ಜನರ ಜೀವನ್ನು ತೆಗೆಯುವ ಕೆಲವೊಂದು ಸಾಧನಗಳು ಕೆಲವೊಮ್ಮೆ ಜೀವವನ್ನು ಕೂಡ ಉಳಿಸುತ್ತದೆ. ಇದಕ್ಕೆ ನಿದರ್ಶನವೆಂಬಂತೆ, iPhone 11 Pro ಉಕ್ರೇನಿಯನ್ ಸೈನಿಕನೊಬ್ಬ ಜೀವ ಉಳಿಸಿದೆ. ರಷ್ಯಾ ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ನಡುವೆ ಉಕ್ರೇನ್ ಸೈನಿಕನ ಮೇಲೆ ಗುಂಡು ಹಾರಿಸಿದಾಗ ಐಫೋನ್ ಬುಲೆಟ್ ಪ್ರೂಫ್ನಂತೆ ಕಾಣಿಸಿಕೊಂಡಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ. ಸೈನಿಕನ ಬ್ಯಾಗ್ನಲ್ಲಿದ್ದ ಐಫೋನ್ಗೆ ಗುಂಡು ತಗುಲಿ ಅದರಲ್ಲೇ ಸಿಲುಕಿಕೊಂಡಿರುವುದನ್ನು ವಿಡಿಯೋ ತೋರಿಸುತ್ತದೆ.
ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿವೊಂದರಲ್ಲಿ ಹಂಚಿಕೊಳ್ಳಲಾಗಿದ್ದು, 3,000 ಕ್ಕೂ ಹೆಚ್ಚು ಅಪ್‌ವೋಟ್‌ಗಳನ್ನು ಮತ್ತು ಹಲವಾರು ಕಾಮೆಂಟ್‌ಗಳನ್ನು ಗಳಿಸಿದೆ. ಬಳಕೆದಾರನೊಬ್ಬ ತಮಾಷೆಯಾಗಿ ಕಾಮೆಂಟ್ ಮಾಡಿ, “ದಿನಕ್ಕೊಂದು ಸೇಬು ವೈದ್ಯರನ್ನು ದೂರವಿಡುತ್ತದೆ!” ಎಂದು ಹೇಳಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ, “ಐಫೋನ್‌ಗಳು ಅಂತಿಮವಾಗಿ ಏನಾದರೂ ಒಳ್ಳೆಯದು! ಅವರು ಬದುಕುಳಿದರು ಎಂದು ಸಂತೋಷವಾಗಿದೆ” ಎಂದಿದ್ದಾರೆ. ಮೂರನೆಯವರು ಸಲಹೆ ನೀಡುತ್ತಾ, “ಸ್ಮಾರ್ಟ್‌ಫೋನ್‌ನಲ್ಲಿ ಬಳಸಿದ ವಸ್ತುಗಳೊಂದಿಗೆ ಬುಲೆಟ್ ಪ್ರೂಫ್ ಅನ್ನು ಏಕೆ ರಚಿಸಬಾರದು? ಇದು ಹೆಚ್ಚು ಹಗುರವಾಗಿರುತ್ತದೆ!” ಎಂದಿದ್ದಾರೆ.
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವು ಅಂತ್ಯಗೊಳ್ಳುವ ಲಕ್ಷಣಗಳನ್ನು ತೋರಿಸುತ್ತಿರುವ ಸಮಯದಲ್ಲಿ ಈ ವಿಡಿಯೋ ಬಂದಿದೆ. ಆದರೆ ನಿರ್ದಿಷ್ಟವಾಗಿ ಯಾವ ದಿನಾಂಕದಂದು ಈ ಘಟನೆ ನಡೆದಿದೆ ಎಂದು ತಿಳಿದುಬಂದಿಲ್ಲ. ಶನಿವಾರ, ರಷ್ಯಾದ ಪಡೆಗಳು ದಕ್ಷಿಣ ಉಕ್ರೇನಿಯನ್ ನಗರವಾದ ನಿಕೋಪೋಲ್ ಮೇಲೆ ಶೆಲ್ ದಾಳಿ ಮಾಡಿತು. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಇಬ್ಬರು ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ ಎಂದು ಉಕ್ರೇನಿಯನ್ ತುರ್ತು ಸೇವೆಗಳು ತಿಳಿಸಿವೆ.
ಶುಕ್ರವಾರ, ಡೊನೆಟ್ಸ್ಕ್‌ನ ಪೂರ್ವ ಪ್ರದೇಶದ 10 ಸ್ಥಳಗಳಲ್ಲಿ ಶೆಲ್‌ಗಳ ಸರಣಿ ದಾಳಿಯಲ್ಲಿ ಎಂಟು ಜನರು ಸಾವನ್ನಪ್ಪಿದ್ದು, 13 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಘೋಷಿಸಿತು. ಅದಕ್ಕೂ ಒಂದು ದಿನ ಮೊದಲು, ಕಪ್ಪು ಸಮುದ್ರದಲ್ಲಿ ರಷ್ಯಾದ ಜಲಾಂತರ್ಗಾಮಿ ನೌಕೆಯಿಂದ ಉಡಾವಣೆಯಾದ ಕಲಿಬ್ರ್ ಕ್ರೂಸ್ ಕ್ಷಿಪಣಿಗಳು ವಿನ್ನಿಟ್ಸಿಯಾದಲ್ಲಿನ ಕಚೇರಿ ಕಟ್ಟಡಕ್ಕೆ ಅಪ್ಪಳಿಸಿವೆ ಎಂದು ಕೈವ್ ಮಾಹಿತಿ ನೀಡಿದೆ. ಘಟನೆಯಲ್ಲಿ ಕನಿಷ್ಠ 23 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Published On - 3:37 pm, Mon, 18 July 22