Viral Video: ಕಿಡ್ನ್ಯಾಪ್​ ಆಗುವುದನ್ನು ತಪ್ಪಿಸಿ ಯುವತಿಯನ್ನು ರಕ್ಷಿಸಿದ ಬೀದಿ ನಾಯಿ

|

Updated on: Jul 02, 2023 | 10:54 AM

ನಾಯಿ ನಿಷ್ಠಾವಂತ ಪ್ರಾಣಿ ಎಂಬುದರಲ್ಲಿ ಎರಡು ಮಾತಿಲ್ಲ, ತಮ್ಮ ಮಾಲಿಕರನ್ನು ರಕ್ಷಿಸಲು ನದಿಗೆ ಬೇಕಾದರೂ ಯಾವುದೇ ಅಂಜಿಕೆಯಿಲ್ಲದೆ ಧುಮುಕುತ್ತವೆ.

Viral Video: ಕಿಡ್ನ್ಯಾಪ್​ ಆಗುವುದನ್ನು ತಪ್ಪಿಸಿ ಯುವತಿಯನ್ನು ರಕ್ಷಿಸಿದ ಬೀದಿ ನಾಯಿ
ಅಪಹರಣ
Follow us on

ನಾಯಿ ನಿಷ್ಠಾವಂತ ಪ್ರಾಣಿ ಎಂಬುದರಲ್ಲಿ ಎರಡು ಮಾತಿಲ್ಲ, ತಮ್ಮ ಮಾಲಿಕರನ್ನು ರಕ್ಷಿಸಲು ನದಿಗೆ ಬೇಕಾದರೂ ಯಾವುದೇ ಅಂಜಿಕೆಯಿಲ್ಲದೆ ಧುಮುಕುತ್ತವೆ. ಹಾಗೆಯೇ ಬೀದಿ ನಾಯಿಯೊಂದು ಯುವತಿ ಕಿಡ್ನ್ಯಾಪ್ ಆಗುವುದನ್ನು ತಪ್ಪಿಸಿ ಆಕೆಗೆ ರಕ್ಷಣೆ ನೀಡಿರುವ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾಳೆ. ಆಗ ಕಾರೊಂದು ಆಕೆಯನ್ನು ಹಿಂಬಾಲಿಸುತ್ತದೆ. ಹುಡುಗಿಯ ಮುಂದೆ ನಿಂತು ಇನ್ನೇನು ಕಾರಿಂದ ಇಳಿದು ಆಕೆಯನ್ನು ಅಪಹರಿಸಬೇಕು ಎನ್ನುವಷ್ಟರಲ್ಲಿ ನಾಯಿ ಕೂಗುತ್ತಾ ಗಾಡಿಯನ್ನು ಹಿಂಬಾಲಿಸಲು ಪ್ರಯತ್ನಿಸುತ್ತೆ.

ಮತ್ತಷ್ಟು ಓದಿ: ಕುದಿಯುತ್ತಿರುವ ಹಾಲಿನಲ್ಲಿ ಹಸುಗೂಸಿನ ಮುಖ ತೊಳೆದ ಅರ್ಚಕ, ಇದೆಂತಹ ಸಂಪ್ರದಾಯ ಎಂದ ನೆಟ್ಟಿಗರು

ಸ್ವಲ್ಪ ದೂರದವರೆಗೆ ನಾಯಿ ಹೋಗಿ ವಾಪಸಾಗುತ್ತದೆ. ಆದರೆ ಯುವತಿಗೆ ಏನಾಗುತ್ತಿದೆ ಎಂದು ಅರಿಯದಂತಾಗಿ ನಿಂತಲೇ ನಿಂತು ಬಿಡುತ್ತಾಳೆ. ಕೊನೆಗೆ ಜೋರಾಗಿ ಅಳಲು ಪ್ರಾರಂಭಿಸುತ್ತಾಳೆ ಅಲ್ಲಿಂದ ಹೊರಟು ಹೋಗುತ್ತಾಳೆ.

ಮುಂದೇನಾಯಿತು ಎಂಬುದರ ಬಗ್ಗೆ ಮಾಹಿತಿ ಇಲ್ಲ, ಆದರೆ ತನಗೆ ಪರಿಚಯವಿಲ್ಲದಿದ್ದರೂ ಆ ನಾಯಿ ಯುವತಿಯನ್ನು ಕಾಪಾಡಿದ ಬಗೆಗೆ ಎಲ್ಲರೂ ಹರ್ಷ ವ್ಯಕ್ತಪಡಿಸಿದ್ದಾರೆ.

 

ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ