ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ವ್ಯಕ್ತಿಯೊಬ್ಬ ಬರೀ ಮೈಯಲ್ಲಿ ರಸ್ತೆಯಲ್ಲಿ ಉರುಳಿಕೊಂಡು ಮೈಮೇಲೆ 1,000 ದೂರು ಪುಟಗಳಿಂದ ಮಾಡಿದ ಹಾರವನ್ನು ಧರಿಸಿ ಜಿಲ್ಲಾಧಿಕಾರಿ ಕಚೇರಿಗೆ ಬಂದಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಏಳು ವರ್ಷಗಳಿಂದ ಮುಕೇಶ್ ಪ್ರಜಾಪತಿ ಎಂಬಾತ ತಮ್ಮ ಗ್ರಾಮದಲ್ಲಿನ ಭ್ರಷ್ಟಾಚಾರದ ಬಗ್ಗೆ ದೂರು ನೀಡಲು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡುತ್ತಿದ್ದರು, ಆದರೆ ಪ್ರತಿ ಭೇಟಿಯು ಪೊಳ್ಳು ಭರವಸೆಗಳನ್ನು ನೀಡಿತು. ಯಾವುದೇ ಕ್ರಮ ಕೈಗೊಳ್ಳದ ಕಾರಣ ಹತಾಶೆಗೊಂಡ ಅವರು ಇದೀಗ ಈ ರೀತಿಯಾಗಿ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ಬ್ಯಾಂಕ್‌ನಿಂದ ಬಿಡಿಸಿ ತಂದ ಚಿನ್ನ, ನಡುರಸ್ತೆಯಲ್ಲೇ ಕಳ್ಳತನ ; ಸಿಸಿಟಿವಿ ದೃಶ್ಯ ಇಲ್ಲಿದೆ ನೋಡಿ
ಮಂಗಳವಾರ ಪ್ರಜಾಪತಿ ರಸ್ತೆಯಲ್ಲಿ ಉರುಳಿಕೊಂಡು ಬರುವ ಮೂಲಕ ಜಿಲ್ಲಾಧಿಕಾರಿ ಕಚೇರಿ ಪ್ರವೇಶಿಸಿದ್ದಾರೆ. ಮಧ್ಯಪ್ರದೇಶದ ಮುಖ್ಯಮಂತ್ರಿಯನ್ನುದ್ದೇಶಿಸಿ ಮಾತನಾಡಿದ ಪ್ರಜಾಪತಿ, “ಮೋಹನ್ ಯಾದವ್ ಅವರೇ.., ದಯವಿಟ್ಟು ನನಗೆ ನ್ಯಾಯ ಕೊಡಿ. ಏಳು ವರ್ಷಗಳಿಂದ ಬರೀ ಭರವಸೆಯನ್ನು ಮಾತ್ರ ಕೇಳಿಕೊಂಡು ಬಂದಿದ್ದೇನೆ. ಈಗ ನಾನು ನಿಮ್ಮ ಮುಂದೆ ನ್ಯಾಯಕ್ಕಾಗಿ ಬೇಡುತ್ತಿದ್ದೇನೆ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:54 am, Wed, 4 September 24