International Yoga Day 2022: ಜಗತ್ತಿಗೆ ಯೋಗ ಸೂತ್ರವನ್ನು ನೀಡಿದ ಮಹಾತ್ಮರು ಇವರೇ, ಮಹರ್ಷಿ ಪತಂಜಲಿ

ಶಾಸ್ತ್ರೀಯ ಯೋಗ ತತ್ವಶಾಸ್ತ್ರದ ಪ್ರಮುಖ ಗ್ರಂಥಗಳಲ್ಲಿ ಯೋಗ ಸೂತ್ರವೂ ಕೂಡ ಒಂದಾಗಿದೆ. ಪತಾಂಜಲಿಯ ಯೋಗ ಸೂತ್ರ ಎನ್ನುವ ಪುಸ್ತಕವು ಕ್ರಿ.ಶ.400ರಲ್ಲಿ ಬರೆಯಲ್ಪಟ್ಟಿದ್ದು, ಇದರಲ್ಲಿ ಯೋಗದ ಬಗ್ಗೆ ವಿವರಣೆ ಇದೆ.

International Yoga Day 2022: ಜಗತ್ತಿಗೆ ಯೋಗ ಸೂತ್ರವನ್ನು ನೀಡಿದ ಮಹಾತ್ಮರು ಇವರೇ, ಮಹರ್ಷಿ ಪತಂಜಲಿ
ಮಹರ್ಷಿ ಪತಂಜಲಿ
Follow us
TV9 Web
| Updated By: ಆಯೇಷಾ ಬಾನು

Updated on:Jun 21, 2022 | 7:03 AM

ಶತ ಶತಮಾನಗಳ ಹಿಂದೆಯೇ ನಮ್ಮ ಪೂರ್ವಜರು ಯೋಗವನ್ನು ಅಭ್ಯಾಸ ಮಾಡಿ ಉತ್ತಮ ಜೀವನ ಮತ್ತು ಆರೋಗ್ಯವನ್ನು ರೂಪಿಸಿಕೊಂಡಿದ್ದಾರೆ. ಸದ್ಯದ ಒತ್ತಡದ ಜೀವನಕ್ಕೆ ಯೋಗ ಒಂದು ಅದ್ಭುತ ಮಾರ್ಗವಾಗಿದೆ. 2015ರಿಂದ ಪ್ರತಿ ವರ್ಷ ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನವನ್ನು(International Yoga Day) ಆಚರಿಸಲಾಗುತ್ತಿದೆ. ಯೋಗ ದಿನದ ವಿಶೇಷ ದಿನದಂದು ಇಂತಹ ಅದ್ಭುತ ಯೋಗ ಸೂತ್ರವನ್ನು ಜಗತ್ತಿಗೆ ನೀಡಿದ ಪತಂಜಲಿ ಮಹರ್ಷಿಗಳ(Maharishi Patanjali) ಬಗ್ಗೆ, ಅವರ ಜೀವನದ ಬಗ್ಗೆ ಇಲ್ಲಿ ತಿಳಿಯಿರಿ.

ಮಹರ್ಷಿ ಪತಂಜಲಿ ಪ್ರಾಚೀನ ಕಾಲದ ಶ್ರೇಷ್ಠ ಆಧ್ಯಾತ್ಮಿಕ ನಾಯಕ. ಪ್ರತಿಯೊಬ್ಬರ ಆತ್ಮವು ಜೀವನದ ಹಾದಿಯಲ್ಲಿ ಅನಂತ ಚೇತನದತ್ತ ಸಾಗಬೇಕೆಂದು ಜ್ಞಾನಿ ಪತಂಜಲಿ ವ್ಯಾಖ್ಯಾನಿಸಿದ್ದಾರೆ. ಒಂದು ದಂತಕಥೆಯ ಪ್ರಕಾರ, ಸ್ವರ್ಗದಿಂದ ಒಂದು ಹಾವಿನ ಮರಿ ಅಂಜಲಿ ಎನ್ನುವ ಮಹಿಳೆಯ ಕೈಗೆ ಬೀಳುತ್ತದೆ ಆದ್ದರಿಂದ ಆತನನ್ನು ಪತಂಜಲಿ ಎಂದು ಕರೆಯಲಾಗುತ್ತದೆ ಎನ್ನಲಾಗಿದೆ. ಆದ್ರೆ ಮಹರ್ಷಿ ಪತಂಜಲಿಗಳ ಹುಟ್ಟಿನ ಬಗ್ಗೆ ಯಾವುದೇ ರೀತಿಯ ಪುರಾವೆಗಳು ಸಿಕ್ಕಿಲ್ಲ.

ಮತ್ಸ್ಯ, ವಾಯು ಮತ್ತು ಸ್ಕಂದ ಪುರಾಣಗಳಲ್ಲಿ ಮಹರ್ಷಿ ಪತಂಜಲಿಯ ಬಗ್ಗೆ ಉಲ್ಲೇಖ ಮಾಡಿರುವುದರಿಂದ ಅವರು ವ್ಯಾಸ ಮತ್ತು ಪಾಣಿನಿಯ ಅವಧಿಯಲ್ಲಿ ಅಸ್ಥಿತ್ವದಲ್ಲಿದ್ದರು ಎಂದು ಹೇಳಲಾಗುತ್ತದೆ. ಋಷಿಗಳು ತಮ್ಮ ಯೋಗ ಶಕ್ತಿಯಿಂದ ಅಪಾರ ಜ್ಞಾನಿಗಳಾಗಿದ್ದರು ಹಾಗೂ ಸಾವಿರಾರು ವರ್ಷಗಳ ಕಾಲ ಬದುಕಿತ್ತಿದ್ದರು. ಅವರು ಸ್ವ ಇಚ್ಛೆಯಿಂದ ಸಾಯುವ ಮತ್ತು ಬದುಕುವ ಸಾಮರ್ಥ್ಯವನ್ನು ಹೊಂದಿದ್ದರು ಎಂದು ಕೆಲವರು ಸಂಶೋಧನೆಯ ಆಧಾರದಲ್ಲಿ ತಿಳಿಸಿದ್ದಾರೆ. ಅಲ್ಲದೆ ಅವರು ಯುಗಗಳವರೆಗೆ ಜೀವಿಸಿದ್ದರು ಎನ್ನುವುದನ್ನು ನಂಬುವ ರೀತಿಯ ಕೆಲ ಪುರಾವೆಗಳು ಸಿಕ್ಕಿವೆ. ಈ ಪೈಕಿ ಅವರು ಬದುಕಿದ್ದರು ಎಂದು ಅವರ ಯೋಗ ಸೂತ್ರಗಳು ತಿಳಿಸುತ್ತವೆ.

ಪತಂಜಲಿ ಜೀವನ ಪತಂಜಲಿ ಜೀವನ ಚರಿತ್ರೆಯ ಬಗ್ಗೆ ಹಲವರಿಗೆ ತಿಳಿದಿಲ್ಲ. ಮಹರ್ಷಿ ಪತಂಜಲಿಯ ಜನನದ ಕುರಿತು ಯಾವುದೇ ನಿಖರವಾದ ಪುರಾವೆಗಳಾಗಲಿ, ಮಾಹಿತಿಗಳಾಗಲಿ ಲಭ್ಯವಿಲ್ಲ. ಪತಂಜಲಿಯ ಜನನ ಮತ್ತು ಜೀವನದ ಬಗ್ಗೆ ಅನೇಕರು ಅನೇಕ ರೀತಿ ಅಭಿಪ್ರಾಯಪಟ್ಟಿದ್ದಾರೆ. ಹೆಚ್ಚಿನ ವಿದ್ವಾಂಸರು ಪತಂಜಲಿ ಮಹರ್ಷಿಗಳು ಸುಮಾರು ಕ್ರಿ.ಪೂ 2ನೇ ಮತ್ತು 3ನೇ ಶತಮಾನದಲ್ಲಿ ಜನಿಸಿದ್ದರು ಅಂದ್ರೆ, ಇನ್ನು ಕೆಲವರು ಕ್ರಿ.ಪೂ 4 ರಿಂದ 7 ನೇ ಶತಮಾನದವರೆಗೆ ಅಸ್ಥಿತ್ವದಲ್ಲಿದ್ದರು ಎಂದು ಹೇಳಿದ್ದಾರೆ.

ಪತಂಜಲಿ ಯೋಗ ಸೂತ್ರಗಳು ಪತಂಜಲಿಯವರನ್ನು ಯೋಗ ಸೂತ್ರದ ಪಿತಾಮಹ, ಸಂಸ್ಥಾಪಕ ಎಂದು ಕರೆಯಲಾಗುತ್ತದೆ. ಪತಂಜಲಿ ಮಹರ್ಷಿಗಳು ಹೆಚ್ಚು ಹಳೆಯ ಸಂಪ್ರದಾಯವಾದ ಯೋಗವನ್ನು ಪ್ರಪಂಚಕ್ಕೆ ಪರಿಚಯಿಸಿದವರು. ಶಾಸ್ತ್ರೀಯ ಯೋಗ ತತ್ವಶಾಸ್ತ್ರದ ಪ್ರಮುಖ ಗ್ರಂಥಗಳಲ್ಲಿ ಯೋಗ ಸೂತ್ರವೂ ಕೂಡ ಒಂದಾಗಿದೆ. ಪತಾಂಜಲಿಯ ಯೋಗ ಸೂತ್ರ ಎನ್ನುವ ಪುಸ್ತಕವು ಕ್ರಿ.ಶ.400ರಲ್ಲಿ ಬರೆಯಲ್ಪಟ್ಟಿದ್ದು, ಇದರಲ್ಲಿ ಯೋಗದ ಬಗ್ಗೆ ವಿವರಣೆ ಇದೆ.

ಪತಂಜಲಿ ಯೋಗ ಸೂತ್ರಗಳ 4 ಅಧ್ಯಾಯಗಳಲ್ಲಿ 196 ಸಂಸ್ಕೃತ ಸೂತ್ರಗಳನ್ನು ಅಳವಡಿಸಲಾಗಿದೆ. ಯೋಗ ಸೂತ್ರಗಳನ್ನು ಕ್ರಿ.ಪೂ 500 ರಿಂದ ಕ್ರಿ.ಪೂ 200 ರ ಅವಧಿಯಲ್ಲಿ ಅಳವಡಿಸಲಾಯಿತೆಂದು ಹೇಳಲಾಗಿದೆ. ಪತಂಜಲಿ ಯೋಗ ಸೂತ್ರಗಳಲ್ಲಿ ಸಮಾಧಿ ಪಾದ, ಸಾಧನಾ ಪಾದ, ವಿಭೂತಿ ಪಾದ ಮತ್ತು ಕೈವಲ್ಯ ಪಾದ ಎನ್ನುವ 4 ಯೋಗ ಸೂತ್ರದ ಅಧ್ಯಾಯಗಳನ್ನು ಉಲ್ಲೇಖಿಸಲಾಗಿದೆ.

1) ಸಮಾಧಿ ಪಾದ: ಪತಂಜಲಿ ಯೋಗ ಸೂತ್ರಗಳಲ್ಲಿ ಮೊದಲ ಅಧ್ಯಾಯವು ಸಮಾಧಿ ಪಾದವಾಗಿದ್ದು, ಇದರಲ್ಲಿ ಯೋಗ ಎಂದರೇನು..? ಅದರ ಉದ್ಧೇಶವನ್ನು ಉಲ್ಲೇಖಿಸಲಾಗಿದೆ. ಯೋಗವನ್ನು ಮಾಡುವ ವಿವಿಧ ವಿಧಾನಗಳನ್ನೂ ಕೂಡ ಇಲ್ಲಿ ಹೇಳಲಾಗಿದೆ.

2) ಸಾಧನಾ ಪಾದ: ಪತಂಜಲಿ ಯೋಗ ಸೂತ್ರದ ಎರಡನೇ ಪಾದವು ಸಾಧನಾ ಪಾದವಾಗಿದ್ದು, ಇದರಲ್ಲಿ ಯೋಗದ ಗುರಿಗಳನ್ನು ಹೇಗೆ ಸಾಧಿಸಬೇಕೆನ್ನುವುದರ ಪ್ರಾಯೋಗಿಕ ವಿಧಾನಗಳನ್ನು ಹೇಳಲಾಗಿದೆ. ಹಾಗೂ ಇದರಲ್ಲಿ ಅಸ್ಟಾಂಗ ಯೋಗವನ್ನು ಕೂಡ ತಿಳಿಸಲಾಗಿದೆ.

3) ವಿಭೂತಿ ಪಾದ: ಮೂರನೇ ಪಾದದಲ್ಲಿ ಯೋಗದಿಂದ ಪಡೆದ ಫಲಿತಾಂಶಗಳನ್ನು, ಶಕ್ತಿ ಮತ್ತು ಅಭಿವ್ಯಕ್ತಿಗಳ ಬಗ್ಗೆ ಉಲ್ಲೇಖಿಸಲಾಗಿದೆ.

4) ಕೈವಲ್ಯ ಪಾದ: ಇದು ಪತಂಜಲಿ ಯೋಗ ಸೂತ್ರದ ಕೊನೆಯ ಅಧ್ಯಾಯವಾಗಿದ್ದು, ಇದು ಭಕ್ತಿಯ ಮಾರ್ಗ, ಕರ್ಮದ ಹಾದಿ ಮತ್ತು ಜ್ಞಾನದ ಪರಿಯನ್ನು ಒಳಗೊಂಡಿದೆ.

ಪತಂಜಲಿ ಯೋಗ ಸೂತ್ರವನ್ನು ಕೆಲವೊಮ್ಮೆ ರಾಜ ಯೋಗ ಅಥವಾ ಶ್ರೀಮಂತ ಯೋಗವೆಂದು ಕೂಡ ಕರೆಯಲಾಗುತ್ತದೆ. ಪತಂಜಲಿ ಯೋಗ ಸೂತ್ರದಲ್ಲಿ 8 ಯೋಗಗಳು ಅಂದರೆ ಅಷ್ಟಾಂಗ ಯೋಗಗಳು ಪ್ರಮುಖವಾದುದ್ದಾಗಿದೆ. ಪತಂಜಲಿ ಸೂತ್ರದ ಎರಡನೇ ಅಧ್ಯಾಯವಾದ ಸಾಧನಾ ಪಾದದಲ್ಲಿ ಇದರ 8 ಸೂತ್ರಗಳನ್ನು ಉಲ್ಲೇಖಿಸಲಾಗಿದೆ. 1) ಯಮ 2) ನಿಯಮ 3) ಆಸನ 4) ಪ್ರಾಣಯಾಮ 5) ಪ್ರತ್ಯಾಹಾರ 6) ಧಾರಣ 7) ಧ್ಯಾನ 8) ಸಮಾಧಿ

ಪತಂಜಲಿ ಸ್ತೋತ್ರ ಯೋಗವನ್ನು ಮಾಡುವಾಗ ಈ ಸ್ತೋತ್ರವನ್ನು ಪಠಿಸುತ್ತಾರೆ. ಯೋಗೇನ ಚಿತ್ತಸ್ಯ ಪದೇನ ವಾಚ ಮಲಂ ಶರೀರಸ್ಯಚ ವೈದ್ಯಕೇನ ಯೋಪಾಕರೋತ್ತಂ ಪ್ರವರಂ ಮುನೀನಾಂ ಪತಂಜಲೀಂ ಪ್ರಾಂಜಲೀಂ ರಾನತೊಸ್ಮಿ ಆಬಾಹು ಪುರುಷಾಕಾರಂ ಶಂಖ ಚಕ್ರಸಿಧಾರಣಂ ಸಹಸ್ರ ಶಿರಸಂ ಶ್ವೇತಂ ಪ್ರಣಮಾಮಿ ಪತಂಜಲಿಂ ಓಂ ಶಾಂತಿಃ ಶಾಂತಿಃ ಶಾಂತಿಃ

ಮಹರ್ಷಿ ಪತಂಜಲಿ ಅವರ ಸಾವಿನ ಬಗ್ಗೆ ಯಾವುದೇ ರೀತಿಯ ನಿಖರ ಮಾಹಿತಿಗಳು ಸಿಕ್ಕಿಲ್ಲ ಆದ್ರೆ ಅವರು ಕೊಟ್ಟ ಹೋದ ಯೋಗ ಮಾತ್ರ ಜಗತ್ತಿನಲ್ಲಿ ಮನ್ನಣೆ ಪಡೆದಿದೆ. ಸದೃಢ ಹಾಗೂ ಶತಾಯುಷಿ ಜೀವನಕ್ಕೆ ಮಾರ್ಗದರ್ಶನವಾಗಿದೆ.

Published On - 6:30 am, Tue, 21 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ