Viral Video : ಮಕ್ಕಳ ಯಾವ ಭಾವವೂ ಚೆಂದವೇ. ಎಂಥವರ ಮನಸ್ಸನ್ನೂ ಕ್ಷಣಾರ್ಧದಲ್ಲಿ ಮನಸ್ಸನ್ನು ಅರಳಿಸಿಬಿಡುತ್ತದೆ. ಹಾಗಾಗಿಯೇ ಛಾಯಾಗ್ರಾಹಕರು ಮಕ್ಕಳ ಫೋಟೋ, ವಿಡಿಯೋ ತೆಗೆಯಲು ಸದಾ ಕಾಯುತ್ತಿರುತ್ತಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಪಾಕಿಸ್ತಾನದ ಸ್ಕರ್ದೂ ಕಣಿವೆಯಲ್ಲಿ (Skardu Valley) ತನ್ನ ಅಣ್ಣನೊಂದಿಗೆ ಕಟ್ಟಿಗೆ ಆಯಲು ಬಂದ ಈ ಪುಟ್ಟಿಯ ವಿಡಿಯೋ ಮಾಡಿದ್ದಾರೆ ಪಾಕಿಸ್ತಾನಿ ಛಾಯಾಗ್ರಾಹಕ ಇಮ್ತಿಯಾಝ್ ಹುಸೇನ್.
ಹಿಮದಿಂದ ಆವೃತವಾಗಿರುವ ಕಣಿವೆಯಲ್ಲಿ ಎಳೆಬಿಸಿಲಿನಲ್ಲಿ ಪುಟ್ಟಪುಟ್ಟ ಹೆಜ್ಜೆಗಳನ್ನಿಟ್ಟುಕೊಂಡು ಕಟ್ಟಿಗೆ ಆರಿಸುತ್ತಿರುವ ಈ ಹೆಣ್ಣುಮಗು ಪುಟ್ಟದೇವತೆಯಂತೆ ಕಂಗೊಳಿಸುತ್ತಿದೆ. ಈಕೆಯ ಹೆಸರು ಜೈನಾಬ್. ಚಳಿಗಾಲದಲ್ಲಿ ಮೈಕಾಯಿಸಿಕೊಂಡು ಬೆಚ್ಚಗಿರಲು ಕಟ್ಟಿಗೆಯನ್ನು ಸಂಗ್ರಹಿಸುತ್ತಿರಬೇಕು.
ಇದನ್ನು ಓದಿ : ಹೆಂಡತಿಯನ್ನು ಕೊಲ್ಲಲು ಆಕೆಯ ಮನೆಗೆ ಟ್ರಕ್ ನುಗ್ಗಿಸಿದ ಗಂಡ; ವೈರಲ್ ಆದ ವಿಡಿಯೋ
ಈಗಾಗಲೇ ಸುಮಾರು 25,000 ಜನರು ಈ ವಿಡಿಯೋ ನೋಡಿದ್ದಾರೆ. 3,000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಹಿಮಗಾಲದಲ್ಲಿ ನಾನು ಕಂಡ ಅತೀ ಮುದ್ಧಾದ ವಿಡಿಯೋ ಇದು ಎಂದಿದ್ದಾರೆ ಅನೇಕರು. ಇದೊಂದು ವಿಡಿಯೋ ಸಾಕು ಇಡೀ ದಿನ ನನ್ನನ್ನು ಖುಷಿಯಾಗಿರಲು ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : ಡೊಲ್ಚೆ ಆ್ಯಂಡ್ ಗಬಾನಾದ ಈ ಮಂಗನ ಟೋಪಿಗೆ ಬರೀ ರೂ. 40,000
ಅಬ್ಬಾ ವನದೇವತೆಯೇ ಇರಬೇಕು ಈ ಮಗು ಎಂದಿದ್ಧಾರೆ ಮಗದೊಬ್ಬರು. ಹಾಗೇ ನಡೆದುಕೊಂಡು ಪರದೆಯಿಂದ ಹಾರಿ ನಮ್ಮ ಮನೆಗೆ ಬಂದುಬಿಡು ಪುಟ್ಟಾ ಎಂದು ಇನ್ನೊಬ್ಬರು ಹೇಳಿದ್ದಾರೆ. ಇಂಥ ಚೆಂದದ ವಿಡಿಯೋಗೆ ಧನ್ಯವಾದ ಫೋಟೋಗ್ರಾಫರ್ ಎಂದು ಅನೇಕರು ಹೇಳಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ