿಗಳು ಶಾಕ್ ಆಗಿದ್ದಾರೆ.
ಇಂದೋರ್: ಮಧ್ಯಪ್ರದೇಶದ ಎರಡನೇ ಅತಿದೊಡ್ಡ ನಗರ ಮತ್ತು ಆ ರಾಜ್ಯದ ವಾಣಿಜ್ಯ ರಾಜಧಾನಿಯಾದ ಇಂದೋರ್ ನಗರದಲ್ಲಿ ಜನವರಿ 1, 2025ರಿಂದ ಭಿಕ್ಷೆ ಬೇಡುವ ಭಿಕ್ಷುಕರಿಗೆ ಮತ್ತು ಭಿಕ್ಷೆ ನೀಡುವ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸುವುದು ಸೇರಿದಂತೆ ಇತರೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಇಂದೋರ್ ಜಿಲ್ಲಾಡಳಿತ ಪ್ರಕಟಿಸಿದೆ. ಈ ನಡುವೆ ಇಂದೋರ್ನಲ್ಲಿ ಭಿಕ್ಷುಕಿಯೊಬ್ಬಳು ಪತ್ತೆಯಾಗಿದ್ದು, ಆಕೆಯನ್ನು ತನಿಖೆ ನಡೆಸಿದಾಗ, ಆಕೆಯ ಬಳಿ ಇದ್ದ ಹಣ ಕಂಡು ಅಧಿಕಾರಿಗಳು ಶಾಕ್ ಆಗಿದ್ದಾರೆ.
ಇಂದೋರ್ನ ಹೈಕೋರ್ಟಿನ ಅನತಿ ದೂರದಲ್ಲಿರುವ ಮಸೀದಿಯ ಹೊರಗೆ ಕುಳಿತು ಭಿಕ್ಷೆ ಬೇಡುತ್ತಿದ್ದ ಭಿಕ್ಷುಕಿಯೊಬ್ಬಳನ್ನು ವಶಕ್ಕೆ ಪಡೆಯಲಾಗಿದ್ದು,ಆಕೆಯ ಬಳಿ ಇದ್ದ ಪ್ಲಾಸ್ಟಿಕ್ ಚೀಲ ಪರಿಶೀಲಿಸಲಾಗಿದೆ. ಭಿಕ್ಷುಕಿಯ ಬ್ಯಾಗ್‌ನಲ್ಲಿ ಸುಮಾರು 30-40 ಪರ್ಸ್‌ಗಳು ಪತ್ತೆಯಾಗಿದ್ದು, ಅದರಲ್ಲಿ ಸುಮಾರು 75 ಸಾವಿರ ರೂ. ಇರುವುದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಭಿಕ್ಷುಕಿ ಮಸೀದಿಯ ಬಳಿ ಬಹಳ ಸಮಯದಿಂದ ಭಿಕ್ಷೆ ಬೇಡುತ್ತಿರುವುದು ತಿಳಿದುಬಂದಿದೆ. ನಂತರ ಆಕೆಯನ್ನು ಅಲ್ಲಿಂದ ಉಜ್ಜಯಿನಿಯ ಆಶ್ರಮಕ್ಕೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ: ಪ್ಯಾರಸಿಟಮಾಲ್ ಓವರ್ ಡೋಸ್ ನಿಂದ ಮಹಿಳೆ ಸಾವು
ಮಹಿಳೆಯೊಂದಿಗೆ ಮತ್ತೊಬ್ಬ ಭಿಕ್ಷುಕನನ್ನೂ ವಶಕ್ಕೆ ಪಡೆದ ಸರ್ಕಾರಿ ತಂಡ ಆತನಿಂದ 20 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ. ತಾನು ಪ್ರತಿದಿನ ಬೇರೆ ಬೇರೆ ಪ್ರದೇಶದಿಂದ ಇಂದೋರ್‌ಗೆ ಭಿಕ್ಷೆ ಬೇಡಲು ಬರುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾನೆ. ಜನವರಿ 1ರ ನಂತರ ನಗರದಲ್ಲಿ ಯಾರೇ ಭಿಕ್ಷಾಟನೆ ಮಾಡುತ್ತಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:42 am, Sun, 29 December 24