Viral Video: ಮೀನುಗಾರರ ಬಲೆಗೆ ಸಿಕ್ಕಿಬಿದ್ದ 16 ಅಡಿ ಉದ್ದದ ಮೀನು! ಇದು ಭೂಕಂಪನದ ಸಂಕೇತವಂತೆ
ಚಿಲಿಯಲ್ಲಿ ನಂಬಲಾಗದ 16 ಅಡಿ ದೈತ್ಯಾಕಾರದ ಮೀನು ಬಲೆಗೆ ಬಿದ್ದಿದ್ದು, ಮೀನುಗಾರರು ನೀರಿನಿಂದ ಕ್ರೇನ್ ಮೂಲಕ ಮೇಲಕ್ಕೆತುವ ವಿಡಿಯೋ ವೈರಲ್ ಆಗುತ್ತಿದೆ.
ಕೆಲವೊಮ್ಮೆ ಮೀನುಗಾರರ ಬಲೆಗೆ ಅಪರೂಪದ ಮೀನುಗಳು ಬೀಳುತ್ತವೆ. ಇದೀಗ ಚಿಲಿಯಲ್ಲಿ ನಂಬಲಾಗದ 16 ಅಡಿ ದೈತ್ಯಾಕಾರದ ಮೀನು ಬಲೆಗೆ ಬಿದ್ದಿದ್ದು, ಮೀನುಗಾರರು ನೀರಿನಿಂದ ಕ್ರೇನ್ ಮೂಲಕ ಮೇಲಕ್ಕೆತುವ ವಿಡಿಯೋ ವೈರಲ್ (Video Viral) ಆಗುತ್ತಿದೆ. ಡೈಲಿ ಸ್ಟಾರ್ ಪ್ರಕಾರ, ಓರ್ಫಿಶ್ (Oarfish) ಎಂದು ಗುರುತಿಸಲಾದ ಮೀನು ಐದು ಮೀಟರ್‌ಗಿಂತಲೂ ಹೆಚ್ಚು (16 ಅಡಿ) ಉದ್ದವನ್ನು ಹೊಂದಿದೆ. ಈ ದೈತ್ಯಾಕಾರದ ಮೀನು ಮೇಲಕ್ಕೆ ಬಂದರೆ ಅದು ಭೂಕಂಪನದ ಸಂಕೇತವಾಗಿದೆ ಎಂದು ನಂಬಲಾಗಿದೆ.
ಮೀನಿನ ವಿಡಿಯೋವನ್ನು ಹಲವಾರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳಲಾಗಿದ್ದು, ಮೊದಲು ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಅಲ್ಲಿ ಅದು ಸುಮಾರು 10 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಎಂದು ವರದಿಯಾಗಿದೆ. ಮೀನನ್ನು ಸಾಂಪ್ರದಾಯಿಕವಾಗಿ ಸುನಾಮಿ ಮತ್ತು ಭೂಕಂಪಗಳಿಗೆ ಕೆಟ್ಟ ಶಕುನವಾಗಿ ನೋಡುವುದರಿಂದ ಈ ವಿಡಿಯೋ ಜನರಲ್ಲಿ ಕಳವಳ ಮೂಡಿಸಿದೆ.
ಇದನ್ನೂ ಓದಿ: Viral Photo: ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಈ ಜೋಡಿಗಳದ್ದು ಬೇರೆಯದ್ದೇ ‘ತುರ್ತು ಸ್ಥಿತಿ’
ಬಳಕೆದಾರರೊಬ್ಬರು ಪ್ರತಿಕ್ರಿಯಿಸಿ, “ಅದು ಭಯಾನಕ ಅದ್ಭುತ ಮೀನು” ಎಂದು ಹೇಳಿದ್ದಾರೆ. ಇನ್ನೊಬ್ಬರು ಪ್ರತಿಕ್ರಿಯಿಸಿ, “ಓರ್ಫಿಶ್ ಆಳದಲ್ಲಿ ವಾಸಿಸುತ್ತದೆ. ಅವು ಮೇಲ್ಮೈಗೆ ಬರುವುದು ಟೆಕ್ಟೋನಿಕ್ ಪ್ಲೇಟ್‌ಗಳು ಚಲನೆಯಲ್ಲಿರುವುದರಿಂದ ಎಂದು ಹೇಳಲಾಗುತ್ತದೆ” ಎಂದಿದ್ದಾರೆ. ದಡಕ್ಕೆ ಮೀನುಗಳ ಸಾಮೀಪ್ಯವು ಸನ್ನಿಹಿತವಾದ ನೀರೊಳಗಿನ ಭೂಕಂಪಗಳನ್ನು ಸೂಚಿಸುತ್ತದೆ ಎಂದು ಇಂಟರ್ನೆಟ್ ಬಳಕೆದಾರರು ನಂಬುತ್ತಾರೆ.
ಔಟ್ಲೆಟ್ ಪ್ರಕಾರ, ಓರ್ಫಿಶ್ ಭೂಕಂಪಗಳು ಮತ್ತು ಸುನಾಮಿಗಳ ಮುನ್ನುಡಿಯಾಗಿದೆ ಎಂಬ ದಂತಕಥೆಗಳಲ್ಲಿ ಈ ನಂಬಿಕೆ ಬೇರೂರಿದೆ. ಈ ಸಿದ್ಧಾಂತವು ವಿಜ್ಞಾನದಿಂದ ಎಂದಿಗೂ ದೃಢೀಕರಿಸಲ್ಪಟ್ಟಿಲ್ಲ. ಓರ್ಫಿಶ್ 11 ಮೀಟರ್ ಉದ್ದವನ್ನು ತಲುಪಬಹುದು. ಅವರು ಸಾಮಾನ್ಯವಾಗಿ ಆಳವಾದ ನೀರಿನಲ್ಲಿ ವಾಸಿಸುತ್ತದೆ ಮತ್ತು ಅದು ಅನಾರೋಗ್ಯ, ಸಾಯುತ್ತಿರುವ ಅಥವಾ ಸಂತಾನೋತ್ಪತ್ತಿ ಮಾಡಿದಾಗ ಮಾತ್ರ ಮೇಲ್ಮೈಗೆ ಬರುತ್ತವೆ.
ಇದನ್ನು ಓದಿ: Viral Video: ಮೂರು ಸಿಂಹಗಳ ಮೇಲೆ ಏಕಾಂಗಿಯಾಗಿ ದಾಳಿ ನಡೆಸಿದ ನೀರಾನೆಯ ವಿಡಿಯೋ ವೈರಲ್
ಅದಾಗ್ಯೂ, ಈ ಮೀನನ್ನು ಗುರುತಿಸುವುದು ಅಪರೂಪ. ಏಪ್ರಿಲ್‌ನಲ್ಲಿ ನ್ಯೂಜಿಲೆಂಡ್‌ನ ಕಡಲತೀರದಲ್ಲಿ ಓರ್‌ಫಿಶ್ ಕಂಡುಬಂದಿತ್ತು. ಅಲ್ಲಿ ಸ್ಥಳೀಯರು ಅದನ್ನು ಗುರುತಿಸಿದರು. ಓರ್ಫಿಶ್ ಅನ್ನು ರೆಗಾಲೆಕೊ ಅಥವಾ ಸೇಬಲ್ ಫಿಶ್ ಎಂದೂ ಕರೆಯುತ್ತಾರೆ. ಇದು ರೆಗಲೆಸಿಡೆ ಸಂತತಿಗೆ ಸೇರಿದ್ದಾಗಿದ್ದು, ಭೂಮಿಯ ಮೇಲಿನ ಎಲ್ಲಾ ಸಮಶೀತೋಷ್ಣ ಮತ್ತು ಉಷ್ಣವಲಯದ ನೀರಿನಲ್ಲಿ ವಾಸಿಸುವ ಲ್ಯಾಂಪ್ರಿಫಾರ್ಮ್ ಮೀನುಗಳಾಗಿವೆ. ಇದು ಅತ್ಯಂತ ಉದ್ದವಾದ ಎಲುಬಿನ ಮೀನುಗಳಲ್ಲಿ ಒಂದಾಗಿದೆ.
ಜಪಾನಿಯರಿಗೆ ಅವರ ಪುರಾಣಗಳಲ್ಲಿ ಜಪಾನಿನ ನೀರಿನ ಅಡಿಯಲ್ಲಿ ವಾಸಿಸುವ ನಮಾಜು ಎಂಬ ಸಮುದ್ರ ಜೀವಿ ಅಸ್ತಿತ್ವದಲ್ಲಿದೆ ಮತ್ತು ಅದು ತನ್ನ ವಾಸಸ್ಥಳದಿಂದ ಹೊರಬಂದಾಗ ಮತ್ತು ಕಾಣಿಸಿಕೊಂಡಾಗ ಅದು ಭೂಕಂಪಗಳನ್ನು ಉಂಟುಮಾಡುತ್ತದೆ. ಈ ನಂಬಿಕೆಗಳನ್ನು ದೃಢೀಕರಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದಿದ್ದರೂ, ಈ ಜೀವಿಯು ಟೆಕ್ಟೋನಿಕ್ ಪ್ಲೇಟ್ಗಳ ಚಲನೆಯನ್ನು ಪತ್ತೆಹಚ್ಚಲು ಸಮರ್ಥವಾಗಿದೆ ಮತ್ತು ಅದಕ್ಕಾಗಿಯೇ ಜಪಾನಿಯರು ದಿಗ್ಭ್ರಮೆಗೊಳ್ಳುತ್ತಾರೆ.
ಇದನ್ನೂ ಓದಿ: Viral Video: ರಾಡ್ನಿಂದ ಕುಟ್ಟಿದಾಗ ಶೂ ಒಳಗಡೆಯಿಂದ ಬುಸುಗುಡುತ್ತಾ ಹೊರಬಂದ ನಾಗರಹಾವು
Published On - 10:12 am, Fri, 15 July 22