Gotabaya Rajapaksa: ಶ್ರೀಲಂಕಾದಿಂದ ಪರಾರಿಯಾದ ಗೊಟಬಯ ರಾಜಪಕ್ಸ ವಿರುದ್ಧ ಮಾಲ್ಡೀವ್ಸ್​​ನಲ್ಲೂ ಪ್ರತಿಭಟನೆ

ಗೊಟಬಯ ರಾಜಪಕ್ಸ ಅವರಿಗೆ ಮಾಲೆಯಲ್ಲಿ ಜಾಗ ಕಲ್ಪಿಸಿ, ಬಚ್ಚಿಟ್ಟುಕೊಳ್ಳಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿ ನೂರಾರು ಜನರು ಮಾಲ್ಡೀವ್ಸ್​ ವಿಮಾನ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು.

Gotabaya Rajapaksa: ಶ್ರೀಲಂಕಾದಿಂದ ಪರಾರಿಯಾದ ಗೊಟಬಯ ರಾಜಪಕ್ಸ ವಿರುದ್ಧ ಮಾಲ್ಡೀವ್ಸ್​​ನಲ್ಲೂ ಪ್ರತಿಭಟನೆ
ಮಾಲ್ಡೀವ್ಸ್​​ನಲ್ಲಿ ಗೊಟಬಯ ರಾಜಪಕ್ಸ ವಿರುದ್ಧ ಪ್ರತಿಭಟನೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jul 14, 2022 | 8:45 AM

ನವದೆಹಲಿ: ಶ್ರೀಲಂಕಾ ದೇಶ ಇದೀಗ ವಿಶ್ವಾದ್ಯಂತ ಭಾರೀ ಸುದ್ದಿಯಲ್ಲಿದೆ. ಶ್ರೀಲಂಕಾದಲ್ಲಿ (Sri Lanka Crisis) ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿಗೆ ಅಲ್ಲಿನ ಸರ್ಕಾರವೇ ಕಾರಣವೆಂದು ಜನರು ದಂಗೆದ್ದಿದ್ದಾರೆ. ಜನರ ಪ್ರತಿಭಟನೆಗೆ ಹೆದರಿ ಶ್ರೀಲಂಕಾದಿಂದ ಮಾಲ್ಡೀವ್ಸ್​ಗೆ ಪರಾರಿಯಾಗಿರುವ ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ (Gotabaya Rajapaksa) ನಿನ್ನೆ ಮಾಲ್ಡೀವ್ಸ್‌ನಲ್ಲಿಯೂ ಪ್ರತಿಭಟನೆಯನ್ನು ಎದುರಿಸಿದರು. ಗೊಟಬಯ ರಾಜಪಕ್ಸ ಅವರಿಗೆ ಮಾಲೆಯಲ್ಲಿ ಜಾಗ ಕಲ್ಪಿಸಿ, ಬಚ್ಚಿಟ್ಟುಕೊಳ್ಳಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿ ನೂರಾರು ಜನರು ಮಾಲ್ಡೀವ್ಸ್​ ವಿಮಾನ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು.

ಶ್ರೀಲಂಕಾದಲ್ಲಿ ಹದಗೆಡುತ್ತಿರುವ ಆರ್ಥಿಕ ಬಿಕ್ಕಟ್ಟಿನ ಕುರಿತು ಶ್ರೀಲಂಕನ್ನರು ಗೊಟಬಯ ರಾಜಪಕ್ಸ ಅವರ ಕೊಲಂಬೊ ನಿವಾಸವನ್ನು ಆಕ್ರಮಿಸಿದ್ದರು. ಆ ಮನೆಯ ವಸ್ತುಗಳನ್ನು ಪುಡಿಪುಡಿ ಮಾಡಿ, ಗೋಡೆಯನ್ನು ಒಡೆದು, ಸ್ವಿಮಿಂಗ್​ಪೂಲ್​ಗೆ ಹಾರಿ ತಮ್ಮ ಆಕ್ರೋಶ ಹೊರಹಾಕಿದ್ದರು. ಅವರನ್ನು ಕಂಟ್ರೋಲ್ ಮಾಡಲು ಸಾಧ್ಯವಾಗದೆ ಪೊಲೀಸರು ಒದ್ದಾಡಿದ್ದರು. ಸದ್ಯಕ್ಕೆ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ನಿನ್ನೆ ಮುಂಜಾನೆ ಶ್ರೀಲಂಕಾದಿಂದ ಮಾಲ್ಡೀವ್ಸ್​ಗೆ ಪಲಾಯನ ಮಾಡಿದ ಗೊಟಬಯ ರಾಜಪಕ್ಸ ಮಾಲ್ಡೀವ್ಸ್​​ನಲ್ಲಿ ಇಳಿಯುತ್ತಿದ್ದಂತೆ ಶ್ರೀಲಂಕಾದ ವಲಸಿಗರು ಶ್ರೀಲಂಕಾದ ಧ್ವಜಗಳು ಮತ್ತು ಗೋ ಹೋಮ್ ಗೊಟ ಎಂಬ ಫಲಕಗಳನ್ನು ಹಿಡಿದು ಖಂಡಿಸಿದರು.

ಇದನ್ನೂ ಓದಿ: Sri Lanka Economic Crisis: ಮಾಲ್ಡೀವ್ಸ್​ಗೆ ಓಡಿಹೋದ ಅಧ್ಯಕ್ಷ ಗೊಟಬಯ ರಾಜಪಕ್ಸ; ಮಾಜಿ ವಿತ್ತ ಸಚಿವಗೆ ವಿಮಾನ ಹತ್ತಲು ಬಿಡದ ಜನ

ಇದನ್ನೂ ಓದಿ
Image
Gotabaya Rajapaksa Profile: ಆಗ ಹೀರೊ ಈಗ ವಿಲನ್; ಶ್ರೀಲಂಕಾ ಬಿಕ್ಕಟ್ಟಿನ ಖಳನಾಯಕ ಗೊಟಬಯ ರಾಜಪಕ್ಸ
Image
Sri Lanka Economic Crisis: ಮಾಲ್ಡೀವ್ಸ್​ಗೆ ಓಡಿಹೋದ ಅಧ್ಯಕ್ಷ ಗೊಟಬಯ ರಾಜಪಕ್ಸ; ಮಾಜಿ ವಿತ್ತ ಸಚಿವಗೆ ವಿಮಾನ ಹತ್ತಲು ಬಿಡದ ಜನ
Image
ರಾಜೀನಾಮೆ ಪತ್ರಕ್ಕೆ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಸಹಿ; ನಾಳೆ ಸಂಸತ್​​ನಲ್ಲಿ ಘೋಷಣೆ
Image
Basil Rajapaksa: ಶ್ರೀಲಂಕಾದಿಂದ ಪಲಾಯನಕ್ಕೆ ಮುಂದಾದ ಮಾಜಿ ಸಚಿವ ಬಸಿಲ್ ರಾಜಪಕ್ಸ; ದುಬೈಗೆ ಹಾರದಂತೆ ತಡೆದ ಅಧಿಕಾರಿಗಳು

‘ಆತ್ಮೀಯ ಮಾಲ್ಡೀವಿಯನ್ ಸ್ನೇಹಿತರೇ, ದಯವಿಟ್ಟು ಅಪರಾಧಿಗಳನ್ನು ರಕ್ಷಿಸದಂತೆ ನಿಮ್ಮ ಸರ್ಕಾರವನ್ನು ಒತ್ತಾಯಿಸಿ’ ಎಂದು ಒತ್ತಾಯಿಸಿ ಶ್ರೀಲಂಕಾದವರು ಕಪ್ಪು ಮತ್ತು ಬಿಳಿ ಬ್ಯಾನರ್ ಹಿಡಿದಿರುವ ಫೋಟೋಗಳು ವೈರಲ್ ಆಗಿದೆ. ಬುಧವಾರ ಮಾಲೆಯಲ್ಲಿನ ಕೃತಕ ಬೀಚ್ ಪ್ರದೇಶದಲ್ಲಿ ಶ್ರೀಲಂಕಾದವರು ಪ್ರತಿಭಟಿಸಿದಾಗ, ವಿಶೇಷ ಕಾರ್ಯಾಚರಣೆಯ ಪೊಲೀಸರು ಫಲಕಗಳನ್ನು ವಶಪಡಿಸಿಕೊಂಡರು. ಪ್ರತಿಭಟನಾಕಾರರನ್ನು ಆ ಜಾಗದಿಂದ ಕಳುಹಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರಾಜಪಕ್ಸ ಅವರು ಮಾಲೆಯ ವಿಶೇಷವಾದ ರೆಸಾರ್ಟ್‌ನಲ್ಲಿ ತಂಗಿದ್ದಾರೆ ಎಂದು ಸ್ಥಳೀಯ ವರದಿಗಳು ಸೂಚಿಸಿವೆ.

ಯುದ್ಧಾಪರಾಧಗಳ ಆರೋಪಗಳು ಸೇರಿದಂತೆ ಹಲವು ನ್ಯಾಯಾಲಯದ ಮೊಕದ್ದಮೆಗಳನ್ನು ಎದುರಿಸುತ್ತಿರುವ ಗೊಟಬಯ ರಾಜಪಕ್ಸ ಅವರಿಗೆ ವಾಸ್ತವ್ಯ ಹೂಡಲು ವ್ಯವಸ್ಥೆ ಮಾಡಿರುವುದನ್ನು ಮಾಲ್ಡೀವ್ಸ್‌ನ ಪ್ರಮುಖ ವಿರೋಧ ಪಕ್ಷ ಪ್ರೋಗ್ರೆಸ್ಸಿವ್ ಪಾರ್ಟಿ ವಿರೋಧಿಸಿದೆ. ರಾಜಪಕ್ಸ ಅವರನ್ನು ಒಪ್ಪಿಕೊಳ್ಳುವ ಮೂಲಕ ನಾವು ಶ್ರೀಲಂಕಾದಲ್ಲಿರುವ ನಮ್ಮ ಸ್ನೇಹಿತರಿಗೆ ದ್ರೋಹ ಮಾಡುತ್ತಿದ್ದೇವೆ ಎಂದು ಅದು ಟೀಕಿಸಿದೆ.

ಇದನ್ನೂ ಓದಿ: Sri Lanka Crisis: ಪ್ರವಾಸಿ ತಾಣದಂತಾದ ಶ್ರೀಲಂಕಾ ಅಧ್ಯಕ್ಷರ ನಿವಾಸ; ಮನೆಯೊಳಗೆ ನುಗ್ಗಿ ಸಂಭ್ರಮಿಸಿದ ಪ್ರತಿಭಟನಾಕಾರರು

ಗೊಟಬಯ ರಾಜಪಕ್ಸ ಮಾಲ್ಡೀವ್ಸ್​ನಿಂದ ಸಿಂಗಾಪುರಕ್ಕೆ ಹೋಗಲಿದ್ದಾರೆ. ಅವರ ಸಹೋದರ ಮಹಿಂದಾ ರಾಜಪಕ್ಸ ಮೇ ತಿಂಗಳಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದು, ಅಣ್ಣ-ತಮ್ಮಂದಿರಿಬ್ಬರೂ ಶ್ರೀಲಂಕಾ ದೇಶದ ಪ್ರಸ್ತುತ ಆರ್ಥಿಕ ದುಃಸ್ಥಿತಿಗೆ ಕಾರಣರಾಗಿದ್ದಾರೆ. ಜುಲೈ 20ರಂದು ಶ್ರೀಲಂಕಾಕ್ಕೆ ಹೊಸ ಅಧ್ಯಕ್ಷರ ನೇಮಕವಾಗಲಿದೆ. ಸಂಸತ್ತಿನ ಸ್ಪೀಕರ್ ಮಹಿಂದಾ ಯಾಪಾ ಅಬೆವರ್ಧನ ಅವರು ರಾನಿಲ್ ವಿಕ್ರಮಸಿಂಘೆ ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿದ್ದಾರೆ ಎಂದು ಖಚಿತಪಡಿಸಿದ್ದಾರೆ.

ಆದರೂ ಶ್ರೀಲಂಕಾದಲ್ಲಿ ಇನ್ನೂ ಕರ್ಫ್ಯೂ ಮತ್ತು ತುರ್ತು ಪರಿಸ್ಥಿತಿಯು ಕೋಲಾಹಲವನ್ನು ತಡೆಯಲು ಸಾಧ್ಯವಾಗಿಲ್ಲ. US ರಾಯಭಾರ ಕಚೇರಿಯು ಶ್ರೀಲಂಕಾದಲ್ಲಿ ಬುಧವಾರ ಮತ್ತು ಗುರುವಾರದ ಕಾನ್ಸುಲರ್ ಸೇವೆಗಳನ್ನು ರದ್ದುಗೊಳಿಸಿದೆ.

Published On - 8:43 am, Thu, 14 July 22

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್