ಮೈಸೂರಿನಲ್ಲಿ ಉಪಹಾರ ಸೇವಿಸುವ ಪ್ರಧಾನಿ ಮೋದಿ ಅವರ ಬೆಳ್ಳಿ ತಟ್ಟೆ, ಲೋಟ ಹೇಗಿದೆ ನೋಡಿ

ಮೈಸೂರಿನಲ್ಲಿ ಉಪಹಾರ ಸೇವಿಸುವ ಪ್ರಧಾನಿ ಮೋದಿ ಅವರ ಬೆಳ್ಳಿ ತಟ್ಟೆ, ಲೋಟ ಹೇಗಿದೆ ನೋಡಿ

TV9 Web
| Updated By: sandhya thejappa

Updated on:Jun 21, 2022 | 9:24 AM

ಮೈಸೂರು ರಾಜಮನೆತನದ ಜೊತೆ ಪ್ರಧಾನಿ ಮೋದಿ ಅರಮನೆಯಲ್ಲಿ ಉಪಹಾರ ಸೇವಿಸುತ್ತಾರೆ. ಪ್ರಧಾನಿ ಮೋದಿಗಾಗಿ ಬಗೆ ಬಗೆಯ ಸಿಹಿ ತಿಂಡಿಗಳು ಸಿದ್ಧವಾಗಿವೆ. ಹತ್ತಕ್ಕೂ ಹೆಚ್ಚು ಬಗೆ ಬಗೆಯ ಸಿಹಿ ತಿಂಡಿಗಳು ಮೋದಿಗಾಗಿ ಸಿದ್ಧವಾಗಿವೆ.

ಮೈಸೂರು: ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ (International Yoga Day) ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮೈಸೂರಿಗೆ ಆಗಮಿಸಿದ್ದಾರೆ. ಯೋಗಾಭ್ಯಾಸ ಮಾಡಿದ ಬಳಿಕ ಉಪಹಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೈಸೂರು ರಾಜಮನೆತನದ ಜೊತೆ ಪ್ರಧಾನಿ ಮೋದಿ ಅರಮನೆಯಲ್ಲಿ ಉಪಹಾರ ಸೇವಿಸುತ್ತಾರೆ. ಪ್ರಧಾನಿ ಮೋದಿಗಾಗಿ ಬಗೆ ಬಗೆಯ ಸಿಹಿ ತಿಂಡಿಗಳು ಸಿದ್ಧವಾಗಿವೆ. ಹತ್ತಕ್ಕೂ ಹೆಚ್ಚು ಬಗೆ ಬಗೆಯ ಸಿಹಿ ತಿಂಡಿಗಳು ಮೋದಿಗಾಗಿ ಸಿದ್ಧವಾಗಿವೆ. ಬೆಂಗಳೂರು ಮೂಲದ ದಿ ಫೆಸ್ಟೋ ಕ್ಯಾಟರಿಂಗ್​​ನಲ್ಲಿ ಬಾಣಸಿಗ ಪ್ರಸಾದ್ ಮುನಿರಾಮ್ ಎಂಬುವವರು ವಿಶೇಷ ತಿನಿಸುಗಳನ್ನ ತಯಾರಿಸಿದ್ದಾರೆ. ಇನ್ನು ಮೋದಿಗೆ ಉಪಹಾರ ಸೇವಿಸಲು ಬೆಳ್ಳಿ ತಟ್ಟೆ, ಲೋಟದ ವ್ಯವಸ್ಥೆ ಮಾಡಲಾಗಿದೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 21, 2022 09:17 AM