Viral Video: ಟೋಲ್ ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿಕೊಂಡ “ದಿ ಗ್ರೇಟ್ ಖಲಿ”
WWE ಕುಸ್ತಿಪಟು ದಲೀಪ್ ಸಿಂಗ್ ರಾಣಾ ಸೋಮವಾರ ಪಂಜಾಬ್‌ನ ಲುಧಿಯಾನದಲ್ಲಿ ಟೋಲ್ ಪ್ಲಾಜಾದ ಸಿಬ್ಬಂದಿಯೊಂದಿಗೆ ಜಗಳವಾಡಿದ್ದಾರೆ. ಟೋಲ್ ಪ್ಲಾಜಾದ ಸಿಬ್ಬಂದಿ ಖಲಿ ಜೊತೆ ವಾಗ್ವಾದ ನಡೆಸುತ್ತಿರುವ ವಿಡಿಯೋ ಮಂಗಳವಾರ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಪಾಣಿಪತ್-ಜಲಂಧರ್ ರಾಷ್ಟ್ರೀಯ ಹೆದ್ದಾರಿಯ ಲಾಧೋವಲ್‌ನಲ್ಲಿ ಈ ಘಟನೆ ನಡೆದಿದೆ.
ದಿ ಗ್ರೇಟ್ ಖಲಿ ಎಂದು ಪ್ರಸಿದ್ಧಿ ಪಡೆದಿರುವ WWE ಕುಸ್ತಿಪಟು ದಲೀಪ್ ಸಿಂಗ್ ರಾಣಾ ಸೋಮವಾರ ಪಂಜಾಬ್‌ನ ಲುಧಿಯಾನದಲ್ಲಿ ಟೋಲ್ ಪ್ಲಾಜಾದ ಸಿಬ್ಬಂದಿಯೊಂದಿಗೆ ಜಗಳವಾಡಿದ್ದಾರೆ. ಟೋಲ್ ಪ್ಲಾಜಾದ ಸಿಬ್ಬಂದಿ ಖಲಿ ಜೊತೆ ವಾಗ್ವಾದ ನಡೆಸುತ್ತಿರುವ ವಿಡಿಯೋ ಮಂಗಳವಾರ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಪಾಣಿಪತ್-ಜಲಂಧರ್ ರಾಷ್ಟ್ರೀಯ ಹೆದ್ದಾರಿಯ ಲಾಧೋವಲ್‌ನಲ್ಲಿ ಈ ಘಟನೆ ನಡೆದಿದೆ. WWE ಸ್ಟಾರ್ ತನ್ನ ಕಾರಿನಲ್ಲಿ ಇತರ ಕೆಲವು ಜನರೊಂದಿಗೆ ಲುಧಿಯಾನ ಮೂಲಕ ಕರ್ನಾಲ್‌ಗೆ ಪ್ರಯಾಣಿಸುತ್ತಿದ್ದರು. ವೀಡಿಯೊದಲ್ಲಿ, ಟೋಲ್ ಪ್ಲಾಜಾದಲ್ಲಿನ ಸಿಬ್ಬಂದಿ ಖಲಿಯನ್ನು ಮಾತನಾಡುತ್ತಿರುವುದನ್ನು ಕಾಣಬಹುದು. ಮತ್ತು ಕುಸ್ತಿಪಟು ತಮ್ಮ ಸಿಬ್ಬಂದಿಯೊಬ್ಬರಿಗೆ ಐಡಿ ಕಾರ್ಡ್ ತೋರಿಸಲು ಕೇಳಿದಾಗ ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ವೀಡಿಯೋದಲ್ಲಿ, ಸಿಬ್ಬಂದಿ ನನ್ನನ್ನು ‘ಬ್ಲ್ಯಾಕ್‌ಮೇಲ್’ ಮಾಡುತ್ತಿದ್ದು, ನಾನು ಪ್ರಯಾಣಿಸುತ್ತಿದ್ದ ದಾರಿಯಲ್ಲಿ ತಡೆಹಿಡಿದ್ದಿದ್ದಾರೆ ಎಂದು ಎಂದು ಖಲಿ ಹೇಳುವುದನ್ನು ಕೇಳಬಹುದು. ಅವರ ಬಳಿ ಗುರುತಿನ ಚೀಟಿ ಇರಲಿಲ್ಲ ಎಂದು ಸಿಬ್ಬಂಧಿಗಳು ಹೇಳಿದ್ದಾರೆ. ಖಲಿ, ತನ್ನ ಕಾರಿನೊಳಗೆ ಕುಳಿಕೊಂಡು ಬ್ಯಾರಿಕೇಡ್ ತೆರೆಯಲು ಸಿಬ್ಬಂದಿಗೆ ಹೇಳಿದ್ದಾರೆ ಆದರೆ ಸಿಬ್ಬಂದಿ ಇದಕ್ಕೆ ನಿರಾಕರಿಸಿದರು. ಕಾರಿನ ಸುತ್ತಲಿದ್ದ ಜನರು ಇನ್ನಷ್ಟು ಕೋಪ ಬರುವಂತೆ ಮಾಡುತ್ತಿದ್ದರು. ‘ಓ ಜುಟ್ಟಿಯಾನ್ ನಾ ಖಾಲ್ ಲಿ…” (ನಾವು ನಿಮ್ಮನ್ನು ಶೂಗಳಿಂದ ಥಳಿಸುತ್ತೇವೆ) ಇದನ್ನು ಕೇಳಿ ಖಲಿ ಕಾರಿನಿಂದ ಹೊರಗೆ ಬಂದಿದ್ದಾರೆ ಇದು ಕುಸ್ತಿಪಟು ತನ್ನ ಕಾರಿನಿಂದ ಹೊರಬರುವಂತೆ ಮಾಡಿತು.
ಘಟನೆ ನಡೆದ ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಇದ್ದರು. ಸಿಬ್ಬಂದಿ ಸದಸ್ಯರು ಖಲಿಯನ್ನು ನಿಮ್ಮ ಮಿತಿಯೊಳಗೆ ಇರುವಂತೆ ಎಚ್ಚರಿಕೆ ನೀಡುತ್ತಾರೆ. ಇದರಿಂದ ಕೆರಳಿದ ಖಲಿ ಸ್ವತಃ ಬ್ಯಾರಿಕೇಡ್ ಅನ್ನು ತೆಗೆದುಹಾಕಲು ಪ್ರಯತ್ನಿಸುತ್ತಾರೆ. ಸಿಬ್ಬಂದಿಗಳು ಕಳಿ ಅವರ ಕಾರಿನ ವಾಹದ ನಂಬರ್ ಬರೆದುಕೊಳ್ಳತ್ತಾರೆ. ನಂತರ ಅಲ್ಲಿಂದ ಖಲಿ ಹಿಂತಿರುಗುತ್ತಾರೆ.
#Khali allegedly slaps a toll plaza employee at #Ladowal toll plaza.
this after Toll plaza employees allegedly bully him, call him a #monkey pic.twitter.com/WnY1meLrV9
— Satya Tiwari (@SatyatTiwari) July 12, 2022
ದಿ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಖಲಿ, ಟೋಲ್ ಪ್ಲಾಜಾ ಸಿಬ್ಬಂದಿ ತಮ್ಮೊಂದಿಗೆ ಪೋಟೋ ಕ್ಲಿಕ್ ಮಾಡುವಂತೆ ಒತ್ತಾಯಿಸಿದಾಗ ಈ ಜಗಳ ಉಂಟಾಯಿತು. ಅವರು ನನ್ನ ಜೊತೆಗೆ ಫೋಟೋ ಕ್ಲಿಕ್ ಮಾಡಲು ಒತ್ತಾಯಿಸಿದ್ದಾರೆ ಮತ್ತು ಒಂದು ರೀತಿಯಲ್ಲಿ ಬ್ಲಾಕ್ ಮೇಲ್ ಶುರು ಮಾಡಿದ್ದಾರೆ. ಅವರು ನನ್ನಲ್ಲಿ ನಯವಾಗಿ ವಿನಂತಿಸಿದ್ದರೆ ನಾನು ನಿರಾಕರಿಸುತ್ತಿರಲಿಲ್ಲ ಆದರೆ ಅವರು ಅಸಭ್ಯವಾಗಿ ವರ್ತನೆ ಮಾಡಿದ್ದಾರೆ. ಈ ಕಾರಣಕ್ಕೆ ನಾನು ಫೋಟೋ ಕ್ಲಿಕ್ ಮಾಡಲು ಒಪ್ಪಲಿಲ್ಲ, ಈ ಕಾರಣಕ್ಕೆ ಅವರು ನನ್ನನ್ನೂ ಅಲ್ಲಿಂದ ಹೋಗಲು ಅವರ ಬಿಡಲಿಲ್ಲ ಎಂದು ಹೇಳಿದರು.
Published On - 12:37 pm, Wed, 13 July 22