- Kannada News Photo gallery International Yoga Day 2022 Yoga Changed life of these Bollywood Heroines
International Yoga Day 2022: ಯೋಗದಿಂದ ಬದಲಾಯಿತು ಈ ಬಾಲಿವುಡ್ ನಟಿಯರ ಬದುಕು; ಇಲ್ಲಿದೆ ವಿವರ
ಇಂದು (ಜೂನ್ 21) ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ಬಾಲಿವುಡ್ನ ಸಾಕಷ್ಟು ನಟಿಯರು ಯೋಗಕ್ಕೆ ಆದ್ಯತೆ ನೀಡುತ್ತಾರೆ. ಹಲವು ನಟಿಯರ ಬದುಕನ್ನು ಯೋಗ ಬದಲಾಯಿಸಿದೆ. ಆ ಬಗ್ಗೆ ಇಲ್ಲಿದೆ ವಿವರ.
Updated on:Jun 21, 2022 | 6:29 AM

ಕರೀನಾ ಕಪೂರ್ ಅವರು ಎರಡು ಮಕ್ಕಳ ತಾಯಿ. ಆದಾಗ್ಯೂ ಅವರು ಸಖತ್ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಅವರು ಯೋಗ ಮಾಡುವುದಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಒಂದು ದಿನವೂ ಬಿಡದೇ ಯೋಗ ಮಾಡುತ್ತಾರೆ. ಇದು ಅವರ ಫಿಟ್ನೆಸ್ ಗುಟ್ಟು.

ಮಲೈಕಾ ಅರೋರಾ ವಯಸ್ಸು 48. ಆದಾಗ್ಯೂ ಯುವತಿಯರನ್ನು ನಾಚಿಸುವಂತಿದೆ ಅವರ ಫಿಟ್ನೆಸ್. ಈ ವಯಸ್ಸಿನಲ್ಲೂ ಅವರು ಇಷ್ಟು ಫಿಟ್ ಆಗಿರೋಕೆ ಯೋಗ ಕೂಡ ಕಾರಣ. ಅವರು ನಿತ್ಯ ಯೋಗಾಸನ ಮಾಡುತ್ತಾರೆ. ಈ ವಿಡಿಯೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಸಾರಾ ಅಲಿ ಖಾನ್ ಅವರು ಚಿತ್ರರಂಗಕ್ಕೆ ಬರುವುದಕ್ಕೂ ಮೊದಲೂ ತುಂಬಾನೇ ದಪ್ಪ ಇದ್ದರು. ಇದಕ್ಕೆ ಅವರು ಸಾಕಷ್ಟು ಟೀಕೆ ಎದುರಿಸಿದ್ದರು. ಜಿಮ್ ಜತೆ ನಿತ್ಯ ಯೋಗಾಸನ ಮಾಡುವುದನ್ನು ಅಭ್ಯಾಸ ಮಾಡಿಕೊಂಡ ನಂತರ ಅವರಿಗೆ ಫಿಟ್ನೆಸ್ ಒಲಿಯಿತು. ಈಗ ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ.

ಕನ್ನಡದಿಂದ ಬಣ್ಣದ ಬದುಕು ಆರಂಭಿಸಿದ ನಟಿ ರಾಕುಲ್ ಪ್ರೀತ್ ಸಿಂಗ್ ಯೋಗಾಸನ ಮಾಡೋಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಅವರು ಸಖತ್ ಫಿಟ್ ಆಗಿದ್ದಾರೆ.

ಶಿಲ್ಪಾ ಶೆಟ್ಟಿ ಅವರು ಯೋಗಾಸನಕ್ಕೆ ಹೆಚ್ಚು ಆದ್ಯತೆ ನೀಡುವ ನಟಿ. ಒಂದು ದಿನವೂ ಬಿಡದೇ ಯೋಗ ಮಾಡುತ್ತಾರೆ. ಅಭಿಮಾನಿಗಳಿಗೂ ಸೋಶಿಯಲ್ ಮೀಡಿಯಾ ಮೂಲಕ ಯೋಗ ಹೇಳಿಕೊಡುತ್ತಾರೆ. ಅವರಿಗೆ ಯೋಗಾಸನದ ಬಗ್ಗೆ ಹೆಚ್ಚು ಆಸಕ್ತಿ ಇದೆ. ಅವರು ಸಾಕಷ್ಟು ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ದಿಯಾ ಮಿರ್ಜಾ ಅವರು ಕೂಡ ಯೋಗಾಸನ ಪ್ರ್ಯಾಕ್ಟೀಸ್ ಮಾಡುತ್ತಾರೆ. ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಯೋಗ ಮಾಡುತ್ತಿರುವ ಸಾಕಷ್ಟು ಫೋಟೋಗಳಿವೆ.

ಮೀರಾ ಕಪೂರ್ ಅವರು ಫಿಟ್ನೆಸ್ ಮೂಲಕನೇ ಗಮನ ಸೆಳೆದವರು. ಅವರ ಫಿಟ್ನೆಸ್ ಗುಟ್ಟು ಕೂಡ ಯೋಗ. ಅವರು ಯೋಗ ಮಾಡುತ್ತಿರುವ ಹಲವು ಫೋಟೋಗಳನ್ನು ಈ ಮೊದಲು ಹಂಚಿಕೊಂಡಿದ್ದಾರೆ.
Published On - 6:25 am, Tue, 21 June 22




