ವೈರಲ್ ವೀಡಿಯೋ: ಇಂಟರ್ ನೆಟ್ ಲೋಕದಲ್ಲಿ ಹಂಚಿಕೊಳ್ಳುವ ವೀಡಿಯೊಗಳು ಬೆಚ್ಚಿ ಬೀಳಿಸುವಂತಿದ್ದರೆ ಇನ್ನು ಕೆಲವು ವಿಡಿಯೋಗಳು ತಲೆ ಕೆಡಿಸಿಕೊಳ್ಳುವಂತೆ ಮಾಡುತ್ತವೆ. ಇನ್ನೂ ಕೆಲವು ವಿಡಿಯೋಗಳು ನಂಬಲು ಸಾಧ್ಯವಾಗದೇ ಇರುವಂತಹದ್ದಕ್ಕೆ. ಇದೀಗ ಇಂತಹ ಒಂದು ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ, ಈ ವಿಡಿಯೋ ನೋಡಿದ ನಂತರ ನಿಮ್ಮ ಮನಸ್ಸು ಒಂದು ನಿಮಿಷ ಕಂಗೆಡುವುದು ಖಚಿತ.
ವೈರಲ್ ಆಗುತ್ತಿರುವ ಈ ವಿಡಿಯೋದ ಆರಂಭದಲ್ಲಿ ವ್ಯಕ್ತಿಯೊಬ್ಬರ ಕೈಯಲ್ಲಿ ನೇರಳೆ ಬಣ್ಣದ ಹೂವು ಕಾಣಿಸುತ್ತಿದೆ. ನಂತರ ಆ ವ್ಯಕ್ತಿ ತನ್ನ ಕೈಯಿಂದ ಹೂವನ್ನು ಕೆಳಗೆ ಬಿಡುತ್ತಾನೆ ಮತ್ತು ತಕ್ಷಣ ಹೂವು ಅಲ್ಲೇ ಸ್ಟಕ್ ಆದ ಹಾಗೆ ಕಾಣುತ್ತದೆ. ನಂತರ ಜೂಮ್ ಆದಾಗ ಆ ವ್ಯಕ್ತಿ ಹೂವನ್ನು ಒರೆಸುತ್ತಾನೆ, ಆಗ ಅದು ರಂಗೋಲಿಯಾಗಿ ಬದಲಾಗಿರುವುದು ಗೊತ್ತಾಗುತ್ತದೆ. ಹೂವಿನ ರಂಗೋಲಿ ಒರಸಿದ ನಂತರ ಕೈಯನ್ನು ಮುಷ್ಠಿ ಮಾಡುತ್ತಾನೆ. ಈ ಮುಷ್ಟಿಯ ಮಧ್ಯದ ಬೆರಳು ಮರದ ಕಾಂಡವಾಗಿ ಬದಲಾಗುತ್ತದೆ.
ಇದರ ಮುಂದುವರಿದ ಭಾಗವಾಗಿ ಆ ಮರದ ಕಾಂಡ ಮಧ್ಯೆ ಸಣ್ಣ ರಂದ್ರ ಇದ್ದಂತೆ ಕಾಣುತ್ತದೆ. ನಂತರ ವಿಡಿಯೋ ಜೂಮ್ ಆದಾಗ ಅದು ಸಣ್ಣ ಚೆಂಡು ಆಗಿರುತ್ತದೆ. ಆ ಚೆಂಡನ್ನು ವ್ಯಕ್ತಿ ಮೇಲಕ್ಕೆ ಎಸೆಯುತ್ತಾನೆ ಮತ್ತು ಅದು ಇನ್ನೇನೋ ಆಗಿ ಹಲಗೆಯೊಂದು ಕಾಣಿಸುತ್ತದೆ. ಈ ಹಲಗೆಯಂತಿರುವ ವಸ್ತುವನ್ನು ಎಸೆದಾಗ ಅದು ಇಟ್ಟಿಗೆಯಾಗಿ ಮಾರ್ಪಾಡು ಆಗುತ್ತದೆ. ಜಾದು ರೀತಿಯಲ್ಲಿರುವ ಈ ವಿಡಿಯೋ ನೋಡಿದ ನಂತರ ಗೊಂದಲಗಳು ಏರ್ಪಟ್ಟು ನಿಮ್ಮ ತಲೆಯಲ್ಲಿ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದ್ದಿರುವುದು ಖಂಡಿತ.
ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ‘ನನ್ನ ಮೆದುಳು ಬುದ್ದಿಮತ್ತೆಯನ್ನು ನಿಲ್ಲಿಸಿದೆ’ ಎಂದು ಶೀರ್ಷಿಕೆಯನ್ನು ಬರೆಯಲಾಗಿದೆ. ಈ ವಿಡಿಯೋಗೆ ಇಲ್ಲಿಯವರೆಗೆ 6 ಲಕ್ಷಕ್ಕೂ ಹೆಚ್ಚು ಲೈಕ್ಗಳು ಬಂದಿದ್ದು, ನೆಟ್ಟಿಗರು ಇದು ಹೇಗೆ ಸಾಧ್ಯ ಎಂದು ತಲೆಕೆಡಿಸಿಕೊಳ್ಳುತ್ತಿದ್ದಾರೆ.