International Yoga Day 2022: ಗಾರ್ಡಿಯನ್ ರಿಂಗ್ ಮೂಲಕ ವಿವಿಧ ದೇಶಗಳ ಯೋಗ ಪ್ರಸಾರ; 5 ಪ್ರಮುಖ ಅಂಶಗಳು ಇಲ್ಲಿವೆ

Guardian Ring: ಇಂದು ವಿಶ್ವದಾದ್ಯಂತ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಡಿಡಿ ಇಂಡಿಯಾದಲ್ಲಿ ಪ್ರಸಾರ ಮಾಡಲಾಗುತ್ತದೆ. ಅದಕ್ಕೆ 'ಗಾರ್ಡಿಯನ್ ರಿಂಗ್' ಎಂದು ಕರೆಯಲಾಗುತ್ತದೆ.

International Yoga Day 2022: ಗಾರ್ಡಿಯನ್ ರಿಂಗ್ ಮೂಲಕ ವಿವಿಧ ದೇಶಗಳ ಯೋಗ ಪ್ರಸಾರ; 5 ಪ್ರಮುಖ ಅಂಶಗಳು ಇಲ್ಲಿವೆ
ಯೋಗಾಸನImage Credit source: Hindustan Times
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jun 21, 2022 | 8:23 AM

“ಮಾನವೀಯತೆಗಾಗಿ ಯೋಗ” (Yoga for Humanity) ಎಂಬ ಪರಿಕಲ್ಪನೆಯೊಂದಿಗೆ ಇಂದು (ಜೂನ್ 21) ವಿಶ್ವದ ವಿವಿಧ ಭಾಗಗಳಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು (International Yoga Day) ಆಚರಿಸಲಾಗುತ್ತಿದೆ. ಈ ವರ್ಷದ ಯೋಗ ದಿನಾಚರಣೆಯ ಮುಖ್ಯಾಂಶಗಳಲ್ಲಿ “ದಿ ಗಾರ್ಡಿಯನ್ ರಿಂಗ್” (The Guardian Ring) ಕೂಡ ಒಂದು. ಇದು “ಒಂದು ಸೂರ್ಯ, ಒಂದೇ ಭೂಮಿ” (One Sun, One earth) ಎಂಬ ಪರಿಕಲ್ಪನೆಯನ್ನು ಒತ್ತಿಹೇಳುತ್ತದೆ. ಈ ಪರಿಕಲ್ಪನೆ ಯೋಗದ ಶಕ್ತಿಯನ್ನು ಪ್ರದರ್ಶಿಸುತ್ತದೆ. ಈಗಾಗಲೇ ಸೂರ್ಯ ಉದಯಿಸುವ ನಾಡು ಎಂಬ ಖ್ಯಾತಿ ಪಡೆದಿರುವ ಜಪಾನ್‌ನಿಂದ ಯೋಗ ದಿನದ ಆಚರಣೆಗಳು ಮೊದಲು ಪ್ರಾರಂಭವಾಗಿವೆ.

ಇಂದು ವಿಶ್ವದಾದ್ಯಂತ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪ್ರಸಾರ ಮಾಡಲಾಗುತ್ತದೆ. ಅದಕ್ಕೆ ‘ಗಾರ್ಡಿಯನ್ ರಿಂಗ್’ ಎಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆಯು ಪ್ರಪಂಚದಾದ್ಯಂತದ ವಿವಿಧ ಭಾರತೀಯ ಮಿಷನ್‌ಗಳಿಂದ ಯೋಗ ದಿನಾಚರಣೆಯ ಮಾಹಿತಿಯನ್ನು ಒಟ್ಟಿಗೇ ನೀಡುತ್ತದೆ. ಇದು ಪ್ರತಿ ವರ್ಷ ಅಂತಾರಾಷ್ಟ್ರೀಯ ಯೋಗ ದಿನದಂದು ವ್ಯಾಯಾಮ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.

ಇದನ್ನೂ ಓದಿ
Image
PM Modi Speech: ಯೋಗ ಶಾಂತಿ ತಂದುಕೊಡುತ್ತದೆ; ಶಾಂತಿ ವ್ಯಕ್ತಿಗೆ ಸೀಮಿತವಾಗಿಲ್ಲ, ಇಡೀ ಜಗತ್ತಿಗೆ ಅನ್ವಯ ಆಗುತ್ತೆ
Image
International Yoga Day 2022: ರಾಧಿಕಾ ನಾರಾಯಣ್​ ಫಿಟ್ನೆಸ್​ ರಹಸ್ಯವೇ ಯೋಗಾಸನ; ಇಲ್ಲಿವೆ ಫೋಟೋಗಳು
Image
International Yoga Day 2022: ಜಗತ್ತಿಗೆ ಯೋಗ ಸೂತ್ರವನ್ನು ನೀಡಿದ ಮಹಾತ್ಮರು ಇವರೇ, ಮಹರ್ಷಿ ಪತಂಜಲಿ
Image
International Yoga Day 2022: ಯೋಗದಿಂದ ಬದಲಾಯಿತು ಈ ಬಾಲಿವುಡ್ ನಟಿಯರ ಬದುಕು; ಇಲ್ಲಿದೆ ವಿವರ

ಇಂದು ಬೆಳಗ್ಗೆ 6 ಗಂಟೆಗೆ ಜಪಾನ್‌ನಿಂದ ದಿ ಗಾರ್ಡಿಯನ್ ರಿಂಗ್ ಪರಿಕಲ್ಪನೆಯಡಿ ಯೋಗ ದಿನಾಚರಣೆಯ ಪ್ರಸಾರ ಶುರುವಾಗಿದೆ. ನಂತರ ಪಶ್ಚಿಮಕ್ಕೆ ಚಲಿಸುತ್ತಿದ್ದಂತೆ ಇತರ ದೇಶಗಳ ಯೋಗ ದಿನಾಚರಣೆಯ ಮಾಹಿತಿಯನ್ನು ಕೂಡ ಪ್ರಸಾರ ಮಾಡಲಾಗುತ್ತದೆ.

ಗಾರ್ಡಿಯನ್ ರಿಂಗ್ ಬಗ್ಗೆ ತಿಳಿದುಕೊಳ್ಳಬೇಕಾದ 5 ವಿಷಯಗಳು ಇಲ್ಲಿವೆ:

1. ಗಾರ್ಡಿಯನ್ ರಿಂಗ್ ಪ್ರೋಗ್ರಾಂ ಸೂರ್ಯನ ಚಲನೆಯನ್ನು ಆಚರಿಸುತ್ತದೆ. ‘ಒಂದು ಸೂರ್ಯ, ಒಂದು ಭೂಮಿ’ ಎಂಬ ಪರಿಕಲ್ಪನೆಯನ್ನು ಇದು ಒತ್ತಿಹೇಳುತ್ತದೆ. ಪೂರ್ವದಿಂದ ಪಶ್ಚಿಮಕ್ಕೆ ಸೂರ್ಯ ಚಲಿಸುತ್ತಿದ್ದಂತೆ ಎಲ್ಲಾ ದೇಶಗಳ ಜನರು ಯೋಗದೊಂದಿಗೆ ಸೂರ್ಯನನ್ನು ಸ್ವಾಗತಿಸುತ್ತಿದ್ದಾರೆ. ಭಾರತೀಯ ಸಂಪ್ರದಾಯವಾದ “ಸೂರ್ಯ ನಮಸ್ಕಾರ” ಅಥವಾ ಸೂರ್ಯ ನಮಸ್ಕಾರವನ್ನು ಆಚರಿಸಲಾಗುತ್ತಿದೆ.

ಇದನ್ನೂ ಓದಿ: International Yoga Day 2022 Live: ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗಾಭ್ಯಾಸ

2. ‘ಮಾನವೀಯತೆಗಾಗಿ ಯೋಗ’ ಎಂಬ ಈ ವರ್ಷದ ಥೀಮ್‌ಗೆ ಅನುಗುಣವಾಗಿ ಈ ಕಾರ್ಯಕ್ರಮವು ವಿವಿಧ ರಾಷ್ಟ್ರೀಯತೆಗಳ ಜನರು ಬೆಳಗಿನ ಜಾವದಲ್ಲಿ ಯೋಗವನ್ನು ಆಚರಿಸಲು ಒಟ್ಟಿಗೆ ಸೇರುವುದನ್ನು ತೋರಿಸುತ್ತದೆ.

3. 80ಕ್ಕೂ ಹೆಚ್ಚು ಭಾರತೀಯ ಮಿಷನ್‌ಗಳು ಮತ್ತು ರಾಯಭಾರ ಕಚೇರಿಗಳು ತಮ್ಮ ದೇಶಗಳ ಐಕಾನಿಕ್ ಸ್ಥಳಗಳಲ್ಲಿ ಯೋಗ ಕಾರ್ಯಕ್ರಮಗಳನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸುತ್ತಿವೆ.

4. ವಿದೇಶದಲ್ಲಿರುವ ಭಾರತೀಯ ಮಿಷನ್‌ಗಳು ಪ್ರತಿ ವರ್ಷ ಅಂತಾರಾಷ್ಟ್ರೀಯ ಯೋಗ ದಿನದಂದು ಯೋಗ ಚಟುವಟಿಕೆಗಳನ್ನು ಆಯೋಜಿಸುತ್ತಿವೆ. ಆದರೆ, ಇದು ಮೊದಲ ಬಾರಿಗೆ ‘ಗಾರ್ಡಿಯನ್ ರಿಂಗ್’ ರೀತಿಯಲ್ಲಿ ಪರಿಕಲ್ಪನೆ ರೂಪಿಸಲಾಗಿದೆ. ಪೂರ್ವದಿಂದ ಪ್ರಾರಂಭಿಸಿ ವಿವಿಧ ದೇಶಗಳಿಂದ ಯೋಗ ಚಟುವಟಿಕೆಗಳನ್ನು ನಡೆಸಲಾಗುತ್ತದೆ.

5. ಬೆಳಗ್ಗೆ 3 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಈ ಮ್ಯಾರಥಾನ್ ಪ್ರಸಾರದಲ್ಲಿ ವಿಶ್ವದಾದ್ಯಂತ 80 ಯೋಗ ಕಾರ್ಯಕ್ರಮಗಳ ತಡೆರಹಿತ ಪ್ರಸಾರ ಮಾಡಲಾಗುತ್ತದೆ. ಆಸ್ಟ್ರೇಲಿಯಾದಿಂದ ನ್ಯೂಯಾರ್ಕ್‌ಗೆ, ಆಫ್ರಿಕಾದಿಂದ ಲ್ಯಾಟಿನ್‌ಗೆ ಅಮೇರಿಕಾ ಸೇರಿದಂತೆ ಡಿಡಿ ಇಂಡಿಯಾ ಪ್ರಪಂಚದಾದ್ಯಂತ ಇರುವ ಐಕಾನಿಕ್ ಸ್ಥಳಗಳಿಂದ ವಿಶೇಷ ದೃಶ್ಯಗಳನ್ನು ವೀಕ್ಷಕರಿಗೆ ತಲುಪಿಸುತ್ತದೆ.

ಇನ್ನಷ್ಟು ಯೋಗ ದಿನಾಚರಣೆಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:20 am, Tue, 21 June 22

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ