AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮೂರು ಸಿಂಹಗಳ ಮೇಲೆ ಏಕಾಂಗಿಯಾಗಿ ದಾಳಿ ನಡೆಸಿದ ನೀರಾನೆಯ ವಿಡಿಯೋ ವೈರಲ್

ನದಿ ದಾಟುತ್ತಿದ್ದ ಮೂರು ಸಿಂಹಗಳ ಮೇಲೆ ನೀರಾನೆಯೊಂದು ದಾಳಿ ನಡೆಸಿ ಅಟ್ಟಾಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನೀರಾನೆ ದಾಳಿಯ ವಿಡಿಯೋ ಇಲ್ಲಿದೆ ನೋಡಿ.

Viral Video: ಮೂರು ಸಿಂಹಗಳ ಮೇಲೆ ಏಕಾಂಗಿಯಾಗಿ ದಾಳಿ ನಡೆಸಿದ ನೀರಾನೆಯ ವಿಡಿಯೋ ವೈರಲ್
ಸಿಂಹಗಳ ಮೇಲೆ ನೀರಾನೆ ದಾಳಿ
TV9 Web
| Edited By: Rakesh Nayak Manchi|

Updated on: Jul 14, 2022 | 5:09 PM

Share

ಕಾಡಿನ ರಾಜ ಎಂದು ಕರೆಯಲ್ಪಡುವ ಸಿಂಹದ ಮೇಲೆ ದಾಳಿ ನಡೆಯುವುದು ಅಪರೂಪವಾಗಿದೆ. ಇದೀಗ ಮೂರು ಸಿಂಹಗಳ ಮೇಲೆ ನೀರಾನೆಯೊಂದು ಏಕಾಂಗಿಯಾಗಿ ದಾಳಿ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಿಂಹಗಳು ನದಿ ದಾಟುವ ವೇಳೆ ನೀರಾನೆ ದಾಳಿ ನಡೆಸಿದ್ದು,  ಗ್ರೇಟ್ ಪ್ಲೇನ್ಸ್ ಕನ್ಸರ್ವೇಶನ್ ಎಂಬ ಯೂಟ್ಯೂಬ್ ಚಾನೆಲ್ ಈ ವಿಡಿಯೋವನ್ನು ಹಂಚಿಕೊಂಡು ಮರೆಯಲಾಗದ ಕ್ಷಣ ಎಂದು ಹೇಳಿಕೊಂಡಿದೆ.

ಇದನ್ನೂ ಓದಿ: Viral Video: ರಾಡ್​ನಿಂದ ಕುಟ್ಟಿದಾಗ ಶೂ ಒಳಗಡೆಯಿಂದ ಬುಸುಗುಡುತ್ತಾ ಹೊರಬಂದ ನಾಗರಹಾವು

ಮೂರು ಸಿಂಹಗಳು ನದಿಯನ್ನು ದಾಟುತ್ತಿರುವುದನ್ನು ವಿಡಿಯೋ ತೋರಿಸುತ್ತದೆ ಮತ್ತು ನದಿ ದಾಟಲು ಸುರಕ್ಷಿತವಾಗಿದೆಯೇ ಎಂದು ಯೋಚಿಸುತ್ತಿರುವಂತೆ ನಾಲ್ಕನೇ ಸಿಂಹವು ದಡದಲ್ಲಿ ನಿಂತಿರುವುದನ್ನುಕಾಣಬಹುದು. ಮೂರು ಸಿಂಹಗಳು ಈಜಾಡುತ್ತಾ ನದಿ ದಾಟುತ್ತಿದ್ದಾಗ ನೋಡಿದ ದೈತ್ಯ ನೀರಾನೆ, ವೇಗವಾಗಿ ಈಜಿಕೊಂಡು ಬಂದು ಅವುಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ಎರಡು ಸಿಂಹಗಳು ದಿಕ್ಕಾಪಾಲಾಗಿ ಹೋದರೆ ಮತ್ತೊಂದು ಸಿಂಹ ನೀರಾನೆಯ ಬಾಯಿಯಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದೆ. ಕೊನೆಯಲ್ಲಿ ಅದೇ ನೀರಿನಲ್ಲಿ ಮತ್ತೊಂದು ನೀರಾನೆ ಕಾಣಿಸಿಕೊಳ್ಳುತ್ತದೆ.

“ಅತ್ಯುತ್ತಮ ಸಫಾರಿಗಳು ಮರೆಯಲಾಗದ ಕ್ಷಣಗಳಿಂದ ಮಾಡಲ್ಪಟ್ಟಿದೆ… ಮತ್ತು ಇದು ನಿಸ್ಸಂದೇಹವಾಗಿ ಅವುಗಳಲ್ಲಿ ಒಂದಾಗಿದೆ. ಬೋಟ್ಸ್ವಾನಾದ ಸೆಲಿಂಡಾ ಎಕ್ಸ್‌ಪ್ಲೋರರ್ಸ್ ಕ್ಯಾಂಪ್‌ನಲ್ಲಿ ಇತ್ತೀಚೆಗೆ ನಾಲ್ಕು ಸಿಂಹಗಳು ಸೆಲಿಂಡಾ ಸ್ಪಿಲ್‌ವೇ ದಾಟಲು ಪ್ರಯತ್ನಿಸುತ್ತಿರುವಾಗ ನೀರಾನೆ ತಡೆಯುತ್ತದೆ. ಅದೃಷ್ಟವಶಾತ್, ಸಿಂಹಗಳು ಪಾರಾಗಿವೆ. ಮತ್ತೊಂದು ಗಮನಾರ್ಹವಾದ ಘಟನೆಗೆ ಸಾಕ್ಷಿಯಾಗಲು ನಾವು ಸೌಭಾಗ್ಯವನ್ನು ಅನುಭವಿಸುತ್ತೇವೆ. ಈ ಅದ್ಭುತ ದೃಶ್ಯಾವಳಿಗಾಗಿ ಜಾನ್ ಲೆಮನ್ ಅವರಿಗೆ ಧನ್ಯವಾದಗಳು” ಎಂದು ಗ್ರೇಟ್ ಪ್ಲೇನ್ಸ್ ಕನ್ಸರ್ವೇಶನ್ ಶೀರ್ಷಿಕೆ ನೀಡಿದೆ.

ಇದನ್ನೂ ಓದಿ: Viral Video: ಹರಿಯುತ್ತಿರುವ ನದಿಯನ್ನು ಎಚ್ಚರಿಕೆಯಿಂದ ದಾಟಿದ ಆಡಿನ ಹಿಂಡು; ಜೀವನದ ಪಾಠ ಕಲಿಸುವ ವಿಡಿಯೋ ವೈರಲ್

ವಿಡಿಯೋ ವೀಕ್ಷಣೆ ಮಾಡಿದ ಜಾಲತಾಣ ಬಳಕೆದಾರರೊಬ್ಬರು, ಭಯಾನಕವಾಗಿದೆ ಎಂದಿದ್ದಾರೆ. ಮತ್ತೊಬ್ಬರು ತಮಾಷೆಯಾಗಿ “ಏಕೆ ಎಂದು ನನಗೆ ತಿಳಿದಿಲ್ಲ, ಆದರೆ ನೀರಾನೆ ದಾಳಿ ಅಗುತ್ತಿದ್ದಂತೆ ಸಿಂಹವು ಮತ್ತೆ ದಡಕ್ಕೆ ಓಡುತ್ತಿರುವ ದೃಶ್ಯವು ನಿಜವಾಗಿಯೂ ನನ್ನನ್ನು ಛಿದ್ರಗೊಳಿಸುತ್ತದೆ” ಎಂದಿದ್ದಾರೆ.

ಬಿಬಿಸಿ ಪ್ರಕಾರ, ನೀರಾನೆ ಪ್ರಪಂಚದ ಅತ್ಯಂತ ದೊಡ್ಡ ಭೂ ಸಸ್ತನಿಯಾಗಿದೆ. ಇದು ಆಫ್ರಿಕಾದಲ್ಲಿ ವರ್ಷಕ್ಕೆ ಅಂದಾಜು 500 ಜನರನ್ನು ಕೊಲ್ಲುತ್ತದೆ. ನೀರಾನೆ ಆಕ್ರಮಣಕಾರಿ ಜೀವಿಗಳಾಗಿದ್ದು, ಅವು ತುಂಬಾ ಚೂಪಾದ ಹಲ್ಲುಗಳನ್ನು ಹೊಂದಿವೆ. ಅವು ಸಿಂಹಗಳಿಗಿಂತ ಎರಡು ಪಟ್ಟು ಮಾರಕವಾಗಿವೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: Viral Video: ಮಳೆಯ ನೀರು ತಾಗಬಾರದೆಂದು ತಂಗಿಯನ್ನು ಬೆನ್ನ ಮೇಲೆ ಕೂರಿಸಿ ರಸ್ತೆ ದಾಟಿಸಿದ ಅಣ್ಣ; ವಿಡಿಯೋ ವೈರಲ್​

Follow Us
TV9 Web
TV9 Web

TV9 Kannada

Read More
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಚಿತ್ರರಂಗದಲ್ಲಿ ಮೂರು ದಶಕ: ಕಿಚ್ಚನಿಗೆ ರಿಷಬ್ ಶುಭಾಶಯ
ಚಿತ್ರರಂಗದಲ್ಲಿ ಮೂರು ದಶಕ: ಕಿಚ್ಚನಿಗೆ ರಿಷಬ್ ಶುಭಾಶಯ
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್