PM Modi Speech: ಯೋಗ ಶಾಂತಿ ತಂದುಕೊಡುತ್ತದೆ; ಶಾಂತಿ ವ್ಯಕ್ತಿಗೆ ಸೀಮಿತವಾಗಿಲ್ಲ, ಇಡೀ ಜಗತ್ತಿಗೆ ಅನ್ವಯ ಆಗುತ್ತೆ

ಯೋಗ ದಿನದ ಶುಭಾಶಯಗಳನ್ನ ತಿಳಿಸಿದ ಪ್ರಧಾನಿ ಮೋದಿ, ಮೈಸೂರು ಭಾರತದ ಸಂಸ್ಕೃತಿಯ ಕೇಂದ್ರ. ವಿಶ್ವ ಸ್ವಾಸ್ಥ್ಯಕ್ಕೆ ಮೈಸೂರು ಯೋಗದ ಮೂಲಕ ಕೊಡುಗೆ ನೀಡಿದೆ. ವಿಶ್ವದ ಮೂಲೆ ಮೂಲೆಯಲ್ಲೂ ಯೋಗ ಮಾಡುವಂತಾಗಿದೆ. ಮಾನವತೆಗಾಗಿ ಯೋಗ ಧ್ಯೇಯ ನೀಡಿದ ವಿಶ್ವಸಂಸ್ಥೆಗೆ ಧನ್ಯವಾದ.

PM Modi Speech: ಯೋಗ ಶಾಂತಿ ತಂದುಕೊಡುತ್ತದೆ; ಶಾಂತಿ ವ್ಯಕ್ತಿಗೆ ಸೀಮಿತವಾಗಿಲ್ಲ, ಇಡೀ ಜಗತ್ತಿಗೆ ಅನ್ವಯ ಆಗುತ್ತೆ
ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: ಆಯೇಷಾ ಬಾನು

Updated on:Jun 21, 2022 | 8:03 AM

ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ(Mysuru) ಇಂದು 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ(International Yoga Day 2022) ಅದ್ಧೂರಿಯಾಗಿ ನೆರವೇರಿದೆ. ಮೈಸೂರು ಅರಮನೆ ಮುಂಭಾಗದಲ್ಲಿ ಪ್ರಧಾನಿ ನರೇಂದ್ರ(PM Narendra Modi) ಮೋದಿ ನೇತೃತ್ವದಲ್ಲಿ ಯೋಗಾಭ್ಯಾಸ ಕಾರ್ಯಕ್ರಮ ನಡೆಯಿತು. ಸಾವಿರಾರು ಯೋಗಪಟುಗಳು, ರಾಜ್ಯಪಾಲ, ಸಿಎಂ ಬೊಮ್ಮಾಯಿ, ರಾಜವಂಶಸ್ಥರಾದ ಪ್ರಮೋದಾದೇವಿ, ಯದುವೀರ್ ಒಡೆಯರ್, ಕೇಂದ್ರ ಆಯುಷ್ ಇಲಾಖೆ ಸಚಿವ ಸರ್ಬಾನಂದ ಸೋನೋವಾಲ್, ಸಚಿವರಾದ ಡಾ.ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರ ಜೊತೆ ಮೋದಿ ಯೋಗ ಮಾಡಿದ್ರು. ಈ ವೇಳೆ ಭಾಷಣ ಮಾಡಿದ ಪ್ರಧಾನಿ ಮೋದಿ ಯೋಗ ಮಾತ್ರ ನಿರೋಗದಿಂದ ಬದುಕುವಂತೆ ಮಾಡುತ್ತೆ ಎಂದರು.

ಯೋಗ ದಿನದ ಶುಭಾಶಯಗಳನ್ನ ತಿಳಿಸಿದ ಪ್ರಧಾನಿ ಮೋದಿ, ಮೈಸೂರು ಭಾರತದ ಸಂಸ್ಕೃತಿಯ ಕೇಂದ್ರ. ವಿಶ್ವ ಸ್ವಾಸ್ಥ್ಯಕ್ಕೆ ಮೈಸೂರು ಯೋಗದ ಮೂಲಕ ಕೊಡುಗೆ ನೀಡಿದೆ. ವಿಶ್ವದ ಮೂಲೆ ಮೂಲೆಯಲ್ಲೂ ಯೋಗ ಮಾಡುವಂತಾಗಿದೆ. ಮಾನವತೆಗಾಗಿ ಯೋಗ ಧ್ಯೇಯ ನೀಡಿದ ವಿಶ್ವಸಂಸ್ಥೆಗೆ ಧನ್ಯವಾದ. ನಮ್ಮ ಋಷಿ, ಮಹರ್ಷಿಗಳು, ಆಚಾರ್ಯರು ಯೋಗ ಶಾಂತಿ ತಂದುಕೊಡುತ್ತದೆ ಎಂದು ಹೇಳಿದ್ದಾರೆ. ಶಾಂತಿ ವ್ಯಕ್ತಿಗೆ ಸೀಮಿತವಾಗಿಲ್ಲ, ಇಡೀ ಜಗತ್ತಿಗೆ ಅನ್ವಯ ಆಗುತ್ತೆ. ಜಾಗತಿಕ ತಾಪಮಾನ, ಅಂತಾರಾಷ್ಟ್ರೀಯ ಸಮಸ್ಯೆಗಳಿಂದ ಜಗತ್ತಿಗೆ ಆತಂಕ ಶುರುವಾಗಿದೆ. ಸಮಸ್ಯೆ ನಿವಾರಕನಾಗಿ ಯೋಗ ಕೆಲಸ ಮಾಡಲಿದೆ. ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ 75 ಪಾರಂಪರಿಕ ತಾಣಗಳಲ್ಲಿ ಯೋಗ ಆಚರಣೆ ಮಾಡಲಾಗುತ್ತಿದೆ. ಮೈಸೂರು ಅರಮನೆಗೆ ಐತಿಹಾಸಿಕ ಹಿನ್ನೆಲೆ ಇದೆ ಎಂದು ಹೊಗಳಿದರು. ಇದನ್ನೂ ಓದಿ: ಟಾಲಿವುಡ್​ ನಟಿಯ ಜತೆ ನಾಗ ಚೈತನ್ಯ ಕದ್ದುಮುಚ್ಚಿ ಓಡಾಟ? ಐಷಾರಾಮಿ ಹೋಟೆಲ್​ನಲ್ಲಿ ಆಗುತ್ತಿತ್ತು ಭೇಟಿ

ಸೂರ್ಯೋದಯ ಸಮಯದಲ್ಲಿ ಇಡೀ ವಿಶ್ವದಲ್ಲಿ ಯೋಗ ಮಾಡಲಾಗುತ್ತಿದೆ. ಇಂದು ಯೂನಿವರ್ಸಲ್ ಯೋಗ ಚೈನ್ ಸೃಷ್ಟಿಯಾಗಲಿದೆ. ಒಂದೆರಡು ನಿಮಿಷದ ಧಾನ್ಯ ನಮ್ಮ ಮನಸ್ಸಿಗೆ ಶಕ್ತಿ ತುಂಬುತ್ತೆ. ಆಧ್ಯಾತ್ಮಿಕ ಕೇಂದ್ರಗಳಲ್ಲಿ ಯೋಗವನ್ನು ಪೋಷಿಸಿಕೊಂಡು ಬಂದಿದ್ದಾರೆ. ಯೋಗ ಮಾತ್ರ ನಿರೋಗದಿಂದ ಬದುಕುವಂತೆ ಮಾಡುತ್ತೆ. ಯೋಗ ದಿನಾಚರಣೆಯ ಸುದಿನ ಮೈಸೂರಿಗೆ ಪ್ರಣಾಮ. ನಮ್ಮೆಲ್ಲರ ಜೀವನಕ್ಕೆ ವಿಶ್ವಾಸ ನೀಡುತ್ತಿರುವುದೇ ಯೋಗ. ಇಡೀ ವಿಶ್ವಕ್ಕೇ ಪಸರಿಸಿರುವ ಯೋಗದಿಂದಲೇ ವಿಶ್ವಾಸ ಬೆಳೆದಿದೆ. ಯೋಗ ದಿನದ ವಿಶ್ವಾಸವೇ ನಮ್ಮ ಬದುಕಿಗೂ ಪ್ರೇರಣೆ. ಯೋಗದಿಂದ ಎಲ್ಲರಿಗೂ ಶಾಂತಿ. ಸಮಾಜದಲ್ಲಿ ಶಾಂತಿ, ವಿಶ್ವ, ದೇಶದ ಶಾಂತಿಗಾಗಿ ಯೋಗ ಮಾಡಬೇಕು. ಪ್ರಪಂಚದ ಮೂಲೆಮೂಲೆಗಳಲ್ಲಿಯೂ ಯೋಗಾಭ್ಯಾಸ ಮಾಡಬೇಕು ಎಂದು ಮೈಸೂರು ಯೋಗ ವೇದಿಕೆಯಲ್ಲಿ ಮೋದಿ ಯೋಗದ ಅನುಕೂಲಗಳ ಬಗ್ಗೆ ಮಾತನಾಡಿದ್ದಾರೆ.

ನಮ್ಮೆಲ್ಲರ ಆತ್ಮಸಾಕ್ಷಿ ಎಚ್ಚರಿಸುತ್ತಿರುವುದೂ ಇದೇ ಯೋಗ. ಜನತೆಯನ್ನೂ, ದೇಶ ದೇಶದ ಸಂಪರ್ಕಕ್ಕೆ ಯೋಗ ಮೂಲ. ದೇಶದ ಅಮೃತ ಮಹೋತ್ಸವ ಸಂದರ್ಭದಲ್ಲಿ ಇದು ಸುದಿನ. ದೇಶದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೀಗ ಯೋಗೋತ್ಸವ ನಡೆದಿದೆ ಎಂದು ಮೈಸೂರಿನ ಸಾಂಸ್ಕೃತಿಕ, ಐತಿಹಾಸಿಕತೆಯನ್ನು ಮೋದಿ ವರ್ಣಿಸಿದ್ರು.

ವಿಶ್ವದಲ್ಲಿ ರೋಗ ಮುಕ್ತಿಗಾಗಿ ಯೋಗಾಸನವೇ ಆಧಾರ. ನಮ್ಮೆಲ್ಲರ ಆರೋಗ್ಯ ಸುಧಾರಣೆಗೆ ಯೋಗ ಪ್ರಯೋಗ ಅನಿವಾರ್ಯ. ನಮ್ಮೆಲ್ಲರಿಗೂ ಈಗ ಯೋಗ ಜೀವನ ಮಾತ್ರವೇ ಅಲ್ಲ. ಎಲ್ಲರಿಗೂ ಯೋಗವೇ ಜೀವನ ಎಂದರು. ಯೋಗ ದಿನ ಅಂದ್ರೆ ಬರೀ ಯೋಗ ಮಾಡುವುದೇ ಅಲ್ಲ. ನಮ್ಮೆಲ್ಲರ ಜೀವ, ಜೀವನದ ಉಸಿರು ಯೋಗವೇ ಆಗಿದೆ. ನಮ್ಮೆಲ್ಲರ ಅನಂತ ಭವಿಷ್ಯಕ್ಕೆ ಯೋಗಾಭ್ಯಾಸವೇ ಆಧಾರ. ಆರೋಗ್ಯ ಹಾಗೂ ಶಾಂತಿಪೂರ್ಣ ವಿಶ್ವಕ್ಕೆ ಯೋಗ ಬೇಕು. ಸರ್ವರಿಗೂ ಯೋಗ ದಿನಾಚರಣೆಗೆ ಶುಭಾಶಯ. ಯೋಗದಿಂದ ಏಕತೆ ಮತ್ತು ಯೋಗದಿಂದಲೇ ಏಕಾಗ್ರತೆ ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:59 am, Tue, 21 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ