ಸ್ಪೋರ್ಟ್ಸ್ ಶೂ ಧರಿಸಿದ್ದಕ್ಕೆ ಯುವತಿಯನ್ನು ಕೆಲಸದಿಂದ ವಜಾಗೊಳಿಸಿದ ಕಂಪೆನಿ, ಕೋರ್ಟ್ ಮೊರೆ ಹೋದ ಯುವತಿಗೆ ಸಿಕ್ಕಿತು 32 ಲಕ್ಷ ರೂ.

ಕಂಪೆನಿಗಳಲ್ಲಿ ಕೆಲಸ ಮಾಡುವ ನೌಕರಿಗೆ ಕೆಲವೊಂದು ಕಟ್ಟುನಿಟ್ಟಾದ ಕ್ರಮಗಳು, ನಿಯಮಗಳನ್ನು ವಿಧಿಸುತ್ತದೆ. ಒಂದು ವೇಳೆ ಸರಿಯಾಗಿ ಕೆಲಸ ಮಾಡದಿದ್ದಲ್ಲಿ ಆ ನೌಕರರನ್ನು ಕೆಲಸದಿಂದ ವಜಾಗೊಳಿಸುವುದು ಸಹಜ. ಆದರೆ ಕೆಲಸಕ್ಕೆ ಸ್ಪೋರ್ಟ್ಸ್ ಶೂ ಧರಿಸಿದ್ದಕ್ಕಾಗಿ 20 ವರ್ಷದ ಯುವತಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಇದೇ ವಿಚಾರವಾಗಿ ಆಕೆಯು ಉದ್ಯೋಗ ನ್ಯಾಯಮಂಡಳಿಯ ಮೊರೆ ಹೋಗಿದ್ದಾಳೆ. ಆಕೆಯ ಪರವಾಗಿ ತೀರ್ಪು ನೀಡಿದ ನ್ಯಾಯಮಂಡಳಿಯೂ 30,000 ಪೌಂಡ್ (32 ಲಕ್ಷ ರೂ.) ಪರಿಹಾರವನ್ನು ನೀಡುವಂತೆ ಕಂಪೆನಿಗೆ ಆದೇಶಿಸಿದೆ.

ಸ್ಪೋರ್ಟ್ಸ್ ಶೂ ಧರಿಸಿದ್ದಕ್ಕೆ ಯುವತಿಯನ್ನು ಕೆಲಸದಿಂದ ವಜಾಗೊಳಿಸಿದ ಕಂಪೆನಿ, ಕೋರ್ಟ್ ಮೊರೆ ಹೋದ ಯುವತಿಗೆ ಸಿಕ್ಕಿತು 32 ಲಕ್ಷ ರೂ.
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 28, 2024 | 5:21 PM

ಉದ್ಯೋಗದ ಸ್ಥಳಗಳಲ್ಲಿ ಕಂಪೆನಿಗಳು ಕೆಲವೊಂದು ಕಟ್ಟುನಿಟ್ಟಾದ ಕ್ರಮಗಳು, ನಿಯಮಗಳನ್ನು ಪಾಲಿಸುತ್ತವೆ. ಕೆಲಸಕ್ಕೆ ಸಮಯಕ್ಕೆ ಸರಿಯಾಗಿ ಬರಬೇಕು, ಡ್ರೆಸ್ ಕೋಡ್ ಪಾಲಿಸಬೇಕು, ಸಹೋದ್ಯೋಗಿಗಳ ಜೊತೆಗೆ ಒಳ್ಳೆಯ ರೀತಿಯಲ್ಲಿ ವರ್ತಿಸಬೇಕು ಇಂತಹ ಸಾಕಷ್ಟು ನಿಯಮಗಳು ಇದ್ದೆ ಇರುತ್ತದೆ. ಒಂದು ವೇಳೆ ನೌಕರರು ಈ ನಿಯಮಗಳನ್ನು ಪಾಲಿಸದೇ ಹೋದರೆ ವಾರ್ನಿಂಗ್ ಕೊಡುತ್ತಾರೆ. ಆದರೆ ಇಲ್ಲೊಂದು ಕಡೆ ಕೆಲಸಕ್ಕೆ ಸ್ಪೋರ್ಟ್ಸ್ ಶೂ ಧರಿಸಿದ್ದಕ್ಕಾಗಿ 20 ವರ್ಷ ವಯಸ್ಸಿನ ಯುವತಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ಹೌದು, ಮ್ಯಾಕ್ಸಿಮಸ್ ಯುಕೆ ಸರ್ವೀಸಸ್ನಲ್ಲಿ ಕೆಲಸ ಮಾಡುತ್ತಿದ್ದ ಎಲಿಜಬೆತ್ ಬೆನಾಸ್ಸಿ, ಸಹೋದ್ಯೋಗಿಗಳು ಕೂಡ ಇದೇ ರೀತಿಯ ಶೂಗಳನ್ನು ಧರಿಸಿದ್ದರೂ, ತನ್ನ ಪಾದರಕ್ಷೆಗಳನ್ನೇ ಗುರಿಯಾಗಿಸಿಕೊಂಡಿದ್ದು ಕೆಲಸದಿಂದ ವಜಾ ಮಾಡಲಾಗಿದೆ ಎಂದು ನ್ಯಾಯಮಂಡಳಿಯ ಮೊರೆ ಹೋಗಿದ್ದಾರೆ. ಕೇವಲ 18ನೇ ವಯಸ್ಸಿನಲ್ಲಿ ನೇಮಕಗೊಂಡ ಬೆನಾಸ್ಸಿ 2022 ರಲ್ಲಿ ನೇಮಕಾತಿ ಏಜೆನ್ಸಿಗೆ ಸೇರಿಕೊಂಡಿದ್ದರು. ವ್ಯವಸ್ಥಾಪಕರು ಅವಳು ಶೂ ಧರಿಸಿದ್ದನ್ನು ಟೀಕಿಸಿ ಕೆಲಸದಿಂದ ವಜಾಗೊಳಿಸಿದ್ದಾರೆ.

ದಕ್ಷಿಣ ಲಂಡನ್‌ನ ಕ್ರೊಯ್ಡಾನ್‌ನಲ್ಲಿರುವ ಉದ್ಯೋಗ ನ್ಯಾಯಮಂಡಳಿಯೂ , ಬೆನಾಸ್ಸಿ ಪರವಾಗಿ ನಿಂತಿದೆ. ಈ ವಿಚಾರಣೆಯ ವೇಳೆಯಲ್ಲಿ ಆ ಕಂಪೆನಿಯಲ್ಲಿ ಹೆಚ್ಚಿನ ಸಹೋದ್ಯೋಗಿಗಳು ಇಪ್ಪತ್ತರ ಹರೆಯದವರಾಗಿದ್ದಾರೆ. ಬೆನಾಸ್ಸಿ ಅತ್ಯಂತ ಕಿರಿಯ ಉದ್ಯೋಗಿಯಾಗಿದ್ದಾರೆ. ಕಂಪನಿಯು ಯುವ ಉದ್ಯೋಗಿಯಲ್ಲಿ “ದೋಷವನ್ನು ಕಂಡುಹಿಡಿಯುವ ಬಯಕೆಯನ್ನು” ಪ್ರದರ್ಶಿಸಿದೆ ಎಂದು ನ್ಯಾಯಮಂಡಳಿಯೂ ತಿಳಿಸಿದೆ.

ಇದನ್ನೂ ಓದಿ: ಪಾಕ್ ವಿರುದ್ಧ ನಡೆದ ಯುದ್ಧದ ವೇಳೆ ಭಾರತೀಯ ಸೇನೆ ಸಾವಿರಾರು ಕಾಂಡೋಮ್‌ ಖರೀದಿ ಮಾಡಿದ್ದು ಏಕೆ? ಇಲ್ಲಿದೆ ಅಸಲಿ ವಿಚಾರ

ಆಕೆಯೂ ಸ್ಪೋರ್ಟ್ಸ್ ಶೂ ಧರಿಸಿದ್ದಳು ಎಂಬ ಕಾರಣಕ್ಕೆ ಉದ್ಯೋಗ ವಜಾ‌ಮಾಡುವುದು ಸರಿಯಲ್ಲ. ಕ್ಷುಲ್ಲಕ ಕಾರಣಕ್ಕೆ ಅಮಾನತು ಮಾಡಿದ್ದ ಕಂಪೆನಿಯ ಈ ನಿಯಮವು ಸರಿ ಇಲ್ಲ. ವಯಸ್ಸಿನ ಆಧಾರದ ಮೇಲೆ ತಾರತಮ್ಯ ಮಾಡುವುದು ಅಸಮಂಜಸ ಎಂದಿದೆ. ಹೀಗಾಗಿ ಆಕೆಗೆ 30,000 ಪೌಂಡ್ (32 ಲಕ್ಷ ರೂ.) ಪರಿಹಾರವನ್ನು ನೀಡುವಂತೆ ಕಂಪೆನಿಗೆ ಆದೇಶವನ್ನು ನೀಡಿದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ